ಮಂಗಳೂರು : ಚೀಟಿ ವ್ಯವಹಾರದ ನಷ್ಟದಿಂದ ದಂಪತಿ ಆತ್ಮಹತ್ಯೆ

By Suvarna NewsFirst Published Jun 9, 2021, 1:04 PM IST
Highlights
  • ಚೀಟಿ ವ್ಯವಹಾರದಿಂದಾದ ನಷ್ಟ ದಂಪತಿ ಆತ್ಮಹತ್ಯೆ
  • ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
  • ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಮಂಗಳೂರು (ಜೂ.09): ಡೆತ್ ನೋಟ್ ಬರೆದಿಟ್ಟು ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಕದ್ರಿ ಬಳಿಯ ಪಿಂಟೋಸ್ ಲೇನ್ ನಲ್ಲಿಂದು ಘಟನೆ‌ ನಡೆದಿದೆ. ಮೃತರನ್ನು ಸುರೇಶ್ (62), ವಾಣಿ (55) ಎನ್ನಲಾಗಿದೆ. 

ಮನೆ ಎದುರಿನ ಬಾವಿಗೆ ಹಾರಿ ಪತಿ ಸುರೇಶ್ ಆತ್ಮಹತ್ಯೆಗೆ ಶರಣಾಗಿದ್ದು, ಮನೆ ಒಳಗೆ ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ವೆಳೆ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ  ಚಿಟ್ ಫಂಡ್ ನಲ್ಲಿ ಆದ ನಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದಾಗಿ ಬರೆದುಕೊಂಡಿದ್ದಾರೆ. 

ಮುಸ್ಲಿಮರು ಎಂಬ ಕಾರಣ; ಇಡೀ ಕುಟುಂಬದ ಮೇಲೆ ಟ್ರಕ್ ಹಾಯಿಸಿ ನಾಲ್ವರ ಹತ್ಯೆ
 
ಕಮಿಷನರ್ ವಾರ್ನಿಂಗ್ : ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ ಬೆನ್ನಲ್ಲೇ ಬಡ್ಡಿ ಮಾಫಿಯಾಗೆ ಕಮಿಷನರ್ ವಾರ್ನಿಂಗ್ ನೀಡಿದ್ದಾರೆ. 

ಕದ್ರಿಯಲ್ಲಿ ಆತ್ಮಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಕಮಿಷನರ್ ಶಶಿಕುಮಾರ್  ದಂಪತಿಗಳ ಆತ್ಮಹತ್ಯೆ ಕೆಟ್ಟ ನಿರ್ಧಾರ, ಚೀಟಿ ವ್ಯವಹಾರ, ಹಣಕಾಸು ಸಮಸ್ಯೆ ಇದ್ದಲ್ಲಿ ಹೇಳಿಕೊಳ್ಳಬಹುದಿತ್ತು.  ಈ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಹೇಳಿದ್ರು. 

ಆ ಒಂದು ವಾಟ್ಸಾಪ್ ಸ್ಟೇಟಸ್ ಮತ್ತು ಸೀಲ್‌ಡೌನ್..ಕುಂದಾಪುರದ ಕೊಲೆ! .

ಈ ಮಧ್ಯೆ ಹಲವೆಡೆ ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂ ಥವರ ವಿರುದ್ಧ ಎಕ್ಸೋರ್ಬಿಟಂಟ್ ರೇಟ್ ಆಫ್ ಇಂಟ್ರೆಸ್ಟ್ ಆಕ್ಟ್ ಅಡಿ‌ ಪ್ರಕರಣ ದಾಖಲಿಸಲು ಅವಕಾಶ ಇದೆ.  ಅತಿಯಾದ ಬಡ್ಡಿ ವಸೂಲಿಗೆ ಒತ್ತಡ, ಬೆದರಿಕೆ ಹಾಕಿದಲ್ಲಿ ಸ್ಥಳೀಯ ಠಾಣೆಗೆ ದೂರು ನೀಡಿ.  ಚೀಟಿ ವ್ಯವಹಾರ ಮಾಡೋರು ಆತ್ಮಹತ್ಯೆ ಮಾಡೋದು, ಊರು ಬಿಟ್ಟು ಹೋಗೋದು ಮಾಡುತ್ತಿದ್ದಾರೆ. ಇಂಥಹ ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಹಣಕಾಸು ವ್ಯವಹಾರ ಮಾಡಿದರೆ ಉತ್ತಮ ಎಂದು ಹೇಳಿದರು. 

ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಕಂಡುಬಂದರೆ ದೂರು ಕೊಡಿ. ಸೂಕ್ತ ಕಾನೂನು ‌ಕ್ರಮಕ್ಕೆ ನಮ್ಮ ಎಲ್ಲಾ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ಶಶಿಕುಮಾರ್ ಹೇಳಿದರು. 

click me!