ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಭಕ್ತರು ಆಗಮಿಸದಂತೆ ನಿಷೇಧಾಜ್ಞೆ (144 ಸೆಕ್ಷನ್) ಜಾರಿಗೊಳಿಸಿ ಮುರುಘಾ ಮಠದಲ್ಲಿ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.
ಚಿತ್ರದುರ್ಗ (ಅ.25): ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಭಕ್ತರು ಆಗಮಿಸದಂತೆ ನಿಷೇಧಾಜ್ಞೆ (144 ಸೆಕ್ಷನ್) ಜಾರಿಗೊಳಿಸಿ ಮುರುಘಾ ಮಠದಲ್ಲಿ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಘರಾಜೇಂದ್ರ ಶರಣರು ಪೋಕ್ಸೋ ಪ್ರಕರಣದಡಿಯಲ್ಲಿ ಜೈಲು ಪಾಲಾಗಿರುವ ಹಿನ್ನೆಲೆಯಲ್ಲಿ ಮುರುಘಾ ಮಠಕ್ಕೆ ಪೀಠಾಧಿಪತಿಗಳು ಇಲ್ಲದೇ ಉಸ್ತುವಾರಿಗಳ ನೇತೃತ್ವದಲ್ಲಿ ಮಠದ ಆಡಳಿತವನ್ನು ನಡೆಸಲಾಗುತ್ತಿದೆ. ಜೊತೆಗೆ, ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನಿಯೋಜನೆ ಮಾಡಲಾಗಿದ್ದು, ಮಠದ ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯಗಳನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಒಪ್ಪಿಸಿದ್ದಾರೆ. ಇನ್ನು ಮಠದ ಮೇಲಿದ್ದ ಕೋಟ್ಯಂತರ ರೂ. ಹಣವನ್ನು ತೀರಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮಠದಲ್ಲಿ ಪೀಠಾಧಿಪತಿ ಇಲ್ಲದ ಹಿನ್ನೆಲೆಯಲ್ಲಿ ಮುರುಘಾಮಠದಲ್ಲಿ ಬುಧವಾರ ಕೆಲವು ಶರಣರ ನೇತೃತ್ವದಲ್ಲಿ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.
ಹುಲಿ ಉಗುರು ಪೆಂಡೆಂಟ್ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್: ನಿಖಿಲ್ ಕುಮಾರಸ್ವಾಮಿ ಬಚಾವ್!
ಇನ್ನು ಕಳೆದ ವರ್ಷ ಶೂನ್ಯ ಪೀಠಾರೋಹಣ ಸಂದರ್ಭದಲ್ಲಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ , ಪತ್ನಿ ಸೌಭಾಗ್ಯ ಬಂದು ಗಲಾಟೆ ಮಾಡದ್ದರು. ಹೀಗಾಗಿ, ಈ ವರ್ಷ ಮಠದಲ್ಲಿ ಪೀಠಾರೋಹಣ ಸಂದರ್ಭದಲ್ಲಿ ಯಾವುದೇ ಗಲಾಟೆಗಳು ನಡೆಯದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಮಠದ ಆವರಣದೊಳಗೆ ಭಕ್ತರು ಹಾಗೂ ಸಾರ್ವಜನಿಕರು ಬರುವುದನ್ನು ನಿಷೇಧಿಸಿ ಮಠದ ರಾಜಾಂಗಣದಲ್ಲಿ ಶೂನ್ಯ ಪೀಠಾರೋಹಣವನ್ನು ನೆರವೇರಿಸಲಾಯಿತು. ಇನ್ನು ಪೀಠದ ಮೇಲೆ ಮುರುಘಾ ಶಾಂತವೀರ ಶ್ರೀಗಳ ಪುತ್ಥಳಿಯಿರಿಸಿ ಪೀಠಾರೋಹಣ ಮಾಡಲಾಯಿತು.
ಪ್ರಸ್ತುತ ಮುರುಘ ರಾಜೇಂದ್ರ ಮಠದ ಉಸ್ತುವಾರಿ ಬಸವಪ್ರಭುಶ್ರೀ ಹಾಗೂ ಮಠದ ಉತ್ಸವ ಸಮಿತಿ ಗೌರವಾದ್ಯಕ್ಷ ಶಿವಬಸವಶ್ರೀ ನೇತೃತ್ವದಲ್ಲಿ ಶಾಂತವೀರ ಶ್ರೀಗಳ ಪುತ್ಥಳಿಯಿರಿಸಿ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು. ಈ ಶೂನ್ಯ ಪೀಠಾರೋಹಣ ಕಾರ್ಯಕ್ರಮಕ್ಕೆ ಇತರೆ ಮಠಾಧೀಶರನ್ನು ದೂರವಿರಿಸಲಾಗಿತ್ತು. ಇನ್ನು ಪೀಠದ ಮೇಲೆ ಯಾರಾದರೂ ಕಾವಿಧಾರಿ ಕೂಡುವ ಭೀತಿಯಿಂದ ಈ ಸಲ ಮುನ್ನೆಚ್ಚರಿಕೆ? ವಹಿಸಲಾಗಿತ್ತು. ಇನ್ನು ಪೀಠಾರೋಹಣ ಕಾರ್ಯಕ್ರಮದಿಂದ ತಮ್ಮನ್ನು ದೂರವಿರಿಸಿದ್ದಕ್ಕೆ ಕೆಲವು ಮಠಾಧೀಶರು ಬೇಸರ ವ್ಯಕ್ತಪಡಿಸಿದ್ದಾರೆ.
ಮುರುಘಾ ಶ್ರೀ ವಿರುದ್ದದ ಎರಡನೇ ಪೋಕ್ಸೋ ಕೇಸ್, 761 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಮುರುಘಾ ಮಠದಲ್ಲಿ ಶೂನ್ಯ ಪೀಠಾರೋಹಣ ಬಳಿಕ ವಚನ ಗ್ರಂಥಗಳ ಮೆರವಣಿಗೆ ಮಾಡಲಾಯಿತು. ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ರೇಖಾ, ಮಠದ ಆಡಳಿತಾಧಿಕಾರಿ, ಮಠದ ಸಿಇಓ ಭರತ್, ಉತ್ಸವ ಸಮಿತಿ ಕಾರ್ಯಾದ್ಯಕ್ಷ ಕೆ.ಸಿ.ನಾಗರಾಜ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಮಾಡಲಾಯಿತು. ಇನ್ನು ಮಠದ ಶಿಕ್ಷಣ ಸಂಸ್ಥೆಗಳು ಹಾಗೂ ಇತರೆ ಆಡಳಿತ ವಿಭಾಗಗಳ ಸಿಬ್ಬಂದಿ ಮತ್ತು ಕೆಲವು ಭಕ್ತರಿಗೆ ಮಾತ್ರ ಶೂನ್ಯ ಪೀಠಾರೋಹಣ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.