ಹೈವೇ ಅಪಘಾತ ಕಡಿಮೆ ಮಾಡಲು ಸಿಸಿಟಿವಿ ಅಳವಡಿಕೆ: ಕೋಟೆನಾಡಿನ ಪೊಲೀಸರಿಂದ ವಿನೂತನ ಪ್ರಯೋಗ!

Published : Mar 23, 2023, 03:11 PM ISTUpdated : Mar 23, 2023, 03:14 PM IST
ಹೈವೇ ಅಪಘಾತ ಕಡಿಮೆ ಮಾಡಲು ಸಿಸಿಟಿವಿ ಅಳವಡಿಕೆ:  ಕೋಟೆನಾಡಿನ ಪೊಲೀಸರಿಂದ ವಿನೂತನ ಪ್ರಯೋಗ!

ಸಾರಾಂಶ

ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ ಚಿತ್ರದುರ್ಗದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಹೀಗಾಗಿ ಪ್ರತಿ ವರ್ಷ ಸುಮಾರು 300- 400 ಅಪಘಾತ ಸಂಭವಿಸಿ ಸಾವು ನೋವುಗಳಾಗ್ತಿದ್ದವು. ಇದರಿಂದ ಎಚ್ಚೆತ್ತುಕೊಮಡಿರುವ ಪೊಲೀಸ್ ಇಲಾಖೆ ಹೆದ್ದಾರಿಗಳಿಗೆ ಸಿಸಿಟಿವಿ ಅಳವಡಿಸುವ ಮೂಲಕ ಅಪಘಾತ ತಡೆಯಲು ವಿನೂತನ ಪ್ರಯೋಗ ಮಾಡಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮಾ23) : ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ ಚಿತ್ರದುರ್ಗದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಹೀಗಾಗಿ ಪ್ರತಿ ವರ್ಷ ಸುಮಾರು 300- 400 ಅಪಘಾತ ಸಂಭವಿಸಿ ಸಾವು ನೋವುಗಳಾಗ್ತಿದ್ದವು. ಇದರಿಂದಾಗಿ ಎಚ್ಚೆತ್ತ ಪೊಲೀಸ್ ಇಲಾಖೆ  ವಿನೂತನ ಪ್ರಯೋಗ ಮಾಡಿದೆ. ಆ ಮೂಲಕ ಆಕ್ಸಿಡೆಂಟ್ ಗಳಿಗೆ ಬ್ರೇಕ್ ಹಾಕಿದೆ. ಆ ಪ್ರಯೋಗ ಇತರರಿಗೆ‌ ಮಾದರಿ ಎನಿಸಿದೆ. ಈ ಕುರಿತಾದ ವರದಿ ಇಲ್ಲಿದೆ

ನೋಡಿ ಹೀಗೆ ಹೆದ್ದಾರಿಗಳಲ್ಲಿ ಅಳವಿಡಿಸಿರೋ  ಸಿಸಿಟಿವಿ(CCTV camer)ಗಳು ಹಾಗೂ ಕ್ಯಾಮರಾದಲ್ಲಿ ಸೆರೆಯಾಗ್ತಿರೋ ವಾಹನಗಳ‌ ಚಲನವಲನ. ಈ ದೃಶ್ಯಗಳು ಕಂಡು ಬಂದಿದ್ದು,ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ(Chitradurga national highway)ಯಲ್ಲಿ, ಹೌದು, ಚಿತ್ರದುರ್ಗ ಒಳಗೆ ಹಾದು ಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಾಕಷ್ಟು ಅಪಘಾತಗಳು ಸಂಭವಿಸ್ತಿದ್ವು. ಕನಿಷ್ಟ ಅಂದ್ರೂ ವರ್ಷಕ್ಕೆ 400 ಜನ ಸಾವನ್ನಪ್ತಿದ್ರು‌. ಹೀಗಾಗಿ ಚಿತ್ರದುರ್ಗ ಪೊಲೀಸ್ ಎಸ್ಪಿ ಪರಶುರಾಮ್(SP Parashuram) ನೇತೃತ್ವದಲ್ಲಿ  ಹೆದ್ದಾರಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ. ಆ ರಾಷ್ಟ್ರೀಯ ಹೆದ್ದಾರಿಗಳಲ್ಲಿದ್ದ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಆ ಸ್ಥಳದಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬರವವರ‌ ದೃಶ್ಯಗಳನ್ನು ಸೆರೆ ಹಿಡಿದು ಆ ಚಾಲಕರಿಗೆ ಟೋಲ್ ಗಳಲ್ಲಿ ದಂಡ‌ ವಿಧಿಸಲಾಗ್ತಿದೆ. ಈ ಮೂಲಕ ಹೆದ್ದಾರಿಯಲ್ಲಿ ಆಗ್ತಿದ್ದ ಅಪಘಾತಗಳಿಗೆ ಬ್ರೇಕ್ ಹಾಕಲಾಗ್ತಿದೆ.

ಹೆದ್ದಾರಿಯಲ್ಲಿ ಅಪಘಾತ: ಐವರು ಮಹಿಳೆಯರನ್ನು ಬಲಿ ತೆಗೆದುಕೊಂಡ ಎಸ್‌ಯುವಿ; ಮೂವರ ಸ್ಥಿತಿ ಗಂಭೀರ

ಇನ್ನು ಈ ಕಾರ್ಯದಿಂದಾಗಿ  ಹೆದ್ದಾರಿಗಳಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಚಿತ್ರದುರ್ಗದಿಂದ ಹಾವೇರಿಯವರೆಗೆ ಈ ಸಿಸಿಟಿವಿ ಅಳವಡಿಸಿರೋದು ಜನ ಸಾಮಾನ್ಯರ ಸಾವು ನೋವು ತಡೆಯಲು ಮುಂದಾಗಿರುವ ಚಿತ್ರದುರ್ಗ ಪೊಲೀಸರ ಕಾರ್ಯಕ್ಕೆ ಚಿತ್ರದುರ್ಗ ನಾಗರೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ರೀತಿ ನಗರದಲ್ಲೂ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಅವುಗಳ ಮೇಲೂ ಪೊಲೀಸರು ನಿಗಾ ವಹಿಸಿ ಸೂಕ್ತ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ‌

 ಒಟ್ಟಾರೆ ಹೆದ್ದಾರಿಗಳಲ್ಲಿ ಅಪಘಾತಕ್ಕೆ ಬ್ರೇಕ್ ಹಾಕಲು ಸಿಸಿಟಿವಿ ಅಳವಡಿಸಲಾಗಿದೆ. ಹೀಗಾಗಿ ವಾಹನ ಚಾಲಕರು ಅಜಾಗರೂಕತೆ ಹಾಗು ಅತಿ ವೇಗವಾಗಿ ಬರೋದು ಕಡಿಮೆಯಾದ ಪರಿಣಾಮ ಸಾವು ನೋವುಗಳ‌ ಸಂಖ್ಯೆ ವಿರಳವಾಗಿದೆ. ಈ ಕಾರ್ಯ ಇತರೆ ಜಿಲ್ಲೆಗಳಿಗೂ ಮಾದರಿ‌ ಎನಿಸಿದೆ

ವಾಹನ ಸವಾರರಿಗೆ ಮತ್ತೆ ಬರೆ: ಏಪ್ರಿಲ್‌ 1ರಿಂದ ಹೈವೇ ಟೋಲ್‌ ದರ ಶೇ. 5ರಿಂದ ಶೇ.10 ರಷ್ಟು ಏರಿಕೆ..?

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC