Mysuru Dasara 2022: ಮೇಯರ್‌ ಶಿವಕುಮಾರ್‌ ನಗರ ಪ್ರದಕ್ಷಿಣೆ: ಅಧಿಕಾರಿಗಳಿಗೆ ತರಾಟೆ

By Govindaraj S  |  First Published Sep 14, 2022, 10:46 AM IST

ದಸರಾ ಹಿನ್ನೆಲೆಯಲ್ಲಿ ಮೇಯರ್‌ ಶಿವಕುಮಾರ್‌ ಅವರು ಮಂಗಳವಾರ ಬೆಳಗ್ಗೆ ನಗರ ಪ್ರದಕ್ಷಿಣೆ ಮಾಡಿದರಲ್ಲದೆ, ಅವ್ಯವಸ್ಥೆಗಳನ್ನು ಕಣ್ಣಾರೆ ನೋಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ನಗರದ ಫೈವ್‌ಲೈಟ್‌ ವೃತ್ತದಿಂದ ನಗರದ ಪ್ರದಕ್ಷಿಣೆ ಆರಂಭಿಸಿದರು.


ಮೈಸೂರು (ಸೆ.14): ದಸರಾ ಹಿನ್ನೆಲೆಯಲ್ಲಿ ಮೇಯರ್‌ ಶಿವಕುಮಾರ್‌ ಅವರು ಮಂಗಳವಾರ ಬೆಳಗ್ಗೆ ನಗರ ಪ್ರದಕ್ಷಿಣೆ ಮಾಡಿದರಲ್ಲದೆ, ಅವ್ಯವಸ್ಥೆಗಳನ್ನು ಕಣ್ಣಾರೆ ನೋಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ನಗರದ ಫೈವ್‌ಲೈಟ್‌ ವೃತ್ತದಿಂದ ನಗರದ ಪ್ರದಕ್ಷಿಣೆ ಆರಂಭಿಸಿದ ಅವರು, ವೃತ್ತದಲ್ಲಿ ಮ್ಯಾನ್‌ಹೋಲ್‌ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡರು. ಸಾರ್ವಜನಿಕರು ಈ ರಸ್ತೆಯಲ್ಲಿ ಗಲೀಜು ನೀರು ದಾಟಿ ಹೋಗಬೇಕಾಗಿದೆ ಎನ್ನುವ ದೂರಿಗೆ ಸ್ಪಂದಿಸಿದರಲ್ಲದೆ, ತಕ್ಷಣವೇ ದುರಸ್ತಿಪಡಿಸಿ ಲೀಕ್‌ ಆಗುವುದನ್ನು ತಪ್ಪಿಸಬೇಕು ಎಂದು ಸೂಚಿಸಿದರು.

ನಂತರ ಬಿಷಪ್‌ ಹೌಸ್‌ ಮಾರ್ಗದ ವೃತ್ತದಲ್ಲಿರುವ ಖಾಸಗಿ ಕಟ್ಟಡದ ಮಾಲೀಕರು ರಸ್ತೆಯಲ್ಲೇ ಕಾಂಪೌಂಡ್‌ ನಿರ್ಮಾಣ ಮಾಡಿರುವುದರಿಂದ ಜೋಡಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಮೇಯರ್‌ ಗಮನಕ್ಕೆ ತಂದರು. ಇರ್ವಿನ್‌ ರಸ್ತೆಯಲ್ಲಿ ಮಾಲೀಕರಿಗೆ ನೀಡಿರುವ ಪರಿಹಾರದ ಮೊತ್ತವನ್ನೇ ನಮಗೂ ಕೊಡುವಂತೆ ಕೇಳಿದ್ದು, ಈ ವಿಚಾರದಲ್ಲಿ ಹಲವಾರು ಬಾರಿ ಮಾತುಕತೆ ನಡೆಸಲಾಗಿದೆ. ಜಾಗ ಬಿಡಲು ಒಪ್ಪಿಲ್ಲ ಎಂದರು. ಸಂಬಂಧಿಸಿದ ಅಧಿಕಾರಿಗಳು, ಕಾನೂನು ತಜ್ಞರ ಸಲಹೆ ಪಡೆದು ಸಮಸ್ಯೆ ಇತ್ಯರ್ಥಪಡಿಸಿ ಉಳಿದ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Tap to resize

Latest Videos

Mysuru Dasara 2022: ಜಂಬೂ ಸವಾರಿ ಆನೆ ಲಕ್ಷ್ಮೀಗೆ ಗಂಡು ಮರಿ: ಮೈಸೂರಿನಲ್ಲಿ ಸಂಭ್ರಮ

ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣದ ಎದುರಿನ ರಸ್ತೆಯಲ್ಲಿ ಫುಟ್‌ಪಾತ್‌ ನಿರ್ವಹಣೆ ಮಾಡದೆ ಇರುವುದು, ಕೆಲವು ಭಾಗಗಳಲ್ಲಿ ಟೈಲ್ಸ್‌ ಹಾಕದೆ ಇರುವುದು, ಗಲೀಜು ನೀರು ನಿಲ್ಲುತ್ತಿದ್ದರೂ ಗಮನಿಸಿದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಮೇಯರ್‌, ರಸ್ತೆಯಲ್ಲಿ ಯುಜಿಡಿ ನೀರು ನಿಂತಿದ್ದನ್ನು ವೀಕ್ಷಿಸಿದರು. ಮೈಸೂರು - ಬಿ.ಎನ್‌. ರಸ್ತೆಯ ಛತ್ರಿಮರದ ಬಳಿ ಮ್ಯಾನ್‌ಹೋಲ್‌ ರಿಪೇರಿ ಮಾಡಿದ್ದರೂ ಮುಚ್ಚದೇ ಹಾಗೆಯೇ ಬಿಟ್ಟಿದ್ದು ಕಂಡು ಬಂದಿದ್ದರಿಂದ ಯುಜಿಡಿ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು ಮೇಯರ್‌, ಯಾರಾದರೂ ಗಮನಿಸದೇ ಬಿದ್ದರೆ ಗತಿ ಏನು? ಬೈಕ್‌ ಸವಾರರು ಬಿದ್ದು ಪ್ರಾಣಾಪಾಯವಾದರೆ ಯಾರು ಹೊಣೆ? 

ಈ ರೀತಿ ತೆರೆದ ರೀತಿಯಲ್ಲಿ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪಾಲಿಕೆ ಉಪ ಆಯುಕ್ತೆ ಎಂ.ಜೆ. ರೂಪಾ ಅವರು ಕೂಡಲೇ ಮ್ಯಾನ್‌ಹೋಲ್‌ ಮುಚ್ಚಲಾಗುವುದು ಅಂತ ಹೇಳಿದರುನಂತರ ಸಂಗಮ್‌ ಚಿತ್ರಮಂದಿರ ರಸ್ತೆ, ಗಾಂಧಿಚೌಕ, ಸಿದ್ದಪ್ಪ ಚೌಕದಿಂದ ನಂಜುಮಳಿಗೆ ವೃತ್ತದ ತನಕ ಹದಗೆಟ್ಟಿರುವ ರಸ್ತೆಗಳನ್ನು ವೀಕ್ಷಿಸಿ, ಮಳೆ ನಿಂತ ಮೇಲೆ ಕಾಮಗಾರಿ ಆರಂಭಿಸಬೇಕು. ಅದೇ ರೀತಿ ಬಲ್ಲಾಳ್‌ ವೃತ್ತದಿಂದ ನ್ಯೂ ಕಾಂತರಾಜ್‌ ರಸ್ತೆ ತನಕ. ಪ್ರದಕ್ಷಿಣೆ ಹಾಕಿದರು. ರಸ್ತೆಗಳು ಹಾಳಾಗಿ ಗುಂಡಿಬಿದ್ದಿರುವುದನ್ನು ಸಾರ್ವಜನಿಕರು ವಿವರಿಸಿದ್ದರಿಂದ, ಮಳೆ ಬೀಳುತ್ತಿರುವುದರಿಂದ ಸಮಸ್ಯೆಯಾಗಿದೆ. 

3- 4 ದಿನಗಳಲ್ಲಿ ಡಾಂಬರೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು. ನಗರ ಪಾಲಿಕೆ ಸದಸ್ಯರಾದ ಎಂ. ಸತೀಶ್‌, ಎಂ.ಬಿ. ನಾಗರಾಜು, ವಾಣಿವಿಲಾಸ ನೀರು ನೀರು ಸರಬರಾಜು ಕಾರ್ಯಾಗಾರ ಕಾರ್ಯಪಾಲಕ ಎಂಜಿನಿಯರ್‌ ಸುವರ್ಣ, ಯುಜಿಡಿ ಇಇ ಸಿಂಧು, ಅಭಿವೃದ್ಧಿ ಅಧಿಕಾರಿ ಮಂಜುನಾಥ್‌ ಮೊದಲಾದವರು ಇದ್ದರು.

Mysore Dasara 2022: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆಗೆ ದಿನಾಂಕ ನಿಗದಿ

ದಸರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಹೃದಯ ಭಾಗದ ರಸ್ತೆಗಳನ್ನು ಸ್ವಚ್ಛವಾಗಿಡಬೇಕಿದೆ. ಅಲ್ಲಲ್ಲಿ ಯುಜಿಡಿ ಸಮಸ್ಯೆ, ಸ್ವಚ್ಛತೆ ಸಮಸ್ಯೆಗಳು ಕಂಡು ಬಂದಿದ್ದರಿಂದ ಎರಡು ದಿನಗಳಲ್ಲಿ ಸರಿಪಡಿಸಿ ಫೋಟೋ ಸಮೇತ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
- ಶಿವಕುಮಾರ್‌, ಮೇಯರ್‌

click me!