ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ: ಸಿಲಿಕಾನ್ ಸಿಟಿ ಜನರೇ ಎಚ್ಚರ..!

By Suvarna NewsFirst Published Jul 3, 2020, 2:02 PM IST
Highlights

ಬೆಂಗಳೂರಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಪುಟ್ಟ ಮಕ್ಕಳನ್ನೂ ಮಹಾಮಾರಿ ಬಾಧಿಸುತ್ತಿದೆ. ಒಂದೇ ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಬೆಂಗಳೂರು(ಜು.03): ಬೆಂಗಳೂರಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಪುಟ್ಟ ಮಕ್ಕಳನ್ನೂ ಮಹಾಮಾರಿ ಬಾಧಿಸುತ್ತಿದೆ. ಒಂದೇ ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸಿಲಿಕಾನ್ ಸಿಟಿ ಜನರು ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಜನರಲ್ಲಿ ಆತಂಕ ಹೆಚ್ಚಿಸುವಂತಹ ವರದಿ ಹೊರ ಬಿದ್ದಿದ್ದು, ಕೊರೋನಾ ಸೋಂಕು ಹತ್ತು ವರ್ಷದೊಳಗಿನ ಮಕ್ಕಳನ್ನೂ ಬಿಡದೇ ಕಾಡಿರುವುದು ತಿಳಿದುಬಂದಿದೆ.

ಗುಡ್‌ ನ್ಯೂಸ್: ಆಗಸ್ಟ್ 15ಕ್ಕೆ ಕೊರೋನಾಗೆ ಭಾರತೀಯ ಮದ್ದು ಸಿದ್ದ..!

ಪ್ರತೀ ದಿನವೂ ಮಕ್ಕಳ ಮೇಲೆ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಮಕ್ಕಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಒಂದೇ ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ಪಾಸಿಟಿವ್ ಆಗಿದೆ.

ಜೂನ್ 27ರಂದು 14 ಮಕ್ಕಳಿಗೆ ಸೋಂಕು ತಗುಲಿದ್ದು, ಜೂನ್ 28ರಂದು 23 ಮಕ್ಕಳಿಗೆ ಪಾಸಿಟಿವ್ ಆಗಿದೆ. ಜೂನ್ 30ರಂದು 20 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಜುಲೈ ಒಂದರಂದು 19 ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಲಾಕ್‌ಡೌನ್ ಹೊರತುಪಡಿಸಿ ಕೋವಿಡ್ ತಡೆಗೆ ಇರುವ ಮಾರ್ಗಗಳೇನು? ವೈದ್ಯರು ಹೇಳೋದೇನು?

ಜುಲೈ 2ರಂದು ಬರೋಬ್ಬರಿ 31 ಮಕ್ಕಳಲ್ಲಿ ಹೆಮ್ಮಾರಿ ಕಾಣಿಸಿಕೊಂಡಿದ್ದು, ಪೋಷಕರು ಮಕ್ಕಳನ್ನ ಕೊರೊನಾದಿಂದ ಕಾಪಾಡಿಕೊಳ್ಳಬೇಕಿದೆ. ಪುಟ್ಟ ಮಕ್ಕಳಿದ್ದು, ನೀವು ಎಚ್ಚರ ತಪ್ಪಿದರೆ ಮಕ್ಕಳ ಜೊತೆ ಕೋವಿಡ್ ವಾರ್ಡ್ ಸೇರಬೇಕಾದೀತು. ಹಾಗಾಗಿ ಜನರು ಇನ್ನಷ್ಟು ಎಚ್ಚರದಿಂದಿರಬೇಕಾಗಿದೆ.

click me!