ಭಾರತೀಯರು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದವರು. ಅದಕ್ಕಾಗಿ ಭಾರತವನ್ನು ಯೋಗಗುರು ಭಾರತ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕುಟುಂಬವೊಂದು ಯೋಗಕ್ಕೆ ಹೆಸರು ಮಾಡಿದ್ದು ಯೋಗ ದಂಪತಿಗಳೆಂದೆ ಮನೆ ಮಾತಾಗಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.20): ಭಾರತೀಯರು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದವರು. ಅದಕ್ಕಾಗಿ ಭಾರತವನ್ನು ಯೋಗಗುರು ಭಾರತ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕುಟುಂಬವೊಂದು ಯೋಗಕ್ಕೆ ಹೆಸರು ಮಾಡಿದ್ದು ಯೋಗ ದಂಪತಿಗಳೆಂದೆ ಮನೆ ಮಾತಾಗಿದ್ದಾರೆ.
20 ವರ್ಷಗಳಲ್ಲಿ 2500 ಕ್ಕೂ ಹೆಚ್ಚು ಜನರಿಗೆ ಯೋಗ ತರಬೇತಿ: ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನೆಲೆಸಿರುವ ರಾಘವೇಂದ್ರ ಯೋಗ ಅಸೋಸಿಯೇಷನ್‌ನ ಪ್ರಾಂಶುಪಾಲರಾದ ಗಿರೀಶ್, ವಿಜಯಾ ದಂಪತಿಗಳು ಜಿಲ್ಲೆಯಲ್ಲೇ ಯೋಗ ದಂಪತಿಗಳೆಂದೇ ಮನೆಮಾತಾಗಿದ್ದಾರೆ. ಇತ್ತೀನ ದಿನಗಳಲ್ಲಿ ಜನರಲ್ಲಿ ದಿನೇ ದಿನೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಇವೆಲ್ಲವಕ್ಕೂ ಕೂಡಾ ಸರಳ ಚಿಕಿತ್ಸೆಯೆಂದರೆ ಯೋಗ ಒಂದೇ ಎಂಬಂತಾಗಿದೆ. ಮನುಷ್ಯನ ಆರೋಗ್ಯದಲ್ಲಿ ಕಾಪಾಡುವಲ್ಲಿ ಭಾರತೀಯರ ಪ್ರಾಚೀನ ಕಾಲದ ಅಭ್ಯಾಸವನ್ನೇ ಇಂದು ವಿಶೇಷವಾಗಿ ಎಲ್ಲರು ಪಾಲಿಸುವಂತಾಗಿದೆ. ಭಾರತದ ಪ್ರಾಚೀನ ಕಾಲದ ಯೋಗವನ್ನು ಕಳೆದ 20 ವರ್ಷಗಳಿಂದ ಆಸಕ್ತರಿಗೆ ಯೋಗ ಹೇಳಿಕೊಡುವ ಕಾಯಕ ಮಾಡುತ್ತಿದೆ ಈ ಗಿರೀಶ್ ಮತ್ತು ವಿಜಯಾ ದಂಪತಿಗಳ ಕುಟುಂಬ.
ಚಿಕ್ಕಮಗಳೂರು: ಕೆರೆ ಉಸುಕಿನಲ್ಲಿ ಸಿಲುಕಿ ಮೂವರು ವಿದ್ಯಾರ್ಥಿಗಳು ಸಾವು
ಗ್ರಾಮೀಣ ಭಾಗದಲ್ಲಿ ಉಚಿತ ಯೋಗ ಶಿಬಿರ ಆಯೋಜನೆ: ಈ ದಂಪತಿ ಕೇವಲ ಯೋಗವನ್ನು ಕಲಿಸುವುದಷ್ಟೆ ಅಲ್ಲದೇಏ ಸಾಮಾಜಿಕ ಕಳಕಳಿಯ ಕಾರ್ಯಗಳನ್ನೂ ಮಾಡುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಉಚಿತ ಯೋಗ ಶಿಬಿರ ಏರ್ಪಡಿಸುತ್ತಾರೆ. ಕೋವಿಡ್ ಸಮಯದಲ್ಲಿ ಪಟ್ಟಣದ ಹಾಸ್ಟೆಲ್ ಕೋವಿಡ್ ವಾರ್ಡ್‌ನಲ್ಲಿದ್ದ 20 ಕ್ಕೂ ಹೆಚ್ಚು ಸೋಂಕಿತರಿಗೆ ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಹೇಳಿಕೊಟ್ಟು ಅವರ ಮಾನಸಿಕವಾಗಿ ಧೈರ್ಯ ಹೆಚ್ಚಿಸಿದ್ದಾರೆ. ಇವರ ಬಳಿ ಯೋಗ ಕಲಿತವರಲ್ಲಿ 8 ಜನರು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಕಡೂರಿನ ಶಾಲಿನಿ, ಶ್ರೀಕೃಪಾ, ಸಾಕ್ಷಿ, ಲಿಪಿಕಾ, ಬೆಂಕಿ ಶೇಖರಪ್ಪ ಅವರುಗಳು ಅಂತರಾಷ್ಟ್ರೀಯ ಯೋಗ ಪಟುಗಳಾಗಿ ಹೊರ ಹೊಮ್ಮಿದ್ದಾರೆ. ಶಾಲಿನಿ ಸಿಂಗಪೂರ್ನಲ್ಲಿ ನಡೆದ ಅಂತರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ವಿಜೇತೆ. ತರಬೇತಿ ಪಡೆದ ಶ್ರೀಕೃಪ ಥಾಯ್ಲೆಂಡ್ನಲ್ಲಿ ನಡೆದ ಯೋಗ ಸಮ್ಮೇಳನದಲ್ಲಿ ಅಥ್ಲೆಟಿಕ್ ಯೋಗ ಪ್ರಥಮ, ಫ್ರೀ ಫ್ಲೋ ವಿಭಾಗದಲ್ಲಿ ಪ್ರಥಮ, ಓನ್ ಚಾಯ್ಸ್ ವಿಭಾಗದಲ್ಲಿ ತೃತೀಯ, ರಿಧಮಿಕ್ ವಿಭಾಗದಲ್ಲಿ ತೃತೀಯ ಮುತ್ತು ಮಾಸ್ ಯೋಗ ವಿಭಾಗದಲ್ಲಿ ಸಾರ್ವತ್ರಿಕ ಪ್ರಶಸ್ತಿಯನ್ನು ಗಳಿಸಿದ್ದಾಳೆ. ಮತ್ತೊಬ್ಬ ಯೋಗಸಾಧಕಿ ಸಾಕ್ಷಿ ಇದೇ ಸಮ್ಮೇಳನದಲ್ಲಿ ಐದು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾಳೆ.
ಡಬಲ್ ಎಂಜಿನ್ ಸರ್ಕಾರ ಕೆಟ್ಟಿದೆ: ಬಿಜೆಪಿ ವಿರುದ್ಧ ಹರಿಹಾಯ್ದ ರಮಾನಾಥ ರೈ
ಯೋಗಕ್ಕೆ ವಿಶ್ವಮಟ್ಟದಲ್ಲಿ ಗೌರವ ಸಿಕ್ಕಿದೆ. ಈ ವಿದ್ಯೆ ಕಲಿತರೆ ದೇಹಾರೋಗ್ಯ, ಮಾನಸಿಕ ಸ್ಥಿರತೆ ದೊರೆತು ಒತ್ತಡ ನಿಯಂತ್ರಿಸಬಹುದು. ಹಲವು ನಿರ್ಧಿಷ್ಟ ಬಗೆಯ ರೋಗಗಳಿಗೂ ಯೋಗದಲ್ಲಿ ಪರಿಹಾರವಿದೆ. ಯೋಗದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದೇ ನಮ್ಮ ಮುಖ್ಯ ಆಶಯ ಎನ್ನುವುದು ಗಿರೀಶ್- ವಿಜಯಾ ದಂಪತಿಗಳು ಮಾತು. ಪ್ರತಿ ದಿನ ಇವರ ಬಳಿ ಜನರು ಯೋಗಾಭ್ಯಾಸ ತರಬೇತಿ ಪಡೆಯುತ್ತಿದ್ದಾರೆ. ಇದುವರೆಗೂ 2500ಕ್ಕೂ ಹೆಚ್ಚು ಜನರು ಇವರ ಬಳಿ ಯೋಗ ತರಬೇತಿ ಪಡೆದಿದ್ದಾರೆ.