ಮಂಡ್ಯ: ನವಿಲುಗರಿ ಹಾರ ಹಾಕಿಸಿಕೊಂಡ ದರ್ಶನ್‌ ಪುಟ್ಟಣ್ಣಯ್ಯಗೆ ಬಂಧನ ಭೀತಿ

Published : Mar 14, 2023, 01:21 PM ISTUpdated : Mar 14, 2023, 01:52 PM IST
ಮಂಡ್ಯ: ನವಿಲುಗರಿ ಹಾರ ಹಾಕಿಸಿಕೊಂಡ ದರ್ಶನ್‌ ಪುಟ್ಟಣ್ಣಯ್ಯಗೆ ಬಂಧನ ಭೀತಿ

ಸಾರಾಂಶ

ಪಾದಯಾತ್ರೆ ಮಾಡುತ್ತಿರುವ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಪಾಂಡವಪುರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಅಭಿಮಾನಿಯೊಬ್ಬರು ಬೃಹತ್‌ ನವಿಲುಗರಿಯ ಹಾರ ಹಾಕಿದ್ದು, ಇದೇ ಕಾರಣಕ್ಕೆ ದರ್ಶನ್‌ ಹಾಗೂ ಅವರ ಅಭಿಮಾನಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು. 

ಮಂಡ್ಯ(ಮಾ.14):  ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ರೈತ ಸಂಘದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಇದೀಗ ಬಂಧನದ ಭೀತಿ ಶುರುವಾಗಿದೆ.

ಕ್ಷೇತ್ರದಾದ್ಯಂತ ಪಾದಯಾತ್ರೆ ಮಾಡುತ್ತಿರುವ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಪಾಂಡವಪುರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಅಭಿಮಾನಿಯೊಬ್ಬರು ಬೃಹತ್‌ ನವಿಲುಗರಿಯ ಹಾರ ಹಾಕಿದ್ದು, ಇದೇ ಕಾರಣಕ್ಕೆ ದರ್ಶನ್‌ ಹಾಗೂ ಅವರ ಅಭಿಮಾನಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈಗ ನನ್ನ ತಂದೆ ಮೌಲ್ಯ ಅರ್ಥವಾಗುತ್ತಿವೆ

ಭರವಸೆಯ ಯಾನ ಹೆಸರಿನಲ್ಲಿ ಪಾದಯಾತ್ರೆ ವೇಳೆ ಸ್ಥಳೀಯ ಹಳ್ಳಿಗಳಲ್ಲೇ ರಾತ್ರಿ ದರ್ಶನ್‌ ಪುಟ್ಟಣ್ಣಯ್ಯ ವಾಸ್ತವ್ಯ ಹೂಡುತ್ತಿದ್ದಾರೆ. ಈ ವೇಳೆ ಅವರ ಅಭಿಮಾನಿಯೊಬ್ಬರು ಬೃಹತ್‌ ನವಿಲುಗರಿಯ ಹಾರ ತಂದು ಹಾಕಿದ್ದರು. ಸಂತೋಷದಿಂದಲೇ ನವಿಲುಗರಿ ಹಾರವನ್ನು ಹಾಕಿಸಿಕೊಂಡಿದ್ದರು. ಆದರೆ, ಈಗ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್‌ ಪುಟ್ಟಣ್ಣಯ್ಯ ಹಾಗೂ ಅವರ ಬೆಂಬಲಿಗನಿಗೂ ಬಂಧನದ ಭೀತಿ ಎದುರಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ಯು/ಎಸ್‌, 51, 1973, ಕಲಂ 3, 2, 5(ಇ) ಪ್ರಕಾರ ನವಿಲುಗರಿ ಹಾರ ಹಾಕುವುದು ಶಿಕ್ಷಾರ್ಹ ಅಪರಾಧ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC