ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಭದ್ರಾನದಿ ಸೇತುವೆ: 8 ವರ್ಷಗಳಿಂದ ಆಮೆಗತಿ ಕಾಮಗಾರಿ

Published : Jun 05, 2025, 05:26 PM IST
Bhadra River Bridge

ಸಾರಾಂಶ

ಭದ್ರಾ ನದಿಯ ಸೇತುವೆ ಶಿಥಿಲವಾಗಿದೇ ಡೆಂಜರ್ ಅಂತಾ ವರದಿ ನೀಡಿ ದಶಕವೇ ಅಯ್ತು, 125 ವರ್ಷದ ಹಳೆಯ ಸೇತುವೆಯನ್ನು ಕಟ್ಟಿದ್ದು ಬ್ರಿಟಿಷರು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜೂ.05): ಭದ್ರಾ ನದಿಯ ಸೇತುವೆ ಶಿಥಿಲವಾಗಿದೇ ಡೆಂಜರ್ ಅಂತಾ ವರದಿ ನೀಡಿ ದಶಕವೇ ಅಯ್ತು, 125 ವರ್ಷದ ಹಳೆಯ ಸೇತುವೆಯನ್ನು ಕಟ್ಟಿದ್ದು ಬ್ರಿಟಿಷರು. ಆ ಸೇತುವೆ ಏನಾದ್ರು ಮುರಿದು ಬಿದ್ರೆ ಚಿಕ್ಕಮಗಳೂರು ಜಿಲ್ಲೆಯ ಮೂರು ತಾಲೂಕಿನ ಜನ ಅತಂತ್ರರಾಗ್ತಾರೆ. ಅಲ್ಲದೆ ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂಣೇಶ್ವರಿ ದೇಗುಲ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ರಸ್ತೆಯೇ ಇರುವುದಿಲ್ಲ, ಇದರಿಂದ ಸರ್ಕಾರ ಭವಿಷ್ಯದ ಹಿತದೃಷ್ಠಿಯಿಂದ ಹೊಸ ಸೇತುವೆಗೆ ಕೈ ಹಾಕಿ ಎಂಟು ವರ್ಷಗಳೆ ಕಳೆದಿದೆ.ಆದ್ರೆ ಕಾಮಗಾರಿ ಮುಗಿಯುವ ಲಕ್ಷಣ ಕಾಣ್ಣುತ್ತಿಲ್ಲ, ಅನುದಾನದ ಕೊರತೆಯಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಶಾಸಕರಿಂದಲೂ ಬೇಸರ ವ್ಯಕ್ತವಾಗಿದೆ.

2017 ರಲ್ಲಿ ಶಂಕುಸ್ಥಾಪನೆ ಮಾಡಿ 19 ಕೋಟಿ ಅನುದಾನ ಬಿಡುಗಡೆ: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಭದ್ರಾ ಸೇತುವೆ. 1889ರಲ್ಲಿ ಬ್ರಿಟಿಷರು ಕಟ್ಟಿದ್ದು. ಸುಣ್ಣದಕಲ್ಲು ಹಾಗೂ ಬೆಲ್ಲದ ಪಾನಕದಿಂದ ನಿರ್ಮಿಸಿರೋದು. ಸುಮಾರು 125 ವರ್ಷಗಳ ಹಿಂದಿನದ್ದು.ಈ ಸೇತುವೆ ದಾಟಿಯೇ ಬಾಳೆಹೊನ್ನೂರು, ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಸೇರಿದಂತೆ ನೂರಾರು ಹಳ್ಳಿಗಳಿಗೆ ಮಾರ್ಗ. ಆದ್ರೆ, ಈ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಸೇತುವೆ ಮೇಲೆ ನೀರು ನಿಲ್ಲುತ್ತೆ. ಕೆಳಭಾಗದಲ್ಲಿ ನೀರು ಲೀಕ್ ಆಗುತ್ತೆ. ಸೇತುವೆಯ ಪಿಲ್ಲರ್ಗಳ ಬಳಿ ಮರಗಿಡ ಬೆಳೆದು ಸೇತುವೆ ಆಯಸ್ಸು ಕಡಿಮೆ ಅನ್ನೋದು ಸಾಬೀತಾಗ್ತಿದೆ.

ಸರ್ಕಾರ ಮುಂಜಾಗೃತ ಕ್ರಮವಾಗಿ ಹೊಸ ಸೇತುವೆಗೆ 2017ರಲ್ಲೇ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿ 19 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದರು. 19 ಕೋಟಿ ವೆಚ್ಚದಲ್ಲಿ ಕಾಮಗಾರಿಯೇನೋ ಪ್ರಾರಂಭವಾಯ್ತು.ಅದ್ರೆ ಕಾಮಗಾರಿ ಶುರುವಾಯ್ತು ವರ್ಷನೋ ಎರಡು ವರ್ಷದೊಳಗೆ ಅಗುತ್ತೇ ಅಂದೋರಿಗೆ ಮಾತ್ರ ನಿರಾಸೆಯೇ ಅಗಿದೆ.ಅರ್ಧ ಕೆಲಸವೂ ಆಗಿಲ್ಲ. ಸೇತುವೆ ನಿರ್ಮಾಣಕ್ಕೆ ತಂದಿಟ್ಟ ವಸ್ತುಗಳೇ ವೇಸ್ಟ್ ಆಗಿವೆ. ಆದರೂ, ಸರ್ಕಾರ ಸೇತುವೆ ಕೆಲಸ ಮುಗಿಸೋದಕ್ಕೆ ಮುಂದಾಗಿಲ್ಲ. ಹಾಗಾಗಿ, ಸ್ಥಳಿಯರು ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿ ಕೂಡಲೇ ಸೇತುವೆ ಕೆಲಸ ಮುಗಿಸುವಂತೆ ಆಗ್ರಹಿಸಿದ್ದಾರೆ.

ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಆಮೆಗತಿ ಕಾಮಗಾರಿ: ಇನ್ನೂ ಈ ಸೇತುವೇ ಕಾಮಗಾರಿ ಶುರುವಾಗಿ ಇಂದಿಗೆ ಎಂಟು ವರ್ಷವಾಗಿದೆ.ಅದ್ರೆ ಹುಡುಕಿದ್ರು ಶೇಕಡ 40 ರಷ್ಟು ಮಾತ್ರ ಕಾಮಗಾರಿಯಾಗಿದೆ. ಅಗೊಮ್ಮೆ ಈಗೊಮ್ಮೆ ಮಾತ್ರ ಕಾಮಗಾರಿ ನಡೆಯೋದು ಮಾತ್ರ ಕಾಣಿಸುತ್ತೇ.ಅದಕ್ಕೆ ತಂದಿರೋ ಸಲಕರಣೆಗಳು ಪ್ರತಿವರ್ಷ ಭದ್ರೆಯ ವೀರಾವೇಷಕ್ಕೆ ಕೊಚ್ಚಿಹೋಗೋದು.ನೀರಿನೊಳಗೆ ಮುಳುಗಿ ಹಾಳಾಗೋದೇ ಅಗ್ತಿದೆ.ಮತ್ತೊಂದೇಡೆ ಈ ಹೊಸ ಸೇತುವೆ ನಿರ್ಮಾಣದ ಜಾಗದಲ್ಲಿ ಬಂಡಿಮಠ ಅನ್ನೋ ಊರಿದೇ.ಅಲ್ಲಿರೋರು ಬೇರೆಡೆ ಹೋಗ್ತಿನಿ ಅಂತಿದ್ರು ಆವ್ರಿಗೆ ಜಾಗ ಗುರುತಿಸಿದ್ದೇವೆ ಅಂತಾರೇ ಬಿಟ್ರೆ ಸ್ಥಳಾಂತಕ್ಕೆ ಮುಂದಾಗ್ತಿಲ್ಲ. ಸರ್ಕಾರ ಸೂಕ್ತವಾಗಿ ಹಣ ಬಿಡುಗಡೆ ಮಾಡಿಲ್ಲ. ಕಂಟ್ರಾಕ್ಟರ್ ಹಣವಿಲ್ಲದೆ ಕೆಲಸ ನಿಲ್ಲಿಸಿದ್ದಾರೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಕೂಡಲೇ ಹಣ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಸೇತುವೆ ಮೇಲೆ ಭಾರೀ ವಾಹನಗಳಿಗೆ ಬ್ರೇಕ್ ಹಾಕಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ. 125 ವರ್ಷಗಳ ಹಿಂದೆ ಸುಣ್ಣದಕಲ್ಲು-ಬೆಲ್ಲದ ಪಾಕದಿಂದ ಮಾಡಿದ ಸೇತುವೆಗೆ ಒಂದು ವೇಳೆ ಸಮಸ್ಯೆಯಾದ್ರೆ ಶೃಂಗೇರಿ, ಬಾಳೆಹೊನ್ನೂರು ರಂಭಾಪುರಿ ಪೀಠ, ಹೊರನಾಡು, ಕಳಸ, ಎನ್.ಆರ್.ಪುರ ಭಾಗದ ಅತಂತ್ರಕ್ಕೀಡಾಗ್ತಾರೆ ಅನ್ನೋ ಆತಂಕ ಸ್ಥಳಿಯರದ್ದು.ಮಳೆಗಾಲದಲ್ಲಿ ಭದ್ರೆಯ ಒಡೆಲು ಭಯಂಕರ ಎಂಬ ಮಾತಿದೆ ಸ್ವಲ್ಪ ಹೆಚ್ಚುಕಮ್ಮಿಯಾದರೂ ಮಲೆನಾಡಿಗರ ಭವಿಷ್ಯ ತೂಗುಯ್ಯಾಲೆಯಾಗೋದು ಗ್ಯಾರಂಟಿ. ಹಾಗಾಗಿ, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಅರ್ಧಕ್ಕೆ ನಿಂತಿರೋ ಹೊಸ ಸೇತುವೆ ಕಾಮಗಾರಿಗೆ ಕಾರಣವೇನೆಂದು ತಿಳಿದು, ಹಣದ ಸಮಸ್ಯೆಯಾಗಿದ್ರೆ ಕೂಡಲೇ ಹಣ ನೀಡಿ ಸೇತುವೆ ಕೆಲಸ ಮುಗಿಸಿದರೆ ಮಲೆನಾಡಿನ ಸಾವಿರಾರು ಜನ ನಿಟ್ಟುಸಿರು ಬಿಡೋದು ಗ್ಯಾರಂಟಿ.

PREV
Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ