ಮೈಸೂರಿನಲ್ಲಿ ಕರ್ಫ್ಯೂ: ನಿಯಮಗಳು ಇನ್ನಷ್ಟು ಬಿಗಿ

Suvarna News   | Asianet News
Published : Jul 03, 2020, 01:36 PM IST
ಮೈಸೂರಿನಲ್ಲಿ ಕರ್ಫ್ಯೂ: ನಿಯಮಗಳು ಇನ್ನಷ್ಟು ಬಿಗಿ

ಸಾರಾಂಶ

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರಿನಲ್ಲಿ ಮತ್ತಷ್ಟು ಬಿಗಿ ನಿಯಮಗಳು ಜಾರಿಯಾಗಲಿವೆ. ಸಂಜೆ 6 ಗಂಟೆ ನಂತರ ಕಟ್ಟುನಿಟ್ಟಾಗಿ ಕರ್ಫ್ಯೂ ಜಾರಿಯಾಗಲಿದೆ.

ಮೈಸೂರು(ಜು.03): ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರಿನಲ್ಲಿ ಮತ್ತಷ್ಟು ಬಿಗಿ ನಿಯಮಗಳು ಜಾರಿಯಾಗಲಿವೆ. ಸಂಜೆ 6 ಗಂಟೆ ನಂತರ ಕಟ್ಟುನಿಟ್ಟಾಗಿ ಕರ್ಫ್ಯೂ ಜಾರಿಯಾಗಲಿದೆ.

ಸಂಜೆ 6ರಿಂದ ಬೆಳಗ್ಗೆ 5ರವರೆಗೆ ನಗರಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದ್ದು, ಕರ್ಫ್ಯೂ ಅವಧಿಯಲ್ಲಿ ಜನ, ವಾಹನ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಅಂಗಡಿ ಮುಂಗಟ್ಟುಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.

ಕೊಠಡಿ ಬಾಡಿಗೆ ಪಡೆದು ಉದ್ಯಮಿ ಆತ್ಮಹತ್ಯೆ

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ನೀಡಿದ್ದು, ಅಗತ್ಯ ಸೇವೆ, ಪಾಸ್ ಇರುವ ವಾಹನ ಸಂಚಾರ ಮತ್ತು ವಹಿವಾಟುಗಳಿಗೆ 9.30ರವರೆಗೂ ಅವಕಾಶವಿದೆ. ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ ಎಂದು ತಿಳಿಸಿದ್ದಾರೆ.

ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಧರಿಸದವರಿಗೆ 200 ರೂ. ದಂಡ ವಿಧಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧಿಸಲಾಗಿದೆ. ಕಾನೂನು ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಎಚ್ಚರಿಸಿದ್ದಾರೆ.

PREV
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್