ಬಾಗಲಕೋಟೆ: ಐಡಿಬಿಐ ಬ್ಯಾಂಕ್‌ ಮೂಲಕ‌ ಸರ್ಕಾರಿ ಹಣ ವರ್ಗಾವಣೆ ಹಗರಣ, ಸಿಐಡಿ ತನಿಖೆ ಚುರುಕು

By Girish Goudar  |  First Published Aug 27, 2024, 6:28 PM IST

ಐಡಿಬಿಐ ಬ್ಯಾಂಕ್‌ನ ಮೂಲಕ‌ 33 ವಿವಿಧ ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದ್ದು, ಈ ಕುರಿತು ಬಾಗಲಕೋಟೆಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿತ್ತು. ಇದುವರೆಗೆ ಬಾಗಲಕೋಟೆಯ ಸಿಐಎನ್ ಕ್ರೈಂ ಠಾಣೆಯ ಪೊಲೀಸರು ಐಡಿಬಿಐ ಬ್ಯಾಂಕ್'ನ 9 ಜನ ಸಿಬ್ಬಂದಿ ಸೇರಿದಂತೆ ಒಟ್ಟು 21 ಜನರನ್ನ ಬಂಧಿಸಿದ್ದಾರೆ. 

ಬಾಗಲಕೋಟೆ(ಆ.27):  ಬಾಗಲಕೋಟೆಯ ವಿವಿಧ ಸರ್ಕಾರಿ ಇಲಾಖೆಗಳ ಹಣ ಐಡಿಬಿಐ ಬ್ಯಾಂಕ್ ಮೂಲಕ ಅಕ್ರಮವಾಗಿ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಕೇಸ್ ಸಿಐಡಿಗೆ ಹಸ್ತಾಂತರವಾಗಿದ್ದು, ಈ ಕಾರಣದಿಂದ ಬಾಗಲಕೋಟೆಗೆ ಇಂದು(ಮಂಗಳವಾರ) ಸಿಐಡಿ ತಂಡಗಳು ಭೇಟಿ ನೀಡಿ ತನಿಖೆ ಆರಂಭಿಸಿವೆ. 

ಬಾಗಲಕೋಟೆಯ ಪ್ರಾವಸೋದ್ಯಮ ಇಲಾಖೆ, ಅಲ್ಪಸಂಖ್ಯಾತರ, ಕಾರ್ಮಿಕ, ಕೈಮಗ್ಗ-ಜವಳಿ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳ ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಐದು ಸಿಐಡಿ ತಂಡಗಳನ್ನ ರಚಿಸಲಾಗಿದೆ. ಐದು ಇಲಾಖೆಗಳ ಆರು ಕೋಟಿ ಎಂಟು ಲಕ್ಷ ರೂಪಾಯಿಗೂ ಅಧಿಕ ಹಣ ವರ್ಗಾವಣೆಯಾಗಿದೆ. 

Tap to resize

Latest Videos

undefined

ಬಾಗಲಕೋಟೆ: ಐತಿಹಾಸಿಕ ಐಹೊಳೆ ಸ್ಮಾರಕಗಳಲ್ಲಿನ ಬಿರುಕು ಸರಿಪಡಿಸುವಂತೆ ನಟ ಅನಿರುದ್ಧ ಮನವಿ

ಐಡಿಬಿಐ ಬ್ಯಾಂಕ್‌ನ ಮೂಲಕ‌ 33 ವಿವಿಧ ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದ್ದು, ಈ ಕುರಿತು ಬಾಗಲಕೋಟೆಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿತ್ತು. ಇದುವರೆಗೆ ಬಾಗಲಕೋಟೆಯ ಸಿಐಎನ್ ಕ್ರೈಂ ಠಾಣೆಯ ಪೊಲೀಸರು ಐಡಿಬಿಐ ಬ್ಯಾಂಕ್'ನ 9 ಜನ ಸಿಬ್ಬಂದಿ ಸೇರಿದಂತೆ ಒಟ್ಟು 21 ಜನರನ್ನ ಬಂಧಿಸಿದ್ದಾರೆ. 

ಕೋಟ್ಯಾಂತರ ರೂಪಾಯಿ ಹಣ ಅಕ್ರಮ ವರ್ಗಾವಣೆಯಾದ ಹಿನ್ನೆಲೆ ಈ ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ಸಿಐಡಿಯ ಐದು ತಂಡಗಳ ಪೈಕಿ ಎರಡು ತಂಡಗಳು ಬಾಗಲಕೋಟೆಗೆ ಅಗಮಿಸಿದ್ದು, ಸಿಇಎನ್ ಕ್ರೈಂ ಠಾಣೆಗೆ ಭೇಟಿ ನೀಡಿ ತನಿಖೆ ಆರಂಭಿಸಿವೆ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಿಐಡಿ ಡಿವೈಎಸ್ಪಿ ಮಂಜುನಾಥ ಸೇತೃತ್ವದ ತಂಡ ಹಾಗೂ ಇನ್ಸ್ಪೆಕ್ಟರ್ ನಾಗಪ್ಪ ಸಿ. ನೇತೃತ್ವದ ತಂಡ ಆಗಮಿಸಿದೆ. ವಿವಿಧ ಇಲಾಖೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ‌ ಇದೀಗ ಚುರುಕು ಪಡೆದುಕೊಂಡಿದೆ. 

click me!