ಕವಟಗಿಮಠ ಮಗಳ ಮದುವೆಗೆ ಜನರನ್ನ ಸೇರಿಸದೇ ಇರೋದೆ ಒಳ್ಳೆಯದು: ಸಿಎಂ

By Suvarna News  |  First Published Mar 15, 2020, 12:56 PM IST

ರಾಜ್ಯದಲ್ಲಿ ಕರೋನಾ ವೈರಸ್  ಭೀತಿ| ಕರ್ನಾಟಕದಲ್ಲಿ  ಸರ್ಕಾರದ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇ ಅದನ್ನ ತೆಗೆದುಕೊಂಡಿದೆ| ಜನರು ಭಯ ಪಡಬೇಕಾಗಿಲ್ಲ|  ರಾಜ್ಯದಲ್ಲಿ ಆರು ಜನರ ಮೇಲೆ ಕರೋನಾ ವೈರಸ್ ಶಂಕೆ| ನೂರು ಜನರ ಮೇಲೆ ನಿಗಾ| 


ಬೆಳಗಾವಿ(ಮಾ.15): ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಗಳ ಅದ್ಧೂರಿ ಮದುವೆಗೆ ಸಾಕಷ್ಟು ಜನ ಸೇರಿಸದೇ ಇರೋದು ಒಳ್ಳೆಯದು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.  

ಇಂದು(ಭಾನುವಾರ) ಮಹಾಂತೇಶ ಕವಟಗಿಮಠ ಮಗಳ ಮದುವೆ ಸಮಾರಂಭದಲ್ಲಿ ಭಾಗಿಯಾದ ಬಳಿಕ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಯಡಿಯೂರಪ್ಪ, ಕೊರೊನಾ ಬಗ್ಗೆ ಎಲ್ಲಾ ರೀತಿಯ ಪೂರ್ವಭಾವಿ ಸಿದ್ಧತೆ ಮಾಡಿದ್ದೇವೆ. 100 ಜನರ ಮೇಲೆ ವಿಶೇಷ ಗಮನ ಕೊಟ್ಟಿದ್ದೇವೆ, ಒಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ ಐದು ಜನರು ಹೊರದೇಶದಿಂದ ಬಂದವರು ಹಾಗೂ ಅವರ ಕುಟುಂಬದವರು ಎಲ್ಲಾ ಕಂಟ್ರೋಲ್‌ನಲ್ಲಿದೆ ಆದರೂ ಒಂದು ವಾರ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೆಚ್ಚು ಜನ ಸೇರಸಬೇಡಿ ಅಂತಾ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

Latest Videos

undefined

ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆಗೆ ನಿಟ್ಟುಸಿರು ಬಿಟ್ಟ ಕಲಬುರಗಿ ಮಂದಿ!

ಕಲಬುರಗಿಯಲ್ಲಿ ಎಲ್ಲಾ ಕಂಟ್ರೋಲ್‌ನಲ್ಲಿದೆ, ಆರೋಗ್ಯ ಸಚಿವ ಶ್ರೀರಾಮುಲು ಅಲ್ಲೇ ಇದ್ದಾರೆ. ರಾಜ್ಯದ ಯಾವುದೇ ಭಾಗದಲ್ಲಿ ಆತಂಕಗೊಳ್ಳುವ ಪರಿಸ್ಥಿತಿ ಇಲ್ಲ. ಆದರೂ ನಾವು ಮುಂಜಾಗ್ರತೆಯಾಗಿ ಎಚ್ಚರಿಕೆ ವಹಿಸುತ್ತಿದ್ದೇವೆ. ಒಂದು ವಾರದ ಬಳಿಕ ದಿನನಿತ್ಯದ ರಿಪೋರ್ಟ್ ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಎಲ್ಲಾ ಏರ್‌ಪೋರ್ಟ್‌ ಗಳಲ್ಲಿ ಪ್ರತಿಯೊಬ್ಬರನ್ನೂ ಚೆಕ್ ಮಾಡಲಾಗುತ್ತಿದೆ. ಗಾಬರಿಯಾಗೋ ಅಗತ್ಯ ಇಲ್ಲ ಸರ್ಕಾರ ಎಲ್ಲಾ ರೀತಿ ಗಮನ ಕೊಟ್ಟಿದೆ ಎಂದು ಹೇಳಿದ್ದಾರೆ.
 

click me!