ಕೊಡಗಿನ ಪವಿತ್ರ ತಲಕಾವೇರಿ ಕ್ಷೇತ್ರದಲ್ಲಿ ಪುಂಡಾಟ. ಗಲಭೆಯಲ್ಲಿ ಕೈ ಬೆರಳು ಮುರಿದುಕೊಂಡ ವ್ಯಕ್ತಿ. ಪೊಲೀಸ್ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿ
ಕೊಡಗು (ನ.16): ತಲಕಾವೇರಿ ಕ್ಷೇತ್ರದಲ್ಲಿ ಪ್ರವಾಸಿಗರು ಪುಂಡಾಟ ಮೆರೆದಿದ್ದು, ದೇವಾಲಯ ಸಮಿತಿ ಅಧ್ಯಕ್ಷರ ಮೇಲೆ ಹಲ್ಲೆಗೆ ಕೇರಳದ ಯುವಕರು ಯತ್ನಿಸಿದ್ದಾರೆ.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಮೇಲೆ ಹಲ್ಲೆಗೆ ಯತ್ನಿಸಿದ್ದು ಈ ವೇಳೆ ಜಗಳ ಬಿಡಿಸಲು ಹೋದ ಭಕ್ತಾಧಿಯ ಬೆರಳನ್ನು ಮುರಿದಿದ್ದಾರೆ.
undefined
ರಾಕೇಶ್ ದೇವಯ್ಯ ಎಂಬುವವರ ಕೈ ಬೆರಳು ಮುರಿಯಲಾಗಿದೆ. ನವೆಂಬರ್ 15ರಂದು ಸಂಜೆ ತಲಕಾವೇರಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಮಾಸ್ಕ್ ಹಾಕುವಂತೆ ಹೇಳಿದ್ದಕ್ಕೆ ಈ ಘರ್ಷಣೆ ನಡೆದಿದೆ.
ತಲಕಾವೇರಿ ಅರ್ಚಕ ನಾರಾಯಾಣಾಚಾರ್ ವಿರುದ್ಧ ಗಂಭೀರ ಆರೋಪ : ತನಿಖೆಗೆ ಆಗ್ರಹ ...
ಹುಡುಗಿಯರನ್ನು ಚುಡಾಯಿಸುತ್ತಿದ್ದರು ಎಂಬ ಆರೋಪದ ಹಿನ್ನೆಲೆ ಕ್ಷೇತ್ರದ ಸೆಕ್ಯೂರಿಟಿ ಸಿಬ್ಬಂದಿ ಎಚ್ಚರಿಕೆ ಕೊಟ್ಟಿದ್ದು ಇದಕ್ಕೂ ಕೇರ್ ಮಾಡದ ಪುಂಡರು ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದ್ದು, ದಾಂಧಲೆ ನಿರತ ಯುವಕರನ್ನು ವಶಕ್ಕೆ ಪಡೆದು ಪೊಲೀಸರು ಹತ್ತು ಮಂದಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.