ಬಾಗಲಕೋಟೆ: ಕಲ್ಲು ಕ್ವಾರಿ ಸ್ಫೋಟಕ್ಕೆ ಬಾಲ ಕಾರ್ಮಿಕ ಸಾವು

By Kannadaprabha News  |  First Published Jul 5, 2023, 11:00 PM IST

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನರೇನೂರು ಗ್ರಾಮದ ಬಳಿ ನಾಲ್ಕು ದಿನಗಳ ಹಿಂದೆಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 


ಬಾಗಲಕೋಟೆ(ಜು.05):  ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್‌ ಆಗಿ ಹದಿನೇಳು ವರ್ಷದ ಬಾಲ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಬಾದಾಮಿ ತಾಲೂಕಿನ ನರೇನೂರು ಗ್ರಾಮದ ಬಳಿ ನಾಲ್ಕು ದಿನಗಳ ಹಿಂದೆಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ನರೇನೂರು ಗ್ರಾಮದ ರಮೇಶ್‌ ನಂದ್ಯಾಳ (17) ಮೃತಪಟ್ಟ ಬಾಲಕ. ಲಕೋಪತಿ ಎಂಬುವರಿಗೆ ಸೇರಿದ ಸ್ಟೋನ್‌ ಕ್ರಷರ್‌ನಲ್ಲಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಕ್ವಾರಿಯನ್ನು ಬಂದ್‌ ಮಾಡಿಸಿದ್ದಾರೆ.

Tap to resize

Latest Videos

ಸೌದೆ ರೀತಿಯಲ್ಲಿ ಕೊಡಲಿಯಿಂದ ಹೆಂಡ್ತಿ ಕುತ್ತಿಗೆ ಸೀಳಿದ ಪಾಪಿ ಗಂಡ

ವಿಷಯ ತಿಳಿದ ಹಿನ್ನೆಲೆ ಮಂಗಳವಾರ ತಹಶೀಲ್ದಾರ್‌ ಜೆ.ಬಿ.ಮಜ್ಜಗಿ ಒಳಗೊಂಡ ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಕಲ್ಲು ಕ್ವಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣದ ಮತ್ತಷ್ಟು ಸವಿವರ ಕಲೆಹಾಕಿದ್ದು, ಸದ್ಯ ಕಲ್ಲು ಕ್ವಾರಿ ಕಾಮಗಾರಿಯನ್ನು ಬಂದ್‌ ಮಾಡಿಸಿ, ಕ್ರಮಕ್ಕೆ ಮುಂದಾಗಿದ್ದಾರೆ. ಘಟನೆ ಸಂಬಂಧ ಕೆರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!