ರೈತರ ಪಂಪಸೆಟ್‌ಗಳಿಗೆ ಶೇ.80 ರಷ್ಟು ವಿದ್ಯುತ್ ನೀಡಬೇಕು ಆದರೂ ಹೊರಗಡೆಯಿಂದ ವಿದ್ಯುತ್ ಆಮದು ಮಾಡಿಕೊಳ್ಳಲು ಟೆಂಡರ್ ಪ್ರಕ್ರೀಯೆ ನಡೆಸಲಾಗುತ್ತಿದೆ, ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 850 ಮೇವ್ಯಾ ವಿದ್ಯುತ್ ಖರಿದಿ ಮಾಡಲಾಗುವುದು ಎಷ್ಟೆ ಖರ್ಚಾದರು ವಿದ್ಯುತ್ ಕೊರತೆ ಯಾಗದಂತೆ ನೋಡಿಕೊಳ್ಳಲಾಗುವುದು ಎಂದ ಸಚಿವ ಎಂ.ಬಿ.ಪಾಟೀಲ
ಜಮಖಂಡಿ(ಅ.25): ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ, ಜಮಖಂಡಿ ಬಿಎಲ್‌ಡಿಇ ಕಾಲೇಜಿನಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳು ರ‌್ಯಾಂಕ್‌ಗಳನ್ನು ಪಡೆಯುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಕೈಗಾರಿಕಾ ಸಚಿವ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ನಗರದ ಬಸವ ಭವನದಲ್ಲಿ ಮಂಗಳವಾರ ನಡೆದ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಗಳು ಬೆಳೆಯಬೇಕಾದರೆ ಶಿಸ್ತು ಬದ್ದವಾಗಿ ಆಡಳಿತ ಮಂಡಳಿಯವರು ಕಾರ್ಯ ಮಾಡಿದರೆ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಬೆಳೆಯುತ್ತವೆ, ಬಿಎಲ್‌ಡಿ ಸೌಹಾರ್ದನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದಾನೆ ಎಂದರು.
ಆಪರೇಷನ್ ಕಮಲ ಖಚಿತ: ಮಾಜಿ ಸಚಿವ ಮುರುಗೇಶ ನಿರಾಣಿ
ಕಳೇದ ವರ್ಷ ರಾಜ್ಯದಲ್ಲಿ 10 ಸಾವಿರ ಮೇವ್ಯಾ ವಿದ್ಯುತ್ ಬೇಡಿಕೆ ಇತ್ತು ಆದರೆ ಈ ವರ್ಷ 16 ಸಾವಿರ ಮೇವ್ಯಾ ವಿದ್ಯುತ್ ಬೇಡಿಕೆ ಇದೆ, ಆದರೆ ಈ ವರ್ಷ ಕಡಿಮೆ ಮಳೆಯಾಗಿದ್ದರಿಂದ 5ರಿಂದ 6 ಸಾವಿರ ಮೇವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದೆ, ಅದರಲ್ಲಿ ರೈತರ ಪಂಪಸೆಟ್‌ಗಳಿಗೆ ಶೇ.80 ರಷ್ಟು ವಿದ್ಯುತ್ ನೀಡಬೇಕು ಆದರೂ ಹೊರಗಡೆಯಿಂದ ವಿದ್ಯುತ್ ಆಮದು ಮಾಡಿಕೊಳ್ಳಲು ಟೆಂಡರ್ ಪ್ರಕ್ರೀಯೆ ನಡೆಸಲಾಗುತ್ತಿದೆ, ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 850 ಮೇವ್ಯಾ ವಿದ್ಯುತ್ ಖರಿದಿ ಮಾಡಲಾಗುವುದು ಎಷ್ಟೆ ಖರ್ಚಾದರು ವಿದ್ಯುತ್ ಕೊರತೆ ಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬಿಎಲ್‌ಡಿಇ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ, ಬಿಎಲ್‌ಡಿಇ ಸಂಸ್ಥೆಯಮೇಲೆ ಗೌರವ ಭಾವ ಇದೆ, ಬಿಎಲ್‌ಡಿ ಸೌಹಾರ್ದ ಸಂಘ ಕೆಲವೇ ದಿನಗಳಲ್ಲಿ 150 ಕೋಟಿ ರೂ ಠೆವಣಿ ಸಂಗ್ರಹಿಸಿದ್ದು ಶ್ಲಾಗನೀಯ ಎಂದರು.
ವಿದ್ಯುತ್ ಕೊರೆತೆಯಿಂದ ಏತನೀರಾವರಿ ಯೋಜನೆಗಳು ಬಂದಾಗುತ್ತಿವೆ, ಇದೆ ರೀತಿ 10ರಿಂದ 15 ದಿನ ಮುಂದುವರೆದರೆ ಎಲ್ಲ ಸತ್ಯಾನಾಸ್ ಆಗುವ ಪರಸ್ಥಿತಿ ಬರುತ್ತದೆ, ಯಾವೂದೇ ಮೂಲದಿಂದ ವಿದ್ಯುತ್ ಉತ್ಪಾದಿಸಿ 7 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಸಚಿವ ಪಾಟೀಲ ಅವರಿಗೆ ಮನವಿ ಮಾಡಿಕೊಂಡರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಜಿಲ್ಲೆಯಲ್ಲಿ ಜಮಖಂಡಿ ತಾಲೂಕೂ ಆರ್ಥಿಕವಾಗಿ ಬಹಳ ವೇಗವಾಗಿ ಬೆಳೆಯುತ್ತಿದೆ, ಈ ಭಾಗದಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ಬಿಎಲ್‌ಡಿಇ ಸಂಸ್ಥೆ ಬಹಳಷ್ಟು ಕೊಡುಗೆ ನೀಡಿದೆ, ಸಚಿವ ಎಂ.ಬಿ.ಪಾಟೀಲ ಸಾಹೇಬರು ಈ ಹಿಂದೆ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಸಾವಳಗಿ ಭಾಗಕ್ಕೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ನೀರು ನೀಡಿದ್ದಾರೆ ಅವರ ಮುಂದಾಲೋಚನೆಯಿಂದ ಮರಭೂಮಿಯಂತಿದ್ದ ಪ್ರದೇಶಗಳು ಇಂದು ಹಸಿರಿನಿಂದ ಕಂಗೊಳಿಸುತ್ತಿವೆ ಎಂದರು.
ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಸರ್ಕಾರದ ಆಯಸ್ಸು ಕಡಿಮೆ: ಗೋವಿಂದ ಕಾರಜೋಳ
ಬಹಳ ವರ್ಷಗಳಿಂದ ಆಮೇಗತಿಯಲ್ಲಿ ಸಾಗುತ್ತಿರುವ ಕುಡಚಿ-ಬಾಗಲಕೋಟೆ ರೈಲ್ವೇ ಯೋಜನೆಯನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಬರದ ನಾಡಿಗೆ ನೀರು ಕೊಟ್ಟ ಸಚಿವ ಎಂ.ಬಿ.ಪಾಟೀಲ ಅವರ ಕಾರ್ಯವನ್ನು ರೈತರು ಎಂದೂ ಮರೆಯಬಾರದು ಎಂದರು.