ಚುನಾವಣೆ: ಕಾಂಗ್ರೆಸ್‌ ಪಕ್ಷದಲ್ಲಿ ಮೂಡಿದ ಒಡಕು

By Kannadaprabha News  |  First Published Apr 17, 2021, 12:18 PM IST

ಚುನಾವಣೆ  ವಿಚಾರವಾಗಿ ಕಾಂಗ್ರೆಸ್ ಮುಖಂಡರ ನಡುವೆಯೇ ಅಸಮಾಧಾನ ಭುಗಿಲೆದ್ದಿದೆ. ಬಿ ಫಾರಂ ನೀಡುವ ವಿಚಾರವಾಗಿ ಅಸಮಾಧಾನ ವ್ಯಕ್ತವಾಗಿದೆ. 


ಗುಡಿಬಂಡೆ (ಏ.17) :  ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂ​ಧಿಸಿದಂತೆ ಬಿ-ಫಾರಂ ನೀಡುವಲ್ಲಿ, ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ಕಡೆಗಣಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ರೆಬೆಲ್‌ ಆಗಿದ್ದಾರೆ ಎಂದು ಪ.ಪಂ. ಮಾಜಿ ಅಧ್ಯಕ್ಷ ಜಿ.ಎನ್‌. ದ್ವಾರಕನಾಥನಾಯ್ಡು ತಿಳಿಸಿದ್ದಾರೆ.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.27ರಂದು ಗುಡಿಬಂಡೆ ಪಟ್ಟಣ ಪಂಚಾಯತಿಯ 11 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನಿಂದ ಸುಮಾರು 60ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷದ ಬಿ-ಫಾರಂಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಪಟ್ಟಣದಲ್ಲಿನ ಕಾಂಗ್ರೆಸ್‌ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳದೇ, ಪಕ್ಕದ ಬಾಗೇಪಲ್ಲಿ ತಾಲೂಕಿನ ಕೆಲ ಮುಖಂಡರನ್ನು ಹಾಗೂ ಗುಡಿಬಂಡೆ ಪಟ್ಟಣದ ವಾರ್ಡ್‌ಗಳ ವ್ಯಾಪ್ತಿ ತಿಳಿಯದ, ಸ್ಥಳೀಯ ವಾಸ್ತವತೆ ತಿಳಿಯದ ಕೆಲ ಮುಖಂಡರನ್ನು ಕರೆಸಿಕೊಂಡು ಅಜ್ಞಾತ ಸ್ಥಳದಲ್ಲಿ ಅವರಿಗೆ ಬೇಕಾದವರಿಗೆ ಕಾಂಗ್ರೆಸ್‌ ಪಕ್ಷದ ಬಿ-ಫಾರಂ ನೀಡಿದ್ದಾರೆ. ಇದರಿಂದ ಪಟ್ಟಣದ ಮುಖಂಡರಿಗೆ ಅವಮಾನವಾಗಿದೆ. ಈ ಹಿನ್ನೆಲೆಯಲ್ಲಿ ನಾನು ನನ್ನ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

Tap to resize

Latest Videos

ಮೂರೂ ಕಡೆ ಕಾಂಗ್ರೆಸ್‌ಗೇ ಜಯ: ಡಿ.ಕೆ. ಶಿವಕುಮಾರ್‌ ..

ಮುಂದಿನ ದಿನಗಳಲ್ಲಿ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಹೋರಾಟದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ. ಗ್ರಾಮವಾರು ಸಮಿತಿಗಳನ್ನು ರಚಿಸಿ, ರಾರ‍ಯಲಿಗಳನ್ನು ನಡೆಸಿ, ಗುಡಿಬಂಡೆಯನ್ನು ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ತೊಡುತ್ತೇನೆ ಎಂದರು.

click me!