ಇನ್ಫಿ ಸುಧಾಮೂರ್ತಿ ರಾಷ್ಟ್ರಪತಿಯಾಗಬೇಕೆಂದು ಹಂಪಿಯ ವಿರೂಪಾಕ್ಷನಿಗೆ ಪೂಜೆ

By Suvarna News  |  First Published Mar 25, 2022, 2:14 PM IST
  • ಸುಧಾಮೂರ್ತಿಯವರನ್ನು ರಾಷ್ಟ್ರಪತಿ ಮಾಡಬೇಕು
  • ಹಲವು ಸಮಾಜ ಮುಖಿ ಕೆಲಸ ಮಾಡಿದವರನ್ನು ಗೌರವಿಸಿ
  • ಹಂಪಿಯ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ರುದ್ರಾಭಿಷೇಕ

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ವಿಜಯನಗರ (ಮಾ.25): ಹಲವು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳೋ ಮೂಲಕ ಸಮಾಜದಲ್ಲಿ ಸತ್ಕಾರ್ಯ ಮಾಡ್ತಿರೋ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (infosys Sudha Murthy) ರಾಷ್ಟ್ರಪತಿ (president ) ಆಗಬೇಕೆಂದು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದಲ್ಲಿ (hampi virupaksha temple) ವಿಶೇಷ ಪೂಜೆ ಸಲ್ಲಿಸಲಾಯಿತು. ಹಂಪಿಯ (hampi) ಪ್ರವಾಸಿ ಮಾರ್ಗದರ್ಶಿಗಳಿಂದ ದಕ್ಷಿಣ ಕಾಶಿ ವಿಶ್ವ ವಿಖ್ಯಾತ ಹ‌ಂಪಿಯ ಶ್ರೀ ವಿರೂಪಾಕ್ಷನಿಗೆ ರುದ್ರಾಭಿಷೇಕ ಮಾಡೋ ಮೂಲಕ ಸುಧಾಮೂರ್ತಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಲಾಯಿತು.

Tap to resize

Latest Videos

undefined

ಸಮಾಜದಲ್ಲಿ ಉತ್ತಮ ಕೆಲಸದ ಜೊತೆಗೆ ಮಹಿಳೆ ಮತ್ತು‌ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು: ಹೌದು, ಕಳೆದ ಹಲವು ದಶಕಗಳಿಂದ ಶಾಲೆಗಳ ದುರಸ್ತೆ ಮತ್ತು ದತ್ತು ಪ್ರಕ್ರಿಯೆ ಸೇರಿದಂತೆ ಹಲವು ರೀತಿಯಲ್ಲಿ ಸಮಾಜ ಮುಖಿ ಕೆಲಸ ಮಾಡಿರೋ ಸುಧಾಮೂರ್ತಿಯವರು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಲವು ರೀತಿಯಲ್ಲಿ ಸಹಾಯ ಸಹಕಾರ ಮಾಡಿದ್ದಾರೆ. ಇನ್ನೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅತಿಹೆಚ್ಚು ದೇಣಿಗೆ ನೀಡೋ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.‌ ಇಂತಹ ವ್ಯಕ್ತಿಗಳು ರಾಷ್ಟ್ರದ ಉನ್ನತ ಹುದ್ದೇಗೇರೋದು ಹುದ್ದೇಗೂ ಒಂದು ಗೌರವ ಎನ್ನುವುದಾಗಿದೆ.

ಚಿತ್ರ ವಿಚಿತ್ರ ಹರಕೆ ಚೀಟಿ ಜೊತೆ ಸವದತ್ತಿ ಯಲ್ಲಮ್ಮನ ಹುಂಡಿಗೆ ಕೋಟ್ಯಂತರ ಹಣ! 

ಕೊರೋನಾ ವೇಳೆಯೂ ಸಹಾಯ: ಕೊರೊನಾ ಸಮಯದಲ್ಲಿ ಸಾಕಷ್ಟು ಕಂಪನಿಗಳು‌ ಮುಚ್ಚಿದವು. ಹಲವರು ‌ನೌಕರಿ‌ ಕಳೆದುಕೊಂಡು ಬೀದಿಗೆ ಬಿದ್ರೂ, ತಮ್ಮ ಸಂಸ್ಥೆಯ ಯಾವೊಬ್ಬ ನೌರರನ್ನು ತೆಗೆಯದೇ ಮತ್ತು ವೇತನ ಕಡಿತಗೊಳಿಸದಂತೆ ಕೆಲಸ ಮಾಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಹಲವು ಕಡೆಗಳಲ್ಲಿ ಸಹಾಯ ಹಸ್ತಚಾಚೋ  ಮೂಲಕ ಆಹಾರ ಕಿಟ್ ಸೇರಿದಂತೆ ಇನ್ನಿತೆ ಗೃಹೋಪಯೋಗಿ ವಸ್ತುಗಳನ್ನು ನೀಡಿ ಸಮಾಜ ಸೇವೆ ಮಾಡಿದ್ದಾರೆ. ಕೊರೊನಾ ವೇಳೆ  ಹಲವು ರಂಗದವರಿಗೆ ಸಹಾಯ ಮಾಡಿದಂತೆ ಹಂಪಿಯ ಪ್ರವಾಸಿ ಗೌಡ್ ಗಳಿಗೂ ಸಾಕಷ್ಟು ಸಹಾಯ ಸಹಕಾರ ಮಾಡಿದ ಹಿನ್ನೆಲೆ ಇಲ್ಲಿಯ ಜನರು ಅವರಿಗೆ ಸದಾ ಋಣಿಯಾಗಿದ್ದಾರೆ. ಹೀಗಾಗಿ ಇಂತಹ ಸರಕ ವ್ಯಕ್ತಿತ್ವ ಇರೋ ಸುಧಾಮೂರ್ತಿಯವರು ರಾಷ್ಟ್ರಪತಿ ಸ್ಥಾನ ಸಿಗಲೆಂದು ಪೂಜೆ ಸಲ್ಲಿಸಲಾಯಿತು.

SSLC 2022 EXAM ಹಾಲ್ ಗಳಲ್ಲಿ ಹಿಜಾಬ್‌ ಧರಿಸುವಂತಿಲ್ಲ: ಸಚಿವ ನಾಗೇಶ್

click me!