ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗುವಿಗೆ ಊಟ ಕೊಡದೇ ಹೊಡೆದು ಕೊಂದ ಅಪ್ಪ!

By Sathish Kumar KH  |  First Published Nov 8, 2024, 3:18 PM IST

ಚಿತ್ರದುರ್ಗದಲ್ಲಿ ಹಸಿವಿನಿಂದ ಬಳಲುತ್ತಿದ್ದ 5 ವರ್ಷದ ಮಗುವೊಂದು ತನ್ನ ಅಪ್ಪನ ಹೊಡೆತಕ್ಕೆ ಬಲಿಯಾಗಿದೆ. ಮನೆಯಲ್ಲಿದ್ದ ಹಣವನ್ನು ಮದ್ಯ ಸೆವನೆಗೆ ಖರ್ಚು ಮಾಡಿದ ತಂದೆ, ಹಸಿದ ಮಗುವಿಗೆ ಊಟ ನೀಡದೆ ಹಲ್ಲೆ ನಡೆಸಿ ಸಾವಿಗೆ ಕಾರಣವಾಗಿದ್ದಾನೆ.


ಚಿತ್ರದುರ್ಗ (ನ.08): ಹಸಿವು ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಅಕ್ಕಿಯನ್ನು 10 ಕೆ.ಜಿ. ಅಕ್ಕಿಯನ್ನು ಕೊಡದೇ ಕೇವಲ 5 ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿ ಹಣವನ್ನು ಕೊಡುತ್ತಿದೆ. ಆದರೆ, ಈ ಹಣವನ್ನು ತೆಗೆದುಕೊಂಡು ಮದ್ಯಸೇವನೆ ಮಾಡಿಬಂದ ಅಪ್ಪ, ಹಸಿವಿನಿಂದ ಬಳಲುತ್ತಾ ಅಳುತ್ತಿದ್ದ ತನ್ನ 5 ವರ್ಷದ ಪುಟ್ಟ ಮಗನಿಗೆ ಊಟ ಕೊಡಿಸದೇ ಅಳಬೇಡ ಎಂದು ಹೊಡೆದಿದ್ದಾನೆ. ಅಪ್ಪನ ಹೊಡೆತ ತಾಳಲಾಗದೇ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ ತಾಲೂಕಿನ ಹಳೇ ರಂಗಾಪುರ ಗ್ರಾಮದಲ್ಲಿ ತಂದೆಯಿಂದಲೇ ಪುತ್ರನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಅಪ್ಪಾ.. ಅಮ್ಮಾ.. ನಗೆ ಊಟ ಬೇಕು ಎಂದು ಹಸಿವಿನಿಂದ ಅಳುತ್ತಿದ್ದ ಮಗು ಮಂಜುನಾಥ (05) ಅಪ್ಪ ಹೊಡೆದ ಏಟಿಗೆ ಮೂರ್ಛೆ ಬಂದು ಬಿದ್ದಿದೆ. ಆಗ ಮಗುವಿನ ಅಮ್ಮ ಪಕ್ಕದ ಮನೆಯವರ ಬಳಿ ನನ್ನ ಮಗುವಿಗೆ ಊಟ ಕೊಡಿ ಎಂದು ಕೇಳಿ ಊಟ ತೆಗೆದುಕೊಂಡು ಬರುತ್ತಲೇ ಹಸಿದು ಅಳುತ್ತಿರುವ ಮಗುವಿಗೆ ಏಕೆ ಹೊಡೆಯುತ್ತೀಯಾ? ಎಂದು ಗಂಡನನ್ನು ಬೈಯುತ್ತಾ ಮಗುವಿನ ಬಳಿ ಹೋಗಿದ್ದಾಳೆ. ಆದರೆ, ಮಗು ಮೂರ್ಛೆ ಬಂದು ಬಿದ್ದಿದ್ದು, ಎಷ್ಟು ಎಬ್ಬಿಸಿದರೂ ಮೇಲೇಳಲೇ ಇಲ್ಲ. ಆಗ ತನ್ನ ಮಗುವಿಗೆ ಏನೇ ಆಗಿದೆ ಯಾರಾದರೂ ಬಂದು ಕಾಪಾಡಿ ಎಂದು ಜೋರಾಗಿ ಅಳುತ್ತಾ ನೆರೆ ಹೊರೆಯವರನ್ನು ಸಹಾಯಕ್ಕೆ ಕೂಗಿದ್ದಾಳೆ.

Tap to resize

Latest Videos

undefined

ಆಗ ನೆರೆಹೊರೆಯವರು ಬಂದು ಮಗುವನ್ನು ನೋಡಲಾಗಿ, ಮಗುವಿನ ಪಕ್ಕೆ ಭಾಗಕ್ಕೆ ಕೈಯಿಂದ ಹೊಡೆದ ಬಾಸುಂಡೆಯ ಗುರುತನ್ನು ನೋಡಿದ್ದಾರೆ. ಈ ಬಗ್ಗೆ ಆ ಮಗುವಿನ ತಾಯಿಯನ್ನು ವಿಚಾರಿಸಿದಾಗ ಅವರ ಪಾಪ್ನೇ ಹೊಡೆದಿದ್ದಾನೆ ಎಂದು ಹೇಳಿದ್ದಾಳೆ. ಕೂಡಲೇ ಮಗುವಿಗೆ ಚಿಕಿತ್ಸೆ ಕೊಡಿಸಲು ರಂಗನಾಥಪುರದಿಂದ ಚಿತ್ರದುರ್ಗ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಗುವಿನ ಪ್ರಾಣ ಹೋಗಿತ್ತು. 5 ವರ್ಷದ ಪುಟ್ಟ ಮಗುವನ್ನು ಕೊಲೆ ಮಾಡಿದ ಗಂಡ ತಿಪ್ಪೇಶ್ ವಿರುದ್ಧ ಆತನ ಹೆಂಡತಿ ಗೌರಿ ಭರಮಸಾಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ರೆಸಾರ್ಟ್‌ನಲ್ಲಿ 5 ಹುಡುಗರು, 2 ಹುಡುಗಿಯರು; ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ಯುವತಿಯರ ನೋಡಿ ಬಂದ ಅಪರಿಚಿತರು...

ಮಗನಿಗೆ ಊಟ ಕೊಡಿಸಲಾಗದೇ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಮಗುವಿನ ಅಪ್ಪ ತಿಪ್ಪೇಶನ ವಿರುದ್ಧ ದೂರು ನಿಡಿದ್ದಾರೆ. ಇನ್ನು ತಿಪ್ಪೇಶ್ - ಗೌರಮ್ಮ ಕೆಲ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ತಿಪ್ಪೇಶ್ ತನ್ನ ತಾಯಿ ಶೆಟ್ಟಮ್ಮ ಮಾತು ಕೇಳಿ ಹೆಂಡತಿ ಮಗುವನ್ನು ಸರಿಯಾಗಿ ನೋಡಿಕೊಳ್ಳದೇ ಮದ್ಯ ಸೇವಿಸಿ ಬಂದು ಹಲ್ಲೆ ಮಾಡುತ್ತಿದ್ದನು ಎಂಬ ಆರೋಪವೂ ಕೇಳಿಬಂದಿದೆ. ಇನ್ನು ಸರ್ಕಾರದ ಯೋಜನೆಯ ಹಣವನ್ನೂ ಕಿತ್ತುಕೊಂಕು ಹೆಂಡತಿ ಮಕ್ಕಳಿಗೆ ಊಟಕ್ಕೂ ಗತಿ ಇಲ್ಲದೇ ಮಾಡುತ್ತಿದ್ದನಂತೆ. ಆದರೆ, ನಿನ್ನೆ ಮಧ್ಯಾಹ್ನದಿಂದಲೂ ಊಟ ಮಾಡದೇ ಸಂಜೆಯವರೆಗೆ ಹಸಿವಿನಿಂದ ಬಳಲುತ್ತಿದ್ದ ಮಗು ನನಗೆ ಊಟ ಬೇಕು ಎಂದು ಅಳುತ್ತಿದ್ದಾಗ ಅವರ ಅಪ್ಪನಿಂದಲೇ ಹೊಡೆಸಿಕೊಂಡು ದಾರುಣವಾಗಿ ಸಾವನ್ನಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಇದನ್ನೂ ಓದಿ:  ₹ 40 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಹೆಣ ಕೆಡವಿದ ಸಂಬಂಧಿಕ!

ಎಲ್ಲಿದೆ ಹಸಿವು ಮುಕ್ತ ಕರ್ನಾಟಕ?
ನಮ್ಮನ್ನು ಆಳುವ ಸರ್ಕಾರಗಳು ಹಸಿವು ಮುಕ್ತ ಭಾರತ, ಹಸಿವು ಮುಕ್ತ ಕರ್ನಾಟಕ ಮಾಡುವುತ್ತೇವೆ ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿವೆ. ಕೇಂದ್ರ ಸರ್ಕಾರ ಕೊಡುವ 5 ಕೆಜಿ ಅಕ್ಕಿಯನ್ನು ಎಲ್ಲ ಪಡಿತರ ಚೀಟಿದಾರರಿಗೆ ಕೊಡಲಾಗುತ್ತದೆ. ಆದರೆ, ಪಂಚ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲರಿಗೂ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಆದರೆ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ 10 ಕೆಜಿ ಅಕ್ಕಿ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಕೊಡುವ 5 ಕೆಜಿ ಅಕ್ಕಿ ಕೊಟ್ಟು, ಉಳಿದ 5 ಕೆಜಿ ಅಕ್ಕಿಗೆ 300+ ರೂ. ಹಣ ಕೊಡುತ್ತದೆ. ಆದರೆ ಈ ಹಣವನ್ನು ಕಿತ್ತುಕೊಳ್ಳುವ ಗಂಡಸರು ಮದ್ಯ ಸೇವಿಸಿ ಬಂದು ಮನೆಯಲ್ಲಿ ಹೆಂಡತಿ ಮಕ್ಕಳನ್ನು ಉಪವಾಸ ಮಾಡುತ್ತಿದ್ದಾರೆ. ಇದೇ ರೀತಿ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಇಲ್ಲೊಂದು ಮಗು ಹಸಿವಿನಿಂದ ಬಳಲಿ ಸಾವಿಗೀಡಾಗಿದೆ. ಇಲ್ಲಿ ಕೊಲೆಗಾರನಾದ ಅಪ್ಪನಿಗೆ ಶಿಕ್ಷೆ ಆಗುವ ಜೊತೆಗೆ, ಹಸಿವಿನಿಂದ ಬಳಲುತ್ತಿರುವವರಿಗೆ ಅಕ್ಕಿ ಕೊಟ್ಟರೆ ಉಪಯೋಗವಾದೀತು..

click me!