ಮದವೇರಿದ ಗೂಳಿ ಹಾವಳಿಗೆ ಬೆಚ್ಚಿಬಿದ್ದ ಚಿತ್ರದುರ್ಗ ಜನತೆ!

By Suvarna News  |  First Published Mar 5, 2024, 6:24 PM IST

ಒಂದು ವಾರದಿಂದ ಮದವೇರಿದ ಗೂಳಿಯೊಂದು ಸಿಕ್ಕ ಸಿಕ್ಕವರಿಗೆ ಇರಿದು ಗಾಯಗೊಳಿಸಿದ್ದು, ಗೂಳಿ ಹಾವಳಿಗೆ  ಜನ ಬೆಚ್ಚಿ ಬಿದ್ದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.5): ಮನೆ ಮುಂದೆ ಬರುವ ಹಸು ಹಾಗು ಎತ್ತುಗಳನ್ನು ಭಕ್ತಿಯಿಂದ ಪೂಜಿಸೋದು ವಾಡಿಕೆ. ಆದ್ರೆ ಕಳೆದ ಒಂದು ವಾರದಿಂದ ಮದವೇರಿದ ಗೂಳಿಯೊಂದು ಸಿಕ್ಕ ಸಿಕ್ಕವರಿಗೆ ಇರಿದು ಗಾಯಗೊಳಿಸಿದೆ. ಹೀಗಾಗಿ ಹಸು ಹಾಗು ಗೂಳಿಗಳನ್ನು ಕಂಡರೆ ನಾಗರೀಕರು ಭಯಗೊಂಡು ಆತಂಕದಿಂದ ಓಡಾಡುವ ಸ್ಥಿತಿ  ಚಿತ್ರದುರ್ಗದಲ್ಲಿ ನಿರ್ಮಾಣವಾಗಿದೆ. 

Latest Videos

undefined

ಹೀಗೆ ಗಾಯಗೊಂಡಿರೊ ವೃದ್ಧರು. ಮನೆಯಿಂದ ಹೊರಬರಲು ಯೋಚಿಸ್ತಿರುವ ನಾಗರೀಕರು. ಪಾರ್ಕ್‌ ಹಾಗು ಮನೆಮುಂಭಾಗದಲ್ಲಿ ರಾಜಾರೋಷವಾಗಿ ಓಡಾಡ್ತಿರೊ ಬೀಡಾಡಿ ದನಗಳು. ಈ ದೃಶ್ಯಗಳು ಕಂಡು ಬಂದಿದ್ದು,ಚಿತ್ರದುರ್ಗದ ಐಯುಡಿಪಿ‌ ಬಡಾವಣೆಯಲ್ಲಿ, ಹೌದು,ಕಳೆದ ಒಂದು  ವಾರದಿಂದ ಗೂಳಿಯೊಂದು ಮದವೇರಿ ತಿರುಗುತ್ತಿದೆ. ಹೀಗಾಗಿ ಐಯುಡಪಿ ಬಡಾವಣೆ,ಗಾಂಧಿನಗರ ಹಾಗು ಕಂದಾಯಗಿರಿ ನಗರದ ಜನರು ಪಾರ್ಕ್ ಗೆ  ವಾಯುವಿಹಾರಕ್ಕೆ‌ ಬರಲು ಹಿಂದೇಟು ಹಾಕ್ತಿದ್ದಾರೆ. ವೃದ್ಧರು, ಮಕ್ಕಳು ಹಾಗು ಮಹಿಳೆಯರು ಎನ್ನದೇ ಸಿಕ್ಕ ಸಿಕ್ಕವರಿಗೆ ಈ ಗೂಳಿ ಕೊಂಬಿನಿಂದ  ಇರಿದು ಗಾಯಗೊಳಿಸಿದೆ. ಅಲ್ದೇ ಗೂಳಿ ಇರಿತಕ್ಕೊಳಗಾದ ಐಯುಡಿಪಿ ಬಡಾವಣೆಯ ವೃದ್ದರರೊಬ್ರು 18 ಹೊಲಿಗೆ ಬೀಳುವಂತೆ ಗಾಯಗೊಂಡಿದ್ದು, ಅಧೃಷ್ಟವಶಾತ್ ಅಕ್ಕಪಕ್ಕದವರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಫಿನಾಡಲ್ಲಿ ಮಳೆ ಕೊರತೆ, 64 ಜನ ರೈತರು ಆತ್ಮಹತ್ಯೆ!

ಹಾಗೆಯೇ ವಾಹನ ಸವಾರರ ಮೇಲು ಸಹ ಏಕಾಏಕಿ ಅಟ್ಯಾಕ್ ಮಾಡುವ ಗೂಳಿಯು ಮನಬಂದಂತೆ‌ ಕೊಂಬಿನಿಂದ ತಿವಿದು ಮಾರಣಾಂತಿಕ ದಾಳಿ ನಡೆಸಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ‌ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಾಣಹಾನಿಯಾದ್ರೆ ಗತಿಯೇನು ಅಂತ ಗಾಯಾಳು ಮನನೊಂದು ಹೇಳಿದ್ದಾರೆ‌.

ನಂಜನಗೂಡು: ಪತ್ನಿಯೊಂದಿಗೆ ವಿಡಿಯೊ ಕಾಲ್‌ನಲ್ಲಿದ್ದಾಗ ಮೈಮರೆತ ಪತಿ ಸಾವು!

ಇನ್ನು ಸಂಜೆ ಹಾಗು ಬೆಳಗಿನ ಜಾವ ಈ ಗೂಳಿಯ ದಾಳಿ ಮಿತಿಮೀರಿದೆ. ಸಿನಿಮಾ ಶೈಲಿಯಲ್ಲಿ ಓಡಿಬರುವ ಗೂಳಿಯು, ಜನರನ್ನು ಅಟ್ಟಾಡಿಸಿಕೊಂಡು ಇರಿಯುತ್ತಿದೆ. ಹೀಗಾಗಿ ಭಯಭೀತರಾದ ನಾಗರೀಕರು‌,ಮನೆಯಿಂದ ಮಕ್ಕಳನ್ನು ಹೊರಬಿಡಲು‌ಹಿಂದೇಟು ಹಾಕ್ತಿದ್ದಾರೆ. ಆದ್ದರಿಂದ ಈ ಬೀಡಾಡಿ ದನಗಳನ್ನು ಯಾವುದಾದರು ಗೋಶಾಲೆಗೆ ಶಿಫ್ಟ್ ಮಾಡುವಂತೆ ನೊಂದವರು ಒತ್ತಾಯಿಸಿದ್ದಾರೆ‌.

ಒಟ್ಟಾರೆ ಗೂಳಿದಾಳಿಗೆ ಚಿತ್ರದುರ್ಗ ದ‌ಐಯುಡಿಪಿ ಬಡಾವಣೆ ಜನರು ನಲುಗಿ ಹೋಗಿದ್ದಾರೆ. ದಿನ ಬೆಳಗಾದರೆ‌‌ ಗೂಳಿಯ ದಾಳಿಯದ್ದೇ ಜಪವಾಗಿದೆ. ಹೀಗಾಗಿ ಸಂಬಂಧಪಟ್ಟವರು ಈ ಬೀಡಾಡಿ ದನಗಳನ್ನು ಬೇರೆಡೆಗೆ ಶಿಫ್ಟ್ ಮಾಡಿ, ನಾಗರೀಕರ‌ ಆತಂಕ‌ ಶಮನ ಗೊಳಿಸಬೇಕಿದೆ.

click me!