ಹುಣಸೂರು: ಆಡುವಾಗ ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು

Kannadaprabha News   | Asianet News
Published : Jun 19, 2021, 09:02 AM IST
ಹುಣಸೂರು: ಆಡುವಾಗ ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು

ಸಾರಾಂಶ

*  ಮೈಸೂರು ಜಿಲ್ಲೆಯ ಹಣಸೂರು ತಾಲೂಕಿನ ತರೀಕಲ್‌ ಗ್ರಾಮದಲ್ಲಿ ನಡೆದ ಘಟನೆ * ಆಟ ಆಡುವಾಗ ನೀರು ತುಂಬಿದ್ದ ಬಕೆಟ್‌ಗೆ ಬಿದ್ದ ಮಗು  * ಹುಡುಕಾಟ ನಡೆಸಿದ ವೇಳೆ ಮಗುವಿನ ದೇಹ ಬಕೆಟ್‌ನಲ್ಲಿ ಪತ್ತೆ 

ಹುಣಸೂರು(ಜೂ.19): ಆಟ ಆಡುವಾಗ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ತರೀಕಲ್‌ ಗ್ರಾಮದಲ್ಲಿ ನಡೆದಿದೆ. 

ಧರ್ಮಾಪುರ ಗ್ರಾಪಂ ಮಾಜಿ ಅಧ್ಯಕ್ಷ ಸುಂದರ ರಾಜ್‌ ಎಂಬುವರ ಪುತ್ರ ಸಮರ್ಥ್‌ ಮೃತಪಟ್ಟ ಕಂದಮ್ಮ. ಗುರುವಾರ ಸಂಜೆ ಸಮರ್ಥ್‌ ತನ್ನ ಇಬ್ಬರು ಅಕ್ಕಂದಿರ ಜೊತೆ ಆಟವಾಡುತ್ತಾ, ಬಚ್ಚಲು ಮನೆಯಲ್ಲಿದ್ದ ಬಕೆಟ್‌ನಲ್ಲಿ ನೀರು ತರಲು ಹೋದವನು ಮಗುಚಿ ನೀರೊಳಗೆ ಬಿದ್ದಿದ್ದಾನೆ. 

ಅನ್ಯಜಾತಿ ಯುವಕನ ಪ್ರೀತಿಸಿದ ಪುತ್ರಿ ಕೊಲೆ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ?

ಸಾಕಷ್ಟು ಸಮಯವಾದರೂ ತಮ್ಮ ಬಾರದಿದ್ದಾಗ ಅಕ್ಕಂದಿರು ಪೋಷಕರೊಂದಿಗೆ ಹುಡುಕಾಟ ನಡೆಸಿದ ವೇಳೆ ಮಗುವಿನ ದೇಹ ಬಕೆಟ್‌ನಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
 

PREV
click me!

Recommended Stories

ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!