ಶಿವಮೊಗ್ಗದ ಹೊರವಲಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಐಟಿಐ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಗಾಜನೂರಿನ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಇಬ್ಬರು ಸಾವಿಗೀಡಾಗಿದ್ದಾರೆ.
ಶಿವಮೊಗ್ಗ (ನ.08): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐಟಿಐ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಘಾತ ಶಿವಮೊಗ್ಗ ಹೊರವಲಯದ ಹರಕೆರೆ ಬಳಿಯ ಕಾನೆಹಳ್ಳ ಬಳಿ ನಡೆದಿದೆ.
ಶಿವಮೊಗ್ಗ ನಗರದ ಹೊರವಲಯ ಕಾನೆಗಳ್ಳದ ಬಳಿಯ ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳು ದಿಢೀರನೆ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಕೆಟಿಎಂ ಬೈಕ್‌ನಲ್ಲಿ ವೇಗವಾಗಿ ಹೋಗುವಾಗ ನಿಯಂತ್ರಣಕ್ಕೆ ಸಿಗದೇ ಈ ಅಪಘಾತ ಸಂಭವಿಸಿದ್ದು, ಮರಗಳು ಹಾಗೂ ಕಲ್ಲು ಬಂಡೆಗಳಿಗೆ ಬಿದ್ದು ಇಬ್ಬರೂ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಇಬ್ಬರೂ ವಿದ್ಯಾರ್ಥಿಗಳು ಗಾಜನೂರಿನ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.
ಇನ್ನು ನಿಸಾರ್ (20) ಮತ್ತು ಯಶವಂತ್ (20) ಸಾವನ್ನಪ್ಪಿದ ವಿದ್ಯಾರ್ಥಿಗಳಾಗಿದ್ದಾರೆ. ಮೃತ ನಿಸ್ಸಾರ್ ಆರ್.ಎಂ.ಎಲ್ ನಗರ ನಿವಾಸಿಯಾಗಿದ್ದರೆ, ಮತ್ತೊಬ್ಬ ಮೃತ ವಿದ್ಯಾರ್ಥಿ ಯಶವಂತ್ ಮಂಜುನಾಥ ಬಡಾವಣೆ ನಿವಾಸಿ ಆಗಿದ್ದಾರೆ. ಬೆಳಗ್ಗೆ ಎಂದಿನಂತೆ ಕಾಲೇಜಿಗೆ ತೆರಳುವಾಗ ಈ ಅಪಘಾತ ಸಂಭವಿಸಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ. ಕೆಟಿಎಂ ಬೈಕ್ ನಲ್ಲಿ ನಿಸಾರ್ ಮತ್ತು ಯಶವಂತ್ ಕಾಲೇಜಿಗೆ ಹೋಗುವಾಗ ಕಾನೇಹಳ್ಳದ ಕ್ರಾಸ್ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಜಾಹೀರಾತುವಿನ ಹ್ಯಾಂಗರ್ ಕಂಬಕ್ಕೆ ಗುದ್ದಿದ್ದಾನೆ.
ಇದನ್ನೂ ಓದಿ: ಶಿವಮೊಗ್ಗ ಕಾರ್ಗಲ್ ರಸ್ತೆಯಲ್ಲಿ 'ದೆವ್ವ' ಅಡ್ಡ ಬಂದು ಆಕ್ಸಿಡೆಂಟ್: ದೆವ್ವದ ಫೋಟೋ ವೈರಲ್!
ಬೈಕ್ ಸವಾರಿ ಮಾಡುತ್ತಿದ್ದ ಇಬ್ಬರ ತಲೆಗೂ ಬಲವಾದ ಹೊಡೆತ ಬಿದ್ದು ರಕಸ್ತ್ರಾವ ಉಂಟಾಗಿದೆ. ಇನ್ನು ವಿರಳವಾದ ವಾಹನ ಸಂಚಾರ ಇರುವ ಹಿನ್ನೆಲೆಯಲ್ಲಿ ರಸ್ತೆ ಅಪಘಾತ ಸಂಭವಿಸಿದರೂ ಕೆಲ ಹೊತ್ತಿನವರೆಗೆ ಇತರೆ ವಾಹನಗಳು ಸಂಚಾರ ಮಾಡದ ಹಿನ್ನೆಲೆಯಲ್ಲಿ ಇಬ್ಬರ ಪ್ರಾಣ ರಕ್ಷಣೆಗೆ ಯಾರೂ ಸಹಾಯಕ್ಕೆ ಬಂದಿಲ್ಲ. ಇನ್ನು ಈ ಘಟನೆ ಕುರಿತಂದತೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.