ಮದ್ಯ ಪ್ರಿಯರಿಗೆ ಮತ್ತೆ ಶಾಕ್‌: 20ರವರೆಗೆ ಮದ್ಯದಂಗಡಿ ಬಂದ್‌

Kannadaprabha News   | Asianet News
Published : Apr 15, 2020, 10:14 AM IST
ಮದ್ಯ ಪ್ರಿಯರಿಗೆ ಮತ್ತೆ ಶಾಕ್‌: 20ರವರೆಗೆ ಮದ್ಯದಂಗಡಿ ಬಂದ್‌

ಸಾರಾಂಶ

ಕಳೆದ ಹದಿನೈದು ದಿನಗಳಿಂದ ತುಟಿ, ಗಂಟಲು ಒಣಗಿಸಿಕೊಂಡು ಏಪ್ರಿಲ್‌ 14ರ ನಿರೀಕ್ಷೆಯಲ್ಲಿದ್ದ ಕೋಟೆ ನಾಡಿನ ಮದ್ಯ ಪ್ರಿಯರು ಮತ್ತೆ ಶಾಕ್‌ ಗೆ ಒಳಗಾಗಿದ್ದಾರೆ. ಲಾಕ್‌ ಡೌನ್‌ ಅವಧಿ ಮಂಗಳವಾರಕ್ಕೆ ಮುಗಿಯಲಿದ್ದು ಸಂಜೆಯೇ ಮದ್ಯದಂಗಡಿಗಳು ಬಾಗಿಲು ತೆರೆಯುತ್ತವೆ ಎಂದು ಆಸೆ ಗಣ್ಗಳಿಂದ ಕಾದಿದ್ದವರಿಗೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಶಾಕ್‌ ನೀಡಿದ್ದು ಏಪ್ರಿಲ್‌ 20ರವರೆಗೂ ಅಂಗಡಿಗಳ ಮುಚ್ಚಲು ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ(ಏ.15): ಕಳೆದ ಹದಿನೈದು ದಿನಗಳಿಂದ ತುಟಿ, ಗಂಟಲು ಒಣಗಿಸಿಕೊಂಡು ಏಪ್ರಿಲ್‌ 14ರ ನಿರೀಕ್ಷೆಯಲ್ಲಿದ್ದ ಕೋಟೆ ನಾಡಿನ ಮದ್ಯ ಪ್ರಿಯರು ಮತ್ತೆ ಶಾಕ್‌ ಗೆ ಒಳಗಾಗಿದ್ದಾರೆ. ಲಾಕ್‌ ಡೌನ್‌ ಅವಧಿ ಮಂಗಳವಾರಕ್ಕೆ ಮುಗಿಯಲಿದ್ದು ಸಂಜೆಯೇ ಮದ್ಯದಂಗಡಿಗಳು ಬಾಗಿಲು ತೆರೆಯುತ್ತವೆ ಎಂದು ಆಸೆ ಗಣ್ಗಳಿಂದ ಕಾದಿದ್ದವರಿಗೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಶಾಕ್‌ ನೀಡಿದ್ದು ಏಪ್ರಿಲ್‌ 20ರವರೆಗೂ ಅಂಗಡಿಗಳ ಮುಚ್ಚಲು ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೋವಿಡ್‌- 19 ಸೋಂಕಿನ ಪ್ರPರಣವಿಲ್ಲ. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕೋಟೆ ನಾಡಿಗೆ ಒಂದಿಷ್ಟುರಿಲ್ಯಾಕ್ಸ್‌ ತೋರುತ್ತಾರೆ.

ಮಧ್ಯರಾತ್ರಿ ಒಬ್ಬರೇ ಡ್ರೈವ್ ಮಾಡಿ ಗಸ್ತು ತಿರುಗುವ ಮಹಿಳಾ ಎಸ್‌ಪಿ..!

ಒಂದು ದಿನದ ಮಟ್ಟಿಗಾದರೂ ಮದ್ಯದಂಗಡಿ ಬಾಗಿಲು ತೆಗೆದು ವಹಿವಾಟಿಗೆ ಅವಕಾಶ ಮಾಡಿಕೊಡುತ್ತಾರೆ ಎಂದು ಮದ್ಯ ಪ್ರಿಯರು ಭಾವಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 20 ರವರೆಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಿದ ಪರಿಣಾಮ ಮದ್ಯ ಪ್ರೇಮಿಗಳ ನಿರಾಸೆ ಕೂಪಕ್ಕೆ ತಿರುಗಿದೆ.

ಮದ್ಯದಂಗಡಿಗೆ ಕನ್ನ

ಸೋಮವಾರ ರಾತ್ರಿ ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಮದ್ಯದ ಅಂಗಡಿಯೊಂದಕ್ಕೆ ಕಳ್ಳರು ಕನ್ನ ಹಾಕಿ ಐವತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಎದುರಿಗೆ ಇರುವ ನರ್ತಕಿ ಬಾರ್‌ ಹಿಂಭಾಗದ ಕಬ್ಬಿಣದ ರಾಡು ಗಳ ಕೊಯ್ದು ಒಳ ಪ್ರವೇಶಿಸಿರುವ ಕಳ್ಳರು ತರಾವರಿ ಬ್ರಾಂಡ್‌ ಮದ್ಯ ಕದ್ದೊಯ್ದಿದ್ದಾರೆ. ಈ ಸಂಬಂಧ ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?