ರೈತರ ಒಂದೇ ಒಂದು ಇಂಚು ಭೂಮಿ ವಕ್ಫ್‌ಗೆ ಕೊಡಲ್ಲ, ನಾನು ವಕ್ಫ್‌ ಪರ ಇಲ್ಲ: ಸಚಿವ ಎಂ.ಬಿ. ಪಾಟೀಲ್

By Girish Goudar  |  First Published Nov 8, 2024, 2:39 PM IST

ವಕ್ಫ್‌ ಅವಾಂತರಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್‌ ಆಸ್ತಿ ರಕ್ಷಣೆ ಮಾಡ್ತೇವೆ ಎಂದಿದೆ.  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಕ್ಫ್‌ ಪರವಾಗಿ ಪ್ರಶ್ನೆಗಳನ್ನ ಪಾರ್ಲಿಮೆಂಟ್ ನಲ್ಲಿ ಕೇಳಿದ್ದಾರೆ. ವಿಜಯಪುರದಲ್ಲಿ ಬಂದು ರಸ್ತೆ ಮೇಲೆ ಹೋರಾಟ ಮಾಡಿದ್ದಾರೆ ಎಂದು ಕರಂದ್ಲಾಜೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಬಿ. ಪಾಟೀಲ್‌ 


ವಿಜಯಪುರ(ನ.08):  ರೈತರ ಒಂದೇ ಒಂದು ಇಂಚು ಭೂಮಿ ವಕ್ಫ್‌ಗೆ ಕೊಡಲ್ಲ. ನಾನು ವಕ್ಫ್‌ ಪರ ಇಲ್ಲ, ವಕ್ಫ್‌ ರಕ್ಷಣೆ ಮಾಡಲ್ಲ. ವಕ್ಫ್‌ ಸಹ ಸಾಕಷ್ಟು ತಪ್ಪು ಮಾಡಿದೆ, ನಾನು ವಕ್ಫ್‌ ತಪ್ಪುಗಳನ್ನ ಖಂಡಿಸ್ತೇನೆ. ಗೆಜೆಟ್ ನೋಟಿಪಿಕೇಶನ್ ನಲ್ಲಿ ತಪ್ಪಾಗಿದ್ರೆ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕ್ತೇವೆ. ತಪ್ಪಾಗಿದ್ದಲ್ಲಿ ಸರಿಪಡಿಸ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ವಕ್ಫ್‌ ಅವಾಂತರಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್‌ ಆಸ್ತಿ ರಕ್ಷಣೆ ಮಾಡ್ತೇವೆ ಎಂದಿದೆ.  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಕ್ಫ್‌ ಪರವಾಗಿ ಪ್ರಶ್ನೆಗಳನ್ನ ಪಾರ್ಲಿಮೆಂಟ್ ನಲ್ಲಿ ಕೇಳಿದ್ದಾರೆ. ವಿಜಯಪುರದಲ್ಲಿ ಬಂದು ರಸ್ತೆ ಮೇಲೆ ಹೋರಾಟ ಮಾಡಿದ್ದಾರೆ ಎಂದು ಕರಂದ್ಲಾಜೆ, ಬಿಜೆಪಿ ವಿರುದ್ಧ ಎಂ.ಬಿ. ಪಾಟೀಲ್‌ ವಾಗ್ದಾಳಿ ನಡೆಸಿದ್ದಾರೆ. 

Latest Videos

ರಾಜ್ಯದಲ್ಲಿ ವಕ್ಫ್ ಕ್ಯಾನ್ಸರ್‌ನಂತೆ ಹಬ್ಬುತ್ತಿದೆ: ಅಶೋಕ್

ವಿಶ್ವೇಶ್ವರಯ್ಯ ಕಲಿತ ಶಾಲೆ ವಕ್ಫ್‌ ಕಬ್ಜಾ ವಿಚಾರದ ಬಗ್ಗೆ ಮಾತನಾಡಿದ ಎಂ.ಬಿ. ಪಾಟೀಲ್‌, ಇದು ಬಿಜೆಪಿ ಅವಧಿಯಲ್ಲಿ ಆಗಿದ್ದು, ಬಿಜೆಪಿ ಸರ್ಕಾರದ ನಿರ್ದೇಶನದಂತೆ, ಸರ್ಕ್ಯೂಲರ್ ನಂತೆ ಆಗಿದೆ. ವಿಶ್ವೇಶ್ವರಯ್ಯ ಕಲಿತ ಶಾಲೆ ಸೇರಿ, ಯಾವುದೇ ದೇಗುಲ, ಮಠ, ಸರ್ಕಾರಿ ಆಸ್ತಿ ವಕ್ಫ್‌ಗೆ ಹೋಗೊಕೆ ಬಿಡಲ್ಲ. ಇದು ಸಿಎಂ ನಿಲುವು, ನನ್ನ ನಿಲುವು, ಸರ್ಕಾರದ ನಿಲುವು, ಬಿಜೆಪಿ ಹೊಲಸು ರಾಜಕಾರಣ ಮಾಡ್ತಿದೆ ಎಂದ ಟೀಕಿಸಿದ್ದಾರೆ. 

1974 ರ ವಕ್ಫ್‌ ಗೆಜೆಟ್ ನೋಟಿಪಿಕೇಶನ್ ರದ್ದು ಮಾಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್‌, 10 ವರ್ಷ ಬಿಜೆಪಿ ಸರ್ಕಾರ ಮಲಗಿತ್ತಾ?. ಇಷ್ಟು ವರ್ಷ ಏನ್ ಮಾಡ್ತಿದ್ರು, ಈಗ ನೆನೆಪಾಯ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಒಂದೇ ಒಂದು ಇಂಚು ಹಿಂದೂ, ಜೈನ, ಕ್ರೈಸ್ತ, ಮುಸ್ಲಿಂ, ಸಿಖ್, ಶಾಲೆ-ಕಾಲೇಜು ಜಮೀನು ವಕ್ಫ್‌ಗೆ ಬಿಟ್ಟುಕೊಡೊ ಮಾತಿಲ್ಲ. ರೈತರನ್ನ ಬಿಜೆಪಿಯವರು ಕನ್ಪ್ಯೂಜ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 

click me!