ಕುಡಿಯಲು ಎಣ್ಣೆ ಕೊಡಸಲಿಲ್ಲ ಎಂದು ಬಾರ್ ಮುಂದೆಯೇ ನಡುರಸ್ತೆಯಲ್ಲೇ ಹೆಂಡತಿ ಗಂಡನಿಗೆ ಥಳಿಸಿದ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು (ಜೂ.18) : ಕುಡಿದ ಅಮಲಿನಲ್ಲಿ ಕಂಡ ಹೆಂಡತಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಪತ್ನಿ ಪತಿಯ ಬಳಿ 90 ಎಣ್ಣೆಗಾಗಿ ಬೇಡಿಕೆ ಇಟ್ಟಿದ್ದು, ಆದರೆ ಗಂಡ ಕೊಡಿಸಲಿಲ್ಲ ಎಂದು ಬೀದಿಯಲ್ಲೇ ಗಂಡನಿಗೆ ಥಳಿಸಿದ್ದಾಳೆ. ಬಾರ್ ಮುಂದೆಯೇ ಗಂಡ ಹೆಂಡತಿ ಬಡಿದಾಡಿಕೊಂಡಿದ್ದಾರೆ.
ಚಿಕ್ಕಮಗಳೂರಿನ ಐಜಿ ರಸ್ತೆಯಲ್ಲಿರುವ ಬಾರಿನ ಮುಂದೆಯೇ ಚಪ್ಪಲಿಯಲ್ಲಿ ಗಂಡನಿಗೆ ಮನಬಂದಂತೆ ಪತ್ನಿ ಥಳಿಸಿದ್ದಾಳೆ. ಗಂಟೆ ಗಂಟ್ಟಲೇ ಇಬ್ಬರೂ ಹೊಡೆದಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.
ಚಿಕ್ಕಮಗಳೂರಿನ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.