ಯಾದಗಿರಿಯಲ್ಲಿ ಶ್ರೀಗಂಧ ಕಳ್ಳತನ ಮಾಡಿದವರು ಶಿವಮೊಗ್ಗ ಆಸುಪಾಸು ಇದ್ದಾರೆಂಬುದು ಹಾಗೂ ಮೈಸೂರು ಮತ್ತು ಕೇರಳ ರಾಜ್ಯಕ್ಕೆ ಶ್ರೀಗಂಧ ದಾಸ್ತಾನು ಸಾಗಿಸಿರಬಹುದಾದ ಅನುಮಾನಗಳ ಹಿನ್ನೆಲೆಯಲ್ಲಿ, ಶಿವಮೊಗ್ಗಕ್ಕೆ ತೆರಳಿರುವ ತನಿಖಾಧಿಕಾರಿಗಳ ತಂಡ, ಅಲ್ಲಿನ ಶಿರಾಳಕೊಪ್ಪ ಸಮೀಪದಲ್ಲಿನ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಯಾದಗಿರಿ(ನ.16): ಅರಣ್ಯ ಇಲಾಖೆಯವರು ಜಪ್ತಿ ಮಾಡಿಟ್ಟಿದ್ದ 150 ಕೆಜಿ ಶ್ರೀಗಂಧವನ್ನು ಅರಣ್ಯಾಧಿಕಾರಿ ಕಚೇರಿಯಿಂದಲೇ ಕಳವು ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಯಾದಗಿರಿಯಲ್ಲಿ ಶ್ರೀಗಂಧ ಕಳ್ಳತನ ಮಾಡಿದವರು ಶಿವಮೊಗ್ಗ ಆಸುಪಾಸು ಇದ್ದಾರೆಂಬುದು ಹಾಗೂ ಮೈಸೂರು ಮತ್ತು ಕೇರಳ ರಾಜ್ಯಕ್ಕೆ ಶ್ರೀಗಂಧ ದಾಸ್ತಾನು ಸಾಗಿಸಿರಬಹುದಾದ ಅನುಮಾನಗಳ ಹಿನ್ನೆಲೆಯಲ್ಲಿ, ಶಿವಮೊಗ್ಗಕ್ಕೆ ತೆರಳಿರುವ ತನಿಖಾಧಿಕಾರಿಗಳ ತಂಡ, ಅಲ್ಲಿನ ಶಿರಾಳಕೊಪ್ಪ ಸಮೀಪದಲ್ಲಿನ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಅಂತಾರಾಜ್ಯ ಕಳ್ಳರ ತಂಡದ ಕೈವಾಡ ಇದರಲ್ಲಡಗಿದ್ದು, ಶ್ರೀಗಂಧ ಕಳವು ತಡೆಯಲು ಹೋಗಿದ್ದ ಅರಣ್ಯರಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿಯೊಬ್ಬ ಸಹ ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.
undefined
ಯಾದಗಿರಿಯಲ್ಲಷ್ಟೇ ಅಲ್ಲ, ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ರಾಯಚೂರಿನಲ್ಲಿಯೂ ನಡೆದಿದ್ದ ಸುಮಾರು 600 ಕೆಜಿಗಳಷ್ಟು ಗಂಧದ ಕಳವು ಪ್ರಕರಣ ಹಾಗೂ ವಿಜಯಪುರ ಸಮೀಪ ಕಳವು ಸಂಚಿನ ಪ್ರಕರಣದಲ್ಲಿಯೂ ಶಿವಮೊಗ್ಗದ ಕೆಲವರು ಭಾಗಿಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು, ಅ.2 ರಂದು ಯಾದಗಿರಿಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಜಪ್ತಿ ಮಾಡಿಡಲಾಗಿದ್ದ 150 ಕೆಜಿಯಷ್ಟು ಶ್ರೀಗಂಧ ದಾಸ್ತಾನನ್ನು ಕಳವು ಮಾಡಲಾಗಿತ್ತು. ಈ ಪ್ರಕರಣ ಮುಚ್ಚುವ ಭರದಲ್ಲಿ ಬೇರೆಡೆ ಮತ್ತೇ ಶ್ರೀಗಂಧ ಗಿಡಗಳ ಕಡಿದು, ಇದಕ್ಕೆ ತೇಪೆ ಹಚ್ಚುವ ಯತ್ನ ನಡೆದಿತ್ತು ಎಂಬ ಆರೋಪಗಳಿದ್ದವು.
"ಶ್ರೀಗಂಧ ಕಳವು ಮರೆ ಮಾಚಲು ಹೊಸ ಮರಕಡಿದು ತಂದಿಟ್ಟರು" ಶೀರ್ಷಿಕೆಯಡಿ ಕನ್ನಡಪ್ರಭ ಅ.7 ರಂದು ವಿಶೇಷ ವರದಿ ಪ್ರಕಟಿಸಿ, ಸಂಚಲನ ಮೂಡಿಸಿತ್ತು. ವರದಿ ನಂತರ ಕಳವು ಪ್ರಕರಣದ ದೂರು ನಗರ ಠಾಣೆಯಲ್ಲಿ ದಾಖಲಾಗಿದ್ದರೆ, ಮತ್ತೊಂದೆಡೆ ಹೊಸ ಮರಕಡಿದ ಬಗ್ಗೆ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿತ್ತು.