Asianet Suvarna News Asianet Suvarna News

ಮುಸ್ಲಿಮರು ಎಂಬ ಕಾರಣ; ಇಡೀ ಕುಟುಂಬದ ಮೇಲೆ ಟ್ರಕ್ ಹಾಯಿಸಿ ನಾಲ್ವರ ಹತ್ಯೆ

* ಮುಸ್ಲಿಮರು ಎಂಬ ಒಂದೇ ಕಾರಣಕ್ಕೆ ಕುಟುಂಬದ ಕಗ್ಗೊಲೆ
* ಕೆನಡಾದಲ್ಲಿ ಟ್ರಕ್ ಹಾಯಿಸಿ ನಾಳ್ವರ ಹತ್ಯೆ
* ಕೆಲವೇ ಗಂಟೆಗಳಲ್ಲಿ ಸೆರೆ ಸಿಕ್ಕ ಆರೋಪಿ
* ಕೆನಡಾ ಪ್ರಧಾನಿಯಿಂದ ಧೈರ್ಯ ತುಂಬುವ ಕೆಲಸ

Muslim family of four killed in premeditated truck attack Canada mah
Author
Bengaluru, First Published Jun 8, 2021, 3:40 PM IST

ಕೆನಡಾ(ಜೂ.  08)  ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ಮುಸ್ಲಿಂ ಕುಟುಂಬವೊಂದನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ. ಕುಟುಂಬದ ನಾಲ್ವರು ಸದಸ್ಯರ ಮೇಲೆ ಟ್ರಕ್ ಹಾಯಿಸಿ ಕೊಲೆ ಮಾಡಲಾಗಿದೆ.

ರೇಸಿಂಗ್ ಗೆ ತೆರಳುವ ವ್ಯಕ್ತಿಗಳಂತೆ ಡ್ರೆಸ್ ಧರಿಸಿದ್ದ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದವ ಏಳು ಕಿಮೀ ದೂರದ ಮಾಲ್ ನಲ್ಲಿ ಸೆರೆಸಿಕ್ಕಿದ್ದಾನೆ ಎಂದು ಅಧಿಕಾರಿ ಪಾಲ್ ವೈಟ್ ತಿಳಿಸಿದ್ದಾರೆ.

ಮೃತರ ಹೆಸರನ್ನು ಬಿಡುಗಡೆ ಮಾಡಿಲ್ಲ. 74 ವರ್ಷದ ಮಹಿಳೆ,  46 ವರ್ಷದ ಪುರುಷ, 44ರ ಮಹಿಳೆ ಮತ್ತು 15 ವರ್ಷದ ಬಾಲಕಿಯ ಹತ್ಯೆ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡ  9  ವರ್ಷದ ಬಾಲಕನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಆ ಒಂದು ವಾಟ್ಸಾಪ್ ಸ್ಟೇಟಸ್ ಮತ್ತು ಸೀಲ್‌ಡೌನ್..ಕುಂದಾಪುರದ ಕೊಲೆ!

ಇದೊಂದು ದ್ವೇಷಪೂರಿತ ಮತ್ತು ಪೂರ್ವನಿಯೋಜಿತ ಕೊಲೆ. ಮುಸ್ಲಿಮರು ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿ ನಾಥನಿಯಲ್ ವೆಲ್ಟ್ ಮನ್ ವಿರುದ್ಧ ಕೊಲೆ, ಕೊಲೆ ಪ್ರಯತ್ನ ಸೇರಿ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಭಯೋತ್ಪಾದನೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಬಹುದೆ? ಎಂದು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರಿಡೊ ಆಘಾತ ವ್ಯಕ್ತಪಡಿಸಿದ್ದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಾವು ನಿಮ್ಮೊಂದಿಗೆ ಇದ್ದೆವೆ, ಭಯಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. 

 

Follow Us:
Download App:
  • android
  • ios