ಚಿಕ್ಕಮಗಳೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನ ವಶ; ಮತ್ತೊಂದಡೆ ಚುನಾವಣೆಗೆ ಹಂಚಲು ತಂದಿದ್ದ ಲಕ್ಷಾಂತರ ಮೌಲ್ಯದ ಸೀರೆ ವಶ!

By Ravi Janekal  |  First Published Mar 23, 2023, 2:25 PM IST

ಚುನಾವಣಾ ಆಯೋಗದ ನಿದೇರ್ಶನದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ವಿಚಕ್ಷಣಾ ದಳ ಹೈ ಅಲರ್ಟ್ ಆಗಿದೆ. ಇದರ ಪರಿಣಾಮ ಕೋಟ್ಯಂತರ ಮೌಲ್ಯದ ಚಿನ್ನ, ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶಪಡಸಿಕೊಂಡು ತೀವ್ರ ತನಿಖೆ ನಡೆಸುತ್ತಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದಡೆ ಚಿನ್ನ ಸಿಕ್ರೆ ಮತ್ತೊಂದಡೆ ಸೀರೆಯನ್ನು ವಶಕ್ಕೆ ಪಡೆದಿರುವ ಚುನಾವಣಾ ವಿಚಕ್ಷಣಾ ದಳದ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.23) :ಚುನಾವಣಾ ಆಯೋಗದ ನಿದೇರ್ಶನದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ವಿಚಕ್ಷಣಾ ದಳ ಹೈ ಅಲರ್ಟ್ ಆಗಿದೆ. ಇದರ ಪರಿಣಾಮ ಕೋಟ್ಯಂತರ ಮೌಲ್ಯದ ಚಿನ್ನ, ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶಪಡಸಿಕೊಂಡು ತೀವ್ರ ತನಿಖೆ ನಡೆಸುತ್ತಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದಡೆ ಚಿನ್ನ ಸಿಕ್ರೆ ಮತ್ತೊಂದಡೆ ಸೀರೆಯನ್ನು ವಶಕ್ಕೆ ಪಡೆದಿರುವ ಚುನಾವಣಾ ವಿಚಕ್ಷಣಾ ದಳದ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. 

Tap to resize

Latest Videos

undefined

ಚೆಕ್ ಪೋಸ್ಟ್ ನಲ್ಲಿ 9 ಕೆ ಜಿ ಚಿನ್ನ ಪತ್ತೆ !

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 9 ಕೆ.ಜಿ.ಗೂ ಅಧಿಕ ಬಂಗಾರದ ಸರ ಹಾಗೂ ಗೋಲ್ಡ್ ಬಿಸ್ಕೆಟ್‍ಗಳನ್ನ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು(Chikkamagaluru) ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಚುನಾವಣೆ ನಿಮಿತ್ತ ಚಿಲ್ಲೆಯ ಎಲ್ಲಾ ಗಡಿಭಾಗದಲ್ಲೂ ಪೊಲೀಸ್ ಇಲಾಖೆ(Policie depertment) ಚೆಕ್‍ಪೋಸ್ಟ್‍ಗಳನ್ನ ನಿರ್ಮಿಸಿದೆ. ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಚೆಕ್‍ಪೋಸ್ಟ್ ಬಳಿ ಇರುವ ಚೆಕ್‍ಪೋಸ್ಟ್‍ನಲ್ಲಿ ಪಿಕ್‍ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೋಟಿ 30 ಲಕ್ಷ ಮೌಲ್ಯದ ಚಿನ್ನ ಹಾಗೂ ಚಿನ್ನದ ಬಿಸ್ಕೆಟ್ಗಳನ್ನ ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್ ನೇತೃತ್ವದಲ್ಲಿ ದಾಳಿ ನಡೆದಿದ್ದ ಪಿಕ್‍ಅಪ್ ವಾಹನ, ಗಾಡಿಯಿಲ್ಲಿದ್ದ ಇಬ್ಬರು ಹಾಗೂ ಚಿನ್ನವನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಈ ಚಿನ್ನವನ್ನ ಚುನಾವಣೆ ನಿಮಿತ್ತ ಖರ್ಚಿಗಾಗಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಅಂದಾಜಿಸಲಾಗಿದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

BJP Vijaysankalpa yatre: ಮೋದಿ ಬಡವರ ಬದುಕಿಗೆ ಭದ್ರತೆ ನೀಡಿದ್ದಾರೆ: ಆರಗ ಜ್ಞಾನೇಂದ್ರ

ಲಕ್ಷಾಂತರ ಬೆಲೆಬಾಳುವ ಸಾವಿರಾರು ಸೀರೆಗಳು ವಶ

ಚುನಾವಣೆಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಗರದಲ್ಲಿ ನಡೆದಿದೆ. ಚಿಕ್ಕಮಗಳೂರಿನ ಖಾಸಗಿ ಗೋದಾಮಿನಲ್ಲಿ ಸಾವಿರಾರು ಸೀರೆಗಳನ್ನು ಚುನಾವಣೆ ವೇಳೆ ಹಂಚಲೆಂದು ಸಂಗ್ರಹಿಸಿಡಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಚುನಾವಣಾ ವಿಚಕ್ಷಣಾ ದಳ ಸಿಬ್ಬಂದಿಗಳು , ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 666ಕ್ಕೂ ಹೆಚ್ಚು ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುವ ವೇಳೆ ಸಾವಿರಾರು ಸೀರೆಗಳು ನಾಪತ್ತೆಯಾಗಿದ್ದವು. ಸೀರೆಗಳನ್ನು ಸೂರತ್ ನಿಂದ ತರಿಸಲಾಗಿತ್ತೆಂಬ ಮಾಹಿತಿ ದೊರೆತಿದ್ದು,

ಸೀರೆ ಸಂಗ್ರಹಿಸಿಟ್ಟಿದ್ದ ಚಂದನ್ ಕುಮಾರ್ ಜೈನ್ ಎಂಬುವವನ ಹೆಸರಲ್ಲಿ ಈ ಸೀರೆಗಳು ಬಂದಿದ್ದು, ಆರೋಪಿ ಪೊಲೀಸರ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಸೂರತ್ ಸ್ಯಾರಿ ಫ್ಯಾಕ್ಟರಿಗೆ ಸಂಪರ್ಕಿಸಿದರು ಯಾವುದೇ ಮಾಹಿತಿ ದೊರೆತಿಲ್ಲ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ಜಯಪುರ ಸಮೀಪ ಶೃಂಗೇರಿ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಟಿ. ಡಿ ರಾಜೇಗೌಡ ಹಿಂಬಾಲಕರು ಹಂಚಲೆಂದು ತಂದಿದ್ದು ಸುಮಾರು 281 ಕುಕ್ಕರ್ ಗಳನ್ನು ಜಯಪುರ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಹಿಂದೆ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಅವರು ಹಂಚಲು ತಂದಿದ್ದ ಸೀರೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು. ಒಟ್ಟಿನಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದ್ದು ಈ ಕುರಿತು ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ.

ಚಿಕ್ಕಮಗಳೂರು: ಸಹೋದ್ಯೋಗಿಗಳ ವಿರುದ್ಧ ಪಿತೂರಿ ಆರೋಪ; ಕಾನ್ಸ್‌ಟೇಬಲ್ ಅಮಾನತ್ತು

click me!