Chitradurga: ಎಡಿಜಿಪಿ ಅಲೋಕ್ ಕುಮಾರ್‌ಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ ಹಾಗೂ ಮುರುಘಾ ಶ್ರೀ ಆಪ್ತ ಜಿತೇಂದ್ರ

By Govindaraj SFirst Published Nov 25, 2022, 10:19 PM IST
Highlights

ಮುರುಘಾ ಶ್ರೀ ವಿರುದ್ದದ ಪಿತೂರಿ ಕೇಸ್‌ಗೆ ಸಂಬಂಧಿಸಿದಂತೆ ಎ3 ಆರೋಪಿ ಆಗಿರುವ ಮೈಸೂರಿನ ಒಡನಾಡಿ ಸಂಸ್ಥೆ ಮತ್ತು ಅದರ ಮುಖ್ಯಸ್ಥರಾದ ಸ್ಟ್ಯಾನ್ಲಿ ಮತ್ತು ಪರಶು ಇವರುಗಳನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಮತ್ತು ಅವರ ಬಳಿಯಿರುವ ಸಂತ್ರಸ್ತ್ರ ಅಪ್ರಾಪ್ತ ಬಾಲಕಿಯರನ್ನು ಬಿಡುಗಡೆಗೊಳಿಸುವಂತೆ ಅಗ್ರಹಿಸಿ ಎಡಿಜಿಪಿ ಅಲೋಕ್ ಕುಮಾರ್‌ಗೆ ಮುರುಘಾ ಶ್ರೀ ಆಪ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಜಿತೇಂದ್ರ ಎನ್ ಹುಲಿಕುಂಟೆ ಪತ್ರ ಬರೆದಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ನ.25): ಮುರುಘಾ ಶ್ರೀ ವಿರುದ್ದದ ಪಿತೂರಿ ಕೇಸ್‌ಗೆ ಸಂಬಂಧಿಸಿದಂತೆ ಎ3 ಆರೋಪಿ ಆಗಿರುವ ಮೈಸೂರಿನ ಒಡನಾಡಿ ಸಂಸ್ಥೆ ಮತ್ತು ಅದರ ಮುಖ್ಯಸ್ಥರಾದ ಸ್ಟ್ಯಾನ್ಲಿ ಮತ್ತು ಪರಶು ಇವರುಗಳನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಮತ್ತು ಅವರ ಬಳಿಯಿರುವ ಸಂತ್ರಸ್ತ್ರ ಅಪ್ರಾಪ್ತ ಬಾಲಕಿಯರನ್ನು ಬಿಡುಗಡೆಗೊಳಿಸುವಂತೆ ಅಗ್ರಹಿಸಿ ಎಡಿಜಿಪಿ ಅಲೋಕ್ ಕುಮಾರ್‌ಗೆ ಮುರುಘಾ ಶ್ರೀ ಆಪ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಜಿತೇಂದ್ರ ಎನ್ ಹುಲಿಕುಂಟೆ ಪತ್ರ ಬರೆದಿದ್ದಾರೆ.

ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಮುರುಘಾ ಶರಣರ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಎಫ್.ಐ.ಆರ್.387/2022 ಮತ್ತು 445/2022 ರಂತೆ ದೂರು ದಾಖಲಾಗಿದ್ದು, ಹಾಲ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ದೂರು ದಾಖಲಾದ ದಿನದಿಂದಲೂ ಈ ದೂರಿನ ಹಿಂದೆ ಕೆಲವರ ಷಡ್ಯಂತ್ರ ಇದೆ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅದರಲ್ಲೂ ಮೈಸೂರಿನ ಒಡನಾಡಿ ಸಂಸ್ಥೆ ಮತ್ತು ಅದರ ಮುಖ್ಯಸ್ಥರಾದ ಸ್ಥಾನಿ ಮತ್ತು ಪರಶು ಇವರು ಈ ಷಡ್ಯಂತ್ರದಲ್ಲಿ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮುಂದುವರೆದು ಚಿತ್ರದುರ್ಗ ಗ್ರಾಮಾಂತರ ಠಾಣಿಯಲ್ಲಿ ಎಫ್.ಐ.ಆರ್ ನಂ: 484/2022 ರಂತೆ ದಾಖಲಾಗಿರುವ ದೂರಿನಲ್ಲಿ ಮುರುಘಾ ಶರಣರ ವಿರುದ್ಧ ಪಿತೂರಿಯ ನಡೆಸಿದವರಲ್ಲಿ ಒಡನಾಡಿ ಸಂಸ್ಥೆ ಮತ್ತು ಅದರ ಮುಖ್ಯಸ್ಥರು 3ನೇ ಆರೋಪಿಗಳಾಗಿರುತ್ತಾರೆ (ಎ3) ಇದೇ ದೂರಿನಲ್ಲಿ 2ನೇ ಆರೋಪಿ ಗಾಯಿತ್ರಿ (ಎ2) ಆಗಿರುತ್ತಾರೆ. 

Chitradurga: ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮುರುಘಾ ಶ್ರೀ ಪೀಠ ತ್ಯಾಗ ವಿಚಾರ ಚರ್ಚೆ: ಅಣಬೇರು ರಾಜಣ್ಣ

ಮುಂದುವರೆದು 445/2022 ರ ದೂರಿನ ಸಂತ್ರಸ್ತ ಬಾಲಕಿಯರು ಗಾಯತ್ರಿ ಇವರ ಮಕ್ಕಳಾಗಿರುತ್ತಾರೆ. ಆದರೆ ಈ ಮಕ್ಕಳು ಒಡನಾಡಿ ಸಂಸ್ಥೆಯ ಆಶ್ರಯದಲ್ಲಿರುತ್ತಾರೆ. ಪಿತ್ತೂರಿ ಆರೋಪ ಇರುವ ಒಡನಾಡಿ ಸಂಸ್ಥೆಯ ಆಶ್ರಯದಲ್ಲಿ ಸಂತ್ರಸ್ತ ಬಾಲಕಿಯರು ಇರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ. ಈ ಸಂತ್ರಸ್ತ ಬಾಲಕಿಯರಿಗೆ ಒಡನಾಡಿ ಸಂಸ್ಥೆಯವರು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಿಸುತ್ತಿದೆ. ತಕ್ಷಣ ತಾವು ಈ ಸಂತ್ರಸ್ತ ಬಾಲಕಿಯರನ್ನು ಸರ್ಕಾರದ ಯಾವುದಾದರು ಇಲಾಖೆಯ ಆಶ್ರಯದಲ್ಲಿಡಬೇಕೆಂದು ಈ ಮೂಲಕ ಮನವಿ ಎಂದು‌ ಉಲ್ಲೇಖಿಸಿಲಾಗಿದೆ. ಮೈಸೂರಿನ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ನಡೆಯು ಅನುಮಾನಸ್ಪದವಾಗಿದೆ. ಹಾಗಾಗಿ ಇವರನ್ನು ಸಹ ತನಿಖೆಗೆ ಒಳಪಡಿಸಲು ಮನವಿ‌ ಎಂದಿದ್ದಾರೆ. 

ಒಡನಾಡಿ ಸಂಸ್ಥೆಯು ಸಂತ್ರಸ್ತ ಬಾಲಕಿಯರಿಗೆ ನ್ಯಾಯಕೊಡಿಸುವ ನೆಪದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮಾದಕ ವಸ್ತುಗಳ ಬಳಕೆ, ಇಂಜೆಕ್ಷನ್‌ಗಳ ಬಳಕೆ, ಕುಡಿತದ ಆರೋಪ ಸೇರಿದಂತೆ ಇಲ್ಲಸಲ್ಲದ ಆಧಾರ ಮತ್ತು ದಾಖಲೆ ರಹಿತ ಸುಳ್ಳು ಆರೋಪ ಮಾಡುತ್ತಿರುವುದು ಕಾನೂನು ಬಾಹೀರವಾಗಿದೆ. ಒಡನಾಡಿ ಸಂಸ್ಥೆಯ ಮುಖ್ಯಸ್ಥರು ಪದೇ ಪದೇ ಮುರುಘಾ ಮಠದಲ್ಲಿ ಮಕ್ಕಳು ನಾಪತ್ತೆ ಎಂದು ಹೇಳುತ್ತಿದ್ದಾರೆ. ಮುರುಘಾ ಮಠದಲ್ಲಿದ್ದ ಮಕ್ಕಳನ್ನು ಸರ್ಕಾರವು ಕಾನೂನು ಬದ್ಧವಾಗಿ ಕ್ರಮ ಜರುಗಿಸಿ ಸ್ಥಳಾಂತರ ಮಾಡಿರುವುದು ದಾಖಲೆಯಲ್ಲಿದೆ ಆದರೆ ಇವರ ಈ ಆರೋಪ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಮಾಡಿದ ಅವಮಾನವಾಗಿದೆ. 

Chitradurga: ಮುರುಘಾ ಮಠ ಆಡಳಿತ ಡಿಸಿ ವರದಿ ಆಧರಿಸಿ ತೀರ್ಮಾನ: ಸಿಎಂ ಬೊಮ್ಮಾಯಿ

ಭವ್ಯ ಪರಂಪರೆಯಿರುವ ಐತಿಹಾಸಿಕ ಮಹಾತ್ವವುಳ್ಳ ಕೋಟ್ಯಾಂತರ ಭಕ್ತರಿರುವ ಶ್ರೀ ಮುರುಘಾ ಮಠಕ್ಕೆ ಕಳಂಕ ತರುವ ವ್ಯವಸ್ಥಿತ ಸಂಚು ಇವರು ಮಾಡುತ್ತಿದ್ದಾರೆ ಎನ್ನಿಸುತ್ತಿದೆ. ಅಲ್ಲದೆ ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮತ್ತು ತಲೆಮರಿಸಿಕೊಂಡಿರುವ ಪಿತೂರಿ ಆರೋಪಿಗಳ ಜೊತೆ ಇವರು ಸಂಪರ್ಕದಲ್ಲಿ ಇರಬಹುದಾದ ಸಂಭವ ಇದೆ. ತಕ್ಷಣ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಎಫ್.ಐ.ಆರ್ ನಂ: 484/2022 ರ ದೂರಿನಂತೆ 3ನೇ ಆರೋಪಿಯಾಗಿರುವ ಒಡನಾಡಿ ಸಂಸ್ಥೆ ಮತ್ತು ಅದರ ಮುಖ್ಯಸ್ಥರಾದ ಸ್ಥಾನಿ ಮತ್ತು ಪರಶು ಇವರನ್ನು ತಕ್ಷಣ ಬಂಧಿಸಿ ಹೆಚ್ಚಿನ ತನಿಖೆ ನಡೆಸಿದರೆ ಇನ್ನಷ್ಟು ಪಿತೂರಿಯ ಮಾಹಿತಿಗಳು ಹೊರಬರುತ್ತವೆ ಎನ್ನಿಸುತ್ತಿದೆ. ನಿಸ್ಪಕ್ಷ ಮತ್ತು ಪ್ರಮಾಣಿಕವಾಗಿ ತನಿಖೆ ನಡೆಸುತ್ತಿರುವ ತಮ್ಮ ಪೊಲೀಸ್ ಇಲಾಖೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯವಸ್ಥೆ ಬಗ್ಗೆಯೆ ಬಹಳ ಹಗುರವಾಗಿ ಮಾತನಾಡಿರುವ ಇವರ ವಿರುದ್ಧ ಕ್ರಮ ಜರುಗಿಸಲು ಈ ಮೂಲಕ ಮನವಿ ಮಾಡ್ತೀನಿ ಎಂದಿದ್ದಾರೆ.

click me!