ಬಡ ರೈತನ ಜೀವನ ಕಸಿದುಕೊಂಡ ಕೆರೆಯ ನೀರು, 9 ಲಕ್ಷ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ ರೈತ!

By Suvarna NewsFirst Published Mar 14, 2023, 6:05 PM IST
Highlights

ಕೆರೆಯೇ ಬಡ ರೈತನ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಕೆರೆ ಕೋಡಿ ಬಿದ್ದು ಸುಮಾರು 600 ಅಡಿಕೆ ಗಿಡಗಳು ನೆಲಸಮ ಅಗಿದ್ದು ನಮ್ಮ ಜೀವನಾಂಶಕ್ಕೆ ಇದ್ದ ಒಂದೇ ಆಧಾರ ಇನ್ನಿಲ್ಲದಂತಾಗಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.14): ಕೆರೆ, ಕಟ್ಟೆಗಳನ್ನು ಕಟ್ಟೋದ್ರಿಂದ ರೈತರಿಗೆ ಅನಕೂಲ ಆಗಲಿದೆ ಎಂದು ಸರ್ಕಾರ NREG ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ನಡೆಸುತ್ತದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಕಟ್ಟಿರುವ ಕೆರೆಯೇ ಬಡ ರೈತನ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ಘಟನೆ ನಡೆದಿದೆ.  ಸರ್ಕಾರ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಸಾಕಷ್ಟು ಹಳ್ಳಿಗಳಲ್ಲಿ ಕೆರೆ, ಕಟ್ಟೆ, ಚೆಕ್ ಡ್ಯಾಂ ಗಳನ್ನು ನಿರ್ಮಿಸಲು ಮುಂದಾಗಿದೆ. ಇದ್ರಿಂದ ಮುಂದಿನ ದಿನಗಳಲ್ಲಿ ಆ ಭಾಗದ ರೈತರಿಗೆ ನೀರಿನ ಸಮಸ್ಯೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಈ ಕೆಲಸ ಮಾಡ್ತಿದೆ. ಆದ್ರೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಬಳಿಯ ಅಮೃತ ಮಹಲ್ ನಲ್ಲಿ ಹೊಸದಾಗಿ ನಿರ್ಮಿಸಿರುವ ಕೆರೆಯು ಕೋಡಿ ಬಿದ್ದು ಪರಿಣಾಮ ರೈತ ಇಬ್ರಾಹಿಂ ಸಾಬ್ ಸಂಕಷ್ಟಕ್ಕೆ ಸಿಲುಕಿದ್ದಾನೆ.‌

ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಕಳೆದ ಎರಡು ವರ್ಷದ ಹಿಂದಷ್ಟೇ 800 ಅಡಿಕೆ ಗಿಡಗಳನ್ನು ಹಾಕಿದ್ದೆವು.‌ ಆದ್ರೆ ಕೆರೆ ಕೋಡಿ ಬಿದ್ದು ಸುಮಾರು 600 ಅಡಿಕೆ ಗಿಡಗಳು ನೆಲಸಮ ಅಗಿದ್ದು ನಮ್ಮ ಜೀವನಾಂಶಕ್ಕೆ ಇದ್ದ ಒಂದೇ ಆಧಾರ ಇನ್ನಿಲ್ಲದಂತಾಗಿದೆ. ಎಲ್ಲರಂತೆ ನಾವು ಬದುಕಬೇಕು ಎಂದು ಚಿಂತಿಸಿ ಸಾಲ ಸೂಲ ಮಾಡಿ ಸುಮಾರು 8 ಲಕ್ಷ ಖರ್ಚು ಮಾಡಿ ಅಡಿಕೆ ಸಸಿಗಳನ್ನು ನೆಡಲಾಗಿತ್ತು. ಆದ್ರೆ ಸರ್ಕಾರದಿಂದ ಅವೈಜ್ಞಾನಿಕವಗಿ ನಿರ್ಮಿಸಿರುವ ಕೆರೆ ಕೋಡಿ ಬಿದ್ದು ನಮ್ಮ ಜೀವನಕ್ಕೆ ಬೆಂಕಿ ಇಟ್ಟಂತಾಗಿದೆ.

 ಈ ಕುರಿತು ಅಧಿಕಾರಿಗಳ ಗಮನಕ್ಕೆ, ಹಾಲಿ ಶಾಸಕರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. 8ಲಕ್ಷದಲ್ಲಿ ಕೆಲಸ ಮಾಡಿ ಈಗಾಗಲೇ ಮೂರು ಲಕ್ಷ ಸಾಲ ತೀರಿಸಿದ್ದೀವಿ, ಇನ್ನೂ 5 ಲಕ್ಷ ಸಾಲ ಇದೆ. ಜೀವನ ಸಾಗಿಸುವದೇ ಕಷ್ಟವಾಗಿದೆ ಅದ್ರಲ್ಲಿ ಸಾಲ ಬೇರೆ ನಮ್ಮ ಕುಟುಂಬಕ್ಕೆ‌ ಹೊರೆಯಾಗಿದೆ. ಅಧಿಕಾರಿಗಳು ಇತ್ತ ಗಮನಹರಿಸಿ ಪರಿಹಾರ ನೀಡದೇ ಇದ್ದಲ್ಲಿ ನಾವು ಏನು ಮಾಡಿಕೊಳ್ಳಬೇಕು ಎಂಬುದೇ ಪ್ರಶ್ನೆಯಾಗಿದೆ ಎಂದು ನೊಂದ ರೈತ ಹೇಳಿದರು.

ಇನ್ನೂ ಇದೇ ರೀತಿ ಪಕ್ಕದಲ್ಲಿ ಇದ್ದ ಇಬ್ರಾಹಿಂ ಅವರ ಸಹೋದರ ಜಮೀನು ಕೂಡ ಕೆರೆ ನೀರಿಂದಾಗಿ ಸಂಪೂರ್ಣ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಸರ್ಕಾರದಿಂದ ಕೆರೆ ನಿರ್ಮಿಸಿರೋದ್ರಿಂದ ನಮಗೂ ಅನುಕೂಲ ಆಗಿತ್ತೆ ಎಂದು ಭಾವಿಸಿ ನಾವು ಸಂತೋಷದಿಂದ‌ ಇದ್ದೆವು. ಆದ್ರೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಒಂದು ಕಡೆ ಕೆರೆ ಕೋಡಿ ಎತ್ತರ ಮಾಡಿರೋದ್ರಿಂದ ಹಿಂಬದಿಯಿಂದ ನೀರು ಹರಿದು ಜಮೀನಿಗೆ ನುಗ್ಗಿದ್ರಿಂದ ಎಲ್ಲಾ ಬೆಳೆ ನಾಶವಾಗಿದೆ. ರೈತರಿಗೆ ಇಷ್ಟೆಲ್ಲಾ ಅನಾಹುತ ಆಗಿದ್ದು ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ‌ತೋರಿತ್ತಿರುವುದು ಬೇಸರದ ಸಂಗತಿ.

ರೈತ, ಸ್ತ್ರೀಯರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ: ಶಾಸಕ

ಈ ಕುರಿತು ಹಾಲಿ ಶಾಸಕರಾದ ಚಂದ್ರಪ್ಪ ಬಳಿ ಸಾಕಷ್ಟು ಬಾರಿ ಹೋಗಿದ್ರು ಕೂಡ, ಅವರು ಆ ಕ್ಷಣಕ್ಕೆ ಅಧಿಕಾರಿಗಳಿಗೆ ಸೂಚಿಸಿ‌ ಏರಿ ಹಾಕಿ ಕೊಡಿ ಎಂದು ಹೇಳ್ತಾರೆ. ಆದ್ರೆ ಅಧಿಕಾರಿಗಳು ಇದುವರೆಗೂ ಯಾರೂ ಆಗಮಿಸಿ‌ ಕಾಮಗಾರಿ ಶುರು ಮಾಡಿಲ್ಲ. ಹೀಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಬೇಜವಾಬ್ದಾರಿ ತೋರಿದ್ರೆ ನಾವು ಕೆರೆನೋ ಬಾವಿನೋ ನೋಡಿಕೊಳ್ಳಬೇಕಾಗುತ್ತೆ ಎಂದು ನೋವಿನಿಂದ ತಮ್ಮ ಆಕ್ರೋಶ ಹೊರಹಾಕಿದರು.

Mandya ಕೊಬ್ಬರಿ ಖರೀದಿ ವ್ಯವಸ್ಥೆ ಸ್ಥಗಿತ ರೈತರ ಖಂಡನೆ

ದೇವರು ವರ ಕೊಟ್ರು ಪೂಜಾರಿ ವರ ಕೊಡಲ್ಲ ಎಂಬಂತೆ, ಜನಪ್ರತಿನಿಧಿಗಳು ಕಾಮಗಾರಿ ಮಾಡಿ ಕೆರೆ ಕೋಡಿ ಏರಿ ಎತ್ತರ ಮಾಡಿ ಎಂದ್ರು ಅಧಿಕಾರಿಗಳು ಮಾತ್ತ ನಿರ್ಲಕ್ಷ್ಯ ತೋರ್ತಿರೋದು ವಿಷಾದನೀಯ. ಆ ರೈತರು ಅನಾಹುತಕ್ಕೆ ಎಡೆ ಮಾಡಿ ಕೊಡದೇ ಶೀಘ್ರವೇ ನೊಂದ ರೈತ ಕುಟುಂಬಕ್ಕೆ ಪರಿಹಾರ ಒದಗಿಸಬೇಕಿದೆ.

click me!