ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಕೋಟೆನಾಡು ಸಜ್ಜು: ಸಿಎಂ, ಡಿಸಿಎಂ ಭಾಗಿ!

By Govindaraj S  |  First Published Jan 27, 2024, 11:30 PM IST

ಹೀಗೆ ನೂರಾರು ಎಕರೆಯಲ್ಲಿ ಬೃಹದಾಕಾರವಾಗಿ ಹಾಕಿರುವ ಜರ್ಮನ್ ಪೆಂಡಲ್ ಒಂದೆಡೆಯಾದ್ರೆ, ನಾಳೆ ನಡೆಯುವ ಸಮಾವೇಶಕ್ಕೆ ಬರುವ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂದು ಲಕ್ಷಾಂತರ ಆಸನಗಳ ವ್ಯವಸ್ಥೆ ಮಾಡಿರುವ ಆಯೋಜಕರು. 


ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜ.27): ಹೀಗೆ ನೂರಾರು ಎಕರೆಯಲ್ಲಿ ಬೃಹದಾಕಾರವಾಗಿ ಹಾಕಿರುವ ಜರ್ಮನ್ ಪೆಂಡಲ್ ಒಂದೆಡೆಯಾದ್ರೆ, ನಾಳೆ ನಡೆಯುವ ಸಮಾವೇಶಕ್ಕೆ ಬರುವ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂದು ಲಕ್ಷಾಂತರ ಆಸನಗಳ ವ್ಯವಸ್ಥೆ ಮಾಡಿರುವ ಆಯೋಜಕರು. ಅಷ್ಟಕ್ಕೂ ಈ ಕಾರ್ಯಕ್ರಮ ಏನು? ಯಾಕೆ? ಎನ್ನುವುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಚುನಾವಣೆ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡುವುದು ಹೊಸದೇನಲ್ಲ. ಅದೇ ರೀತಿ ನಾಳೆ ಕೋಟೆನಾಡು ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಬೃಹತ್ ಜಾಗೃತಿ ಸಮಾವೇಶಕ್ಕೆ ಇಡೀ ಕೋಟೆನಾಡು ಸಜ್ಜಾಗಿದೆ. 

Tap to resize

Latest Videos

undefined

ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಮಠದ ಪಕ್ಕದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ನಡೆದಿದೆ. ಸುಮಾರು ನೂರಾರು ಎಕರೆಯಲ್ಲಿ ನಿರ್ಮಿಸಿರುಮ ಜರ್ಮನ್ ಪೆಂಡಲ್ ನಲ್ಲಿ ಸುಮಾರು ೨ ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಕೇಂದ್ರ ಬಿಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಅವರೊಟ್ಟಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಶೋಷಿತ ಸಮಯದಾಯಗಳ‌ ಬಹುತೇಕ ಸಚಿವರು ನಾಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನಮ್ಮ ನಿರೀಕ್ಷೆಯಂತೆ ನಾಳೆ ೫ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾವೇಶಕ್ಕೆ ಹರಿದು ಬರುವ ಸಾಧ್ಯತೆ ಹೆಚ್ಚಿದೆ. 

ಕಾಂಗ್ರೆಸ್ ಗ್ಯಾರಂಟಿಗಳಿಂದ ಬಿಜೆಪಿಗೆ ಬಲ ಕುಗ್ಗಿದೆ: ಸಚಿವ ಎಂ.ಸಿ.ಸುಧಾಕರ್‌

ಕಾರ್ಯಕ್ರಮದ ಮೂಲ ಉದ್ದೇಶ ಕಾಂತರಾಜ್ ವರದಿ ಜಾರಿಗೊಳಿಸುವ ಮೂಲಕ ಶೋಷಿತ ಸಮುದಾಯಗಳ ಏಳಿಗೆಗೆ ಸರ್ಕಾರ ಸಹಕಾರ ಮಾಡಬೇಕು ಎನ್ನುವುದಾಗಿದೆ ಅಂತಾರೆ ಅಯೋಜಕರು. ಇನ್ನೂ ಶೋಷಿತ ಸಮುದಾಯಗಳ ಬೃಹತ್ ಜಾಗೃತಿ ಸಮಾವೇಶಕ್ಕೆ ಬರುವ ಜನರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಕೂಡ ಸಜ್ಜಾಗಿದೆ. ಸಮಾವೇಶಕ್ಕೆ ಬರುವ ಲಕ್ಷಾಂತರ ಮಂದಿಗೆ ಚಿಕನ್ ಧಮ್ ಬಿರಿಯಾನಿ ಹಾಗೂ ಸಸ್ಯಹಾರಿಗಳಿಗೆ ರೈಸ್ ಬಾತ್ ಹಾಗೂ ಮೊಸರನ್ನದ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಸಾವಿರ ಕೌಂಟರ್ ಗಳಲ್ಲಿ ಊಟ ಬಡಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನನಗೆ ನಿಗಮ ಮಂಡಳಿ ಜವಾಬ್ದಾರಿ ಬೇಡ: ಶಾಸಕ ಸುಬ್ಬಾರೆಡ್ಡಿ ಅಸಮಾಧಾನ

ಅದೇ ರೀತಿ  ವೇದಿಕೆ ಮೇಲೆ ಸುಮಾರು ೧೫೦ಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಗಿದ್ದು, ಸಿಎಂ, ಡಿಸಿಎಂ ಹಾಗೂ ಸರ್ಕಾರ್ ಎಲ್ಲಾ ಸಚಿವರು, ಶಾಸಕರು, ಮಾಜಿ ಸಚಿವರುಗಳು ಭಾಗಿಯಾಗಲಿದ್ದಾರೆ. ಹಾಗೆಯೇ ಮುಖ್ಯ ವೇದಿಕೆಯ ಅಕ್ಕ ಪಕ್ಕವೂ ಶೋಷಿತ ಸಮುದಾಯಗಳ ಮುಖಂಡರುಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ನಾಳೆಯ ಬೃಹತ್ ಸಮಾವೇಶಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ ಅಂತಾರೆ. ಪೆಂಡಾಲ್ ಉಸ್ತುವಾರಿಗಳು. ಒಟ್ಟಾರೆ ನಾಳೆ ಕೋಟೆನಾಡಿನಲ್ಲಿ ಅಹಿಂದ- ೨.೦ ಸಮಾವೇಶ ನಡೆಸಲು ಸಿಎಂ ಸಿದ್ದು ಮಾಸ್ಟರ್ ‌ಪ್ಲಾನ್‌ ಮಾಡಿದ್ದಾರೆ.‌ ಅದರಂತೆ ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದು, ನಾಳೆ ನಡೆಯುವ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಲಕ್ಷಾಂತರ ಮಂದಿ ಹರಿದು ಬರುವ ಸಾಧ್ಯತೆ ಹೆಚ್ಚಿದೆ.

click me!