ಬ್ಯಾರೇಜ್ ನಿರ್ಮಾಣದಿಂದ ಶಿರಾದಲ್ಲಿ ಅಂತರ್ಜಲ ಹೆಚ್ಚಿದೆ: ಶಾಸಕ ಟಿ.ಬಿ.ಜಯಚಂದ್ರ

By Kannadaprabha News  |  First Published Jan 27, 2024, 8:41 PM IST

ಶಿರಾ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿಸುವ ಕಾರಣದಿಂದ ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ಹುಣಸೆಹಳ್ಳಿಯಿಂದ ಹೇರೂರು ಗ್ರಾಮದವರೆಗೆ 5 ಬ್ಯಾರೇಜ್‌ಗಳ ನಿರ್ಮಾಣ ಮಾಡಿದ್ದರಿಂದ ಇಂದು ಅಂತರ್ಜಲ ಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ಭವಣೆ ನೀಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. 


ಶಿರಾ (ಜ.27): ಶಿರಾ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿಸುವ ಕಾರಣದಿಂದ ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ಹುಣಸೆಹಳ್ಳಿಯಿಂದ ಹೇರೂರು ಗ್ರಾಮದವರೆಗೆ 5 ಬ್ಯಾರೇಜ್‌ಗಳ ನಿರ್ಮಾಣ ಮಾಡಿದ್ದರಿಂದ ಇಂದು ಅಂತರ್ಜಲ ಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ಭವಣೆ ನೀಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ತಾಲೂಕಿನ ಗೌಡಗೆರೆ ಹೋಬಳಿಯ ಡ್ಯಾಗೇರಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬರಡು ರಾಸು ತಪಾಸಣಾ ಶಿಬಿರ ಹಾಗೂ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ರೈತರ ಜೀವನೋಪಾಯಕ್ಕೆ ಹೆಚ್ಚು ಸಹಕಾರಿ ಆಗಿರುವ ಹೈನುಗಾರಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಹಾಲು ಉತ್ಪಾದಕರ ಸಂಘಗಳ ಸ್ವಂತ ಕಟ್ಟಡಗಳ ನಿರ್ಮಾಣಕ್ಕಾಗಿ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ೩ ಲಕ್ಷ ರು. ಅನುದಾನ ನೀಡುತ್ತೇನೆ. ತಾಲೂಕಿನಲ್ಲಿ ಕುರಿ ಮತ್ತು ಮೇಕೆಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ೫೮ ಕೋಟಿ ರು. ವೆಚ್ಚದ ಕಸಾಯಿ ಖಾನೆ (ಕುರಿ ಮತ್ತು ಮೇಕೆ ಮಾಂಸ ಸಂಸ್ಕರಣ ಘಟಕ) ಸ್ಥಾಪನೆ ಮಾಡಲಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ತನ್ನ ಕಾರ್ಯಾರಂಭ ಮಾಡಲಿದೆ ಇದರಿಂದ ಕುರಿ ಮತ್ತು ಮೇಕೆಗಳಿಗೆ ಉತ್ತಮ ಬೆಲೆ ಸಿಗುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಕೂಡ ಸಿಗಲಿದೆ ಎಂದರು.

Tap to resize

Latest Videos

undefined

ಕಾಂಗ್ರೆಸ್ ಮುಖಂಡ ಹುಣಿಸೇಹಳ್ಳಿ ಶಶಿಧರ್ ಮಾತನಾಡಿ, ತಾಲೂಕಿನ ಗಡಿ ಗ್ರಾಮ ಡ್ಯಾಗೇರಹಳ್ಳಿ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದ್ದು ಪಶು ಆಸ್ಪತ್ರೆ, ಹಾಲು ಉತ್ಪಾದಕರ ಸಂಘಕ್ಕೆ ನಿವೇಶನ ಮತ್ತು ನೂತನ ಕಟ್ಟಡ ಮಂಜೂರು ಮಾಡಿಕೊಡುವಂತೆ ಶಾಸಕ ಟಿ.ಬಿ .ಜಯಚಂದ್ರ ಅವರಲ್ಲಿ ಮನವಿ ಮಾಡಿದರು.

ರಾಮನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಬಾಲಕೃಷ್ಣ

ಈ ಸಂದರ್ಭದಲ್ಲಿ ಹುಣಸೇಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಎಂ. ಭಾಗ್ಯಮ್ಮ, ಸದಸ್ಯರಾದ ಲತಾ, ಆರ್‌. ಮೋಹನ್, ಹನುಮಂತರಾಯಪ್ಪ, ಪಶುವೈದ್ಯರಾದ ಡಾ. ನಾಗೇಶ್, ಪಶು ಸಹಾಯಕ ನಿರ್ದೇಶಕ ಡಾ. ರಮೇಶ್, ಡಾ. ಪುನೀತ್, ಡಾ.ಮಂಜುನಾಥ್ ಪಟೇಲ್, ಡಾ. ಸುಷ್ಮಾ, ಮುಖಂಡರಾದ ಹೇರೂರು ಲಕ್ಷ್ಮೀರಾಜು, ಪದ್ಮನಾಭ, ಡಿಪಿಕೆ ಯುವ ಮುಖಂಡ ಚಿರಂಜೀವಿ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಕವಿತಾ ನಾಗರಾಜು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಚೂಡಾಮಣಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

click me!