
ಬೆಂಗಳೂರು(ಜೂ.05) ಐಪಿಎಲ್ ಟೂರ್ನಿಯಲ್ಲಿ 18 ವರ್ಷದ ಬಳಿಕ ಟ್ರೋಫಿ ಗೆದ್ದ ಆರ್‌ಸಿಬಿ ಇತಿಹಾಸ ಬರೆದಿತ್ತು. ಈ ಗೆಲುವಿನ ಸಂಭ್ರಮಾಚರಣೆ ದುರಂತದಲ್ಲಿ ಅಂತ್ಯವಾಗಿದೆ. ಲಕ್ಷ ಲಕ್ಷ ಅಭಿಮಾನಿಗಳು ಜಮಾವಣೆಗೊಂಡ ಕಾರಣ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ 11 ಮಂದಿ ಮತೃಪಟ್ಟರೆ, 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 18 ವರ್ಷದ ವಿಶಾಲ್ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರದ ನಿರ್ಲಕ್ಷದಿಂದ ತನ್ನ ಮಗನ ಪರಿಸ್ಥಿತಿ ಹೀಗಾಗಿದೆ ಎಂದು ಕಣ್ಣೀರಿಡುತ್ತಿರುವ ತಾಯಿ ಇದೀಗ ಆಕ್ರೋಶ ಹೊರಹಾಕಿದ್ದಾರೆ. ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆದರೆ ಇದುವರೆಗೂ ಸರ್ಕಾರದ ಒಬ್ಬನೇ ಒಬ್ಬ ಪ್ರತಿನಿಧಿ ಆರೋಗ್ಯ ವಿಚಾರಿಸಲು ಆಗಮಿಸಿಲ್ಲ, ಕುಟುಂಬದ ಜೊತೆ ನಿಂತಿಲ್ಲ ಎಂದು ಆರೋಪಿಸಿದೆ.
ಮಗನ ಉಳಿಸಿಕೊಡಿ ಎಂದು ವೈದ್ಯರ ಮುಂದೆ ತಾಯಿ ಕಣ್ಣೀರು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಗಾಯಗೊಂಡು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ವಿಶಾಲ್ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗನ ಉಳಿಸಿಕೊಡಿ ಎಂದು ವಿಶಾಲ್ ತಾಯಿ ಲಕ್ಷ್ಮಿ ಗೊಗೆರೆದಿದ್ದಾರೆ. ಇದೇ ವೇಳೆ ಆಕ್ರೋಶದಿಂದ ಸರ್ಕಾರದ ನಿರ್ಲಕ್ಷವನ್ನು ಬಯಲಿಗೆಳೆದಿದ್ದಾರೆ. ನನ್ನ ಮಗನ ಸ್ಥಿತಿ ಗಂಭೀರವಾಗಿದೆ. ಸರ್ಕಾರದ ಯಾವುದೇ ಪ್ರತಿನಿಧಿ ಆಗಮಿಸಿಲ್ಲ. ಆರೋಗ್ಯ ವಿಚಾರಿಸಿಲ್ಲ. ಕುಟುಂಬದ ಜೊತೆ ಸರ್ಕಾರ ನಿಂತಿಲ್ಲ ಎಂದು ಲಕ್ಷ್ಮಿ ಹೇಳಿದ್ದಾರೆ.
ಮೊದಲ ವರ್ಷದ ಇಂಜಿನೀಯರಿಂಗ್ ಒದುತ್ತಿರುವ ವಿಶಾಲ್
ಆರ್‌ಸಿಬಿ ಅಭಿಮಾನಿಯಾಗಿರುವ ಇಂದಿರಾನಗ ಮೊಟ್ಟಪ್ಪ ಪಾಳ್ಯ ನಿವಾಸಿ ವಿಶಾಲ್ ಖಾಸಗಿ ಕಾಲೇದಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ. ಮನೆಯಲ್ಲಿ ಹೇಳದೆ ಸ್ನೇಹಿತರ ಜೊತೆ ಆರ್‌ಸಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಸಿದ್ದ. ಆರ್‌ಸಿಬಿ ಪ್ರತಿ ಪಂದ್ಯ ವೀಕ್ಷಿಸುತ್ತಿದ್ದ ವಿಶಾಲ್, ಗೆದ್ದರು ಸೋತರೂ ಆರ್‌ಸಿಬಿಯನ್ನು ಬಂಬಲಿಸಿದ್ದರು. ಇದೀಗ 18 ವರ್ಷಗಳ ಬಳಿಕ ಟ್ರೋಫಿ ಗೆದ್ದ ಆರ್‌ಸಿಬಿ ಅಧಿಕೃತವಾಗಿ ಸಂಭ್ರಮಾಚರಣೆ ಮಾಡಿತ್ತು. ಸರ್ಕಾರ ಕೂಡ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಹೀಗಾಗಿ ಆರ್‌ಸಿಬಿ ಆಟದಾರರನ್ನು ಹತ್ತರಿಂದ ನೋಡಿ ಗೆಲುವಿನ ಖುಷಿ ಹಂಚಿಕೊಳ್ಳಲು ವಿಶಾಲ್ ಕ್ರೀಡಾಂಗಣಕ್ಕೆ ಆಗಮಿಸಿದ್ದ. ಆದರೆ ಪರಿಸ್ಥಿತಿ ದುರಂತಕ್ಕೆ ತಿರುಗಿ ಇದೀಗ ವಿಶಾಲ್ ಆರೋಗ್ಯ ಗಂಭೀರವಾಗಿದೆ.
ಜವಾಬ್ದಾರಿಯುತ ಗೃಹ ಸಚಿವರು ಹೇಳುತ್ತಿರುವುದೇನು?
ಗೃಹ ಸಚಿವ ಡಾ.ಜಿ ಪರಮೇಶ್ವರ್ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ಘಟನೆ ಎಂದೂ ಆಗಿಲ್ಲ. ಘಟನೆಯಲ್ಲಿ ನಿಧನರಾದವರ ಆತ್ಮಕ್ಕೆ ಶಾಂತಿಕೋರುತ್ತೇನೆ. ಜಿಲ್ಲಾಧಿಕಾರಿ ನೇತೃತ್ವದ ತನಿಖೆಗೆ ಆದೇಶ ಮಾಡಿದ್ದಾರೆ. ಯಾರೇ ತಪ್ಪಿತಸ್ಥರಿದ್ದರು ಕ್ರಮ ಕೈಗೊಳ್ಳುತ್ತೇವೆ. ಘಟನೆ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಮುಂದೆ ಹೀಗಾದಂತೆ ತಡೆಯಲು ನಿಯಮ ರೂಪಿಸುತ್ತೇವೆ. ದೊಡ್ಡ ಸಮಾರಂಭ ಮಾಡುವಾಗ ಪೊಲೀಸ್ ಇಲಾಖೆ ನಿಯಮದಂತೆ ಮಾಡಬೇಕು ಎಂದಿದ್ದಾರೆ.