
ಸಕಲೇಶಪುರ (ಏ.17): ಪಟ್ಟಣದ ದೊಡ್ಡ ಕೆರೆಯಲ್ಲಿ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಗುರುವಾರ ಸಂಜೆ 4ರ ಸಮಯದಲ್ಲಿ ಇಬ್ಬರು ಕೆರೆಗೆ ಹಾರಿ ಪ್ರಾಣಬಿಟ್ಟಿರುವ ದುರ್ಘಟನೆ ಸಂಭವಿಸಿದೆ.
ಪಟ್ಟಣದ ಮಹೇಶ್ವರಿ ನಗರದ ಲಕ್ಷ್ಮಮ್ಮ(65) ಹಾಗೂ ಲಕ್ಷ್ಮೀಪುರಂ ಬಡಾವಣೆಯ ಉಮೇಶ್(52) ಆತ್ಮಹತ್ಯೆ ಮಾಡಿಕೊಂಡವರು.
ಮೃತ ದುರ್ದೈವಿ ಉಮೇಶ್ ಪಟ್ಟಣದ ಲೋಕೋಪಯೋಗಿ ಇಲಾಖೆಯ ಕಚೇರಿ ಸಮೀಪದಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದು ಲಕ್ಷ್ಮಮ್ಮ ಇವರ ಪಾನಿಪುರಿ ಅಂಗಡಿಯಲ್ಲೇ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದರು. ಇವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ ...
ಈ ಹಿಂದೆ ಇಬ್ಬರು ಪ್ರೇಮಿಗಳು, ಒಬ್ಬ ಅಡುಗೆ ಭಟ್ಟರು ಇದೇ ಕೆರೆಯಲ್ಲಿ ಒಂದು ವರ್ಷದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವತ್ತಿನ ಪ್ರಕರಣ ಸೇರಿದಂತೆ ಇದುವರೆಗೆ ಒಟ್ಟು ಐದು ಜನ ಈ ದೊಡ್ಡಕೆರೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಲೇಶಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.