ಚಿತ್ರದುರ್ಗ: ನೆರೆ ಸಂತ್ರಸ್ತರಿಗೆ ಬಿಜೆಪಿ ಮಹಿಳಾ ಘಟಕದಿಂದ 5 ಸಾವಿರ ರೊಟ್ಟಿ ತಯಾರಿ

By Kannadaprabha NewsFirst Published Aug 13, 2019, 11:31 AM IST
Highlights

ಚಿತ್ರದುರ್ಗದ ಬಿಜೆಪಿ ಮಹಿಳಾ ಘಟಕ ನೆರೆ ಸಂತ್ರಸ್ತರಿಗಾಗಿ 5000ರೊಟ್ಟಿಗಳನ್ನು ಹಾಗೂ ಚಟ್ನಿಪುಡಿಯನ್ನು ತಯಾರಿಸಿದ್ದಾರೆ. ರಾಜ್ಯದಲ್ಲಿ ನೆರೆ ಪ್ರವಾಹದಿಂದ ಜನ ತತ್ತರಿಸಿದ್ದು, ಜನರಿಗೆ ಅಗತ್ಯವಾದ ಆಹಾರ, ಬಟ್ಟೆಗಳನ್ನು ಸಂಗ್ರಹಿಸಿ ಜನ ಕಳುಹಿಸಿ ಕೊಡುತ್ತಿದ್ದಾರೆ. ಇದೀಗ  ಚಿತ್ರದುರ್ಗದ ಬಿಜೆಪಿ ಮಹಿಳಾ ಘಟಕವೂ ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದೆ.

ಚಿತ್ರದುರ್ಗ(ಆ.13): ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿಗೆ ಇಡೀ ನಾಡಿನ ಜನರೇ ದುಃಖಿತರಾಗಿದ್ದು, ಅವರ ಸಮಸ್ಯೆಗಳಿಗೆ ನಗರದ ಅನೇಕ ಸಂಘ ಸಂಸ್ಥೆಗಳು, ರಾಜಕೀಯ ವ್ಯಕ್ತಿಗಳು ನೆರವು ನೀಡಲು ಸಾರ್ವಜನಿಕರಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.

ನೆರೆ ಸಂತ್ರಸ್ತರ ಹಸಿವಿನ ಕೊರತೆಯನ್ನು ನೀಗಿಸಲು ಚಳ್ಳಕೆರೆಯ ಭಾರತೀಯ ಜನತಾ ಪಕ್ಷದ ಮಹಿಳಾ ಘಟಕದ ಕಾರ್ಯಕರ್ತರು ಸುಮಾರು 5 ಸಾವಿರಕ್ಕೂ ಹೆಚ್ಚು ರೊಟ್ಟಿಹಾಗೂ ಚಟ್ನಿ ಪುಡಿಯನ್ನು ತಯಾರಿಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬಾ ಮಾತನಾಡಿ, ಉತ್ತರ ಕರ್ನಾಟಕ ನೆರೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಹಸಿದ ಹೊಟ್ಟೆಯನ್ನು ತುಂಬಿಸುವ ನಿಟ್ಟಿನಲ್ಲಿ ರೊಟ್ಟಿಗಳನ್ನು ತಯಾರಿಸುತ್ತಿದ್ದೇವೆ. ಇವುಗಳನ್ನು ಶೀಘ್ರದಲ್ಲೇ ಅಲ್ಲಿಗೆ ಕಳುಹಿಸಿಕೊಡಲಾಗುವುದು. ನೆರೆಯಲ್ಲಿ ಸಾವಿರಾರು ಸಂಖ್ಯೆಯ ಮಹಿಳೆಯರು, ಮಕ್ಕಳು, ವೃದ್ಧೆಯರು ಹಸಿವಿನಿಂದ ನರಳುತ್ತಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

ದಾವಣಗೆರೆ: ನೆರೆ ಸಂತ್ರಸ್ತರಿಗೆ 15,000 ರೊಟ್ಟಿ ವಿತರಣೆ

ಕಾರ್ಯದರ್ಶಿ ಇಂಧುಮತಿ ಆರ್‌.ಜಗದೀಶ್‌, ಶಿವಾನುಪೂರ್ಣಮ್ಮ, ಮಂಗಳಮ್ಮ, ಪ್ರಮೀಳಾ, ನಾಗಮಣಿ, ದೇವೀರಮ್ಮ, ಅನ್ನಪೂರ್ಣಮ್ಮ, ಸಿದ್ದಗಂಗಮ್ಮ, ಯನ್ನಪ್ಪ, ಅನಮ್ಮ, ಸರೋಜಮ್ಮ, ಕಮಲಮ್ಮ ಮುಂತಾದವರು ರೊಟ್ಟಿತಯಾರಿಕೆಯಲ್ಲಿ ತೊಡಗಿದ್ದರು. ಬಿಜೆಪಿ ಮುಖಂಡರಾದ ಡಿ.ಎಂ. ಶ್ರೀನಿವಾಸ್‌, ಜಗದೀಶ್‌ ಇದ್ದರು.

click me!