Chikkamagaluru Utsava: ಹಬ್ಬದ ಅಂಗವಾಗಿ ದೇಶ ವಿದೇಶಗಳ ವಿವಿಧ ಬಗೆಯ ಹೂವಿನ ಲೋಕವೇ ಸೃಷ್ಟಿ!

By Suvarna NewsFirst Published Jan 17, 2023, 5:13 PM IST
Highlights

ಚಿಕ್ಕಮಗಳೂರು ನಗರದ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಹೂವಿನಲೋಕವೇ ಸೃಷ್ಟಿಯಾಗಲಿದೆ. ದೇಶ ವಿದೇಶಗಳ ವಿವಿಧ ಬಗೆಯ ಬಣ್ಣಗಳ ಹೂವುಗಳು ಕಣ್ಮನ ಸೆಳೆಯಲಿದ್ದು, 150 ಕ್ಕೂ ವಿವಿಧ ಜಾತಿಯ ಹೂವುಗಳು 100ಅಧಿಕ ವಿವಿಧ ಬಣ್ಣಗಳ ಹೂವುಗಳನ್ನು ಈಗಾಗಲೇ ಜಿಲ್ಲೆಗೆ ತರಿಸಲಾಗಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.17): ಚಿಕ್ಕಮಗಳೂರು ಹಬ್ಬದ ಉದ್ಘಾಟನೆಗೆ ಎರಡು ದಿನಗಳು ಬಾಕಿವಿರುವಾಗಲೇ  ಜಿಲ್ಲಾ ಹಬ್ಬ ರಂಗೇರುತ್ತಿದೆ. ಚಿಕ್ಕಮಗಳೂರು ನಗರದಲ್ಲಿ ಹಬ್ಬದ ವಾತವರಣ ಕಳೆಗಟ್ಟುತ್ತಿದೆ. ಚಿಕ್ಕಮಗಳೂರು ಹಬ್ಬದಲ್ಲಿ ಜನರ ಮನತಣಿಸುವಂತಹ ಹೂವಿನ ಲೋಕವೇ ಸೃಷ್ಟಿಯಾಗಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ದೇಶ ವಿದೇಶಗಳ ವಿವಿಧ ಬಗೆಯ ಹೂವಿನ ತಳಿಗಳು ನಗರಕ್ಕೆ ಆಗಮಿಸಿವೆ.

150ಕ್ಕೂ ವಿವಿಧ ಜಾತಿಯ ಹೂವುಗಳು:
ಚಿಕ್ಕಮಗಳೂರು ನಗರದ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಹೂವಿನಲೋಕವೇ ಸೃಷ್ಟಿಯಾಗಲಿದೆ. ದೇಶ ವಿದೇಶಗಳ ವಿವಿಧ ಬಗೆಯ ಬಣ್ಣಗಳ ಹೂವುಗಳು ಕಣ್ಮನ ಸೆಳೆಯಲಿದ್ದು, 150 ಕ್ಕೂ ವಿವಿಧ ಜಾತಿಯ ಹೂವುಗಳು 100ಅಧಿಕ ವಿವಿಧ ಬಣ್ಣಗಳ ಹೂವುಗಳನ್ನು ಈಗಾಗಲೇ ಜಿಲ್ಲೆಗೆ ತರಿಸಲಾಗಿದೆ. ಇದರಲ್ಲಿ ದೇಶಿಯ ವೈವಿಧ್ಯಮಯ ಹೂವುಗಳು ಹಾಗೂ ವಿದೇಶಿ ಹೂವುಗಳನ್ನು ತರಿಸಲಾಗಿದ್ದು ಐದು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ.ವಿವಿಧ ಬಗೆಯ ಹೂವುಗಳನ್ನು ಪೂನ, ಬೆಂಗಳೂರು ಮತ್ತು ಬೆಳಗಾವಿಯಿಂದ ತರಿಸಲಾಗಿದ್ದು, ರಾಮ್ ವಾಟಿಕ್ಪುಣೆ ಮತ್ತು ಪವನ್ ಆಗ್ರೋ ಬೆಳಗಾವಿ ಇಲ್ಲಿಂದ ಹೂವಿನ ಕುಂಡಗಳನ್ನು ತರಿಸಿಕೊಳ್ಳಲಾಗಿದೆ. ಜಿಲ್ಲಾ ಆಟದ ಮೈದಾನದಲ್ಲಿ 50 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹೂವಿನ ಉದ್ಯಾನವ ನಿರ್ಮಾಣವಾಗಲಿದ್ದು, ಜಿಲ್ಲೆಯ ಜನರ ಕಣ್ಮನ ಸೆಳೆಯಲಿದೆ.

ಕುಸ್ತಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಪ್ರಾಚೀನ ಕಲೆ: ಸಿ.ಟಿ.ರವಿ

ಹಬ್ಬದಲ್ಲಿ ವಿದೇಶಿ ಹೂವು: 
ಜರ್ಮನಿ, ಹಾಲೆಂಡ್, ಇಟಲಿ, ಬಲ್ಗೇರಿಯಾ ಸೇರಿದಂತೆ ಉತರೆ ದೇಶಗಳ ಹೂವಿನ ಕುಂಡಗಳು ಇದ್ದು, ಇದರೊಟ್ಟಿಗೆ ದೇಶಿಯ ಹೂವಿನ ಕುಂಡಗಳು ಇರಲಿವೆ. 35 ಸಾವಿರ ಹೂವಿನ ಕುಂಡಗಳನ್ನು ತರಿಸಲಾಗಿದ್ದು, ಒಳಾಂಗಣ ಮತ್ತು ಹೊರಾಂಗಣ ಸಸ್ಯಗಳನ್ನು ಹೊಂದಿವೆ. ಇದರಲ್ಲಿ ವಿದೇಶದಿಂದ ಆಮದು ಮಾಡಿ ಕೊಂಡಿರುವ ಮತ್ತು ದೇಶಿಯ ವಿವಿಧ ಬಣ್ಣಗಳ ಸಸ್ಯಗಳನ್ನು ಒಳಗೊಂಡಿದೆ. ಈ ಸಸ್ಯಗಳು ಬಣ್ಣದ ಲೋಕವನ್ನು ಸೃಷ್ಟಿಸಲಿದೆ.ಜಿಲ್ಲೆಯ ಜನತೆ ಎಂದೂ ನೋಡಿರದ ಹೂವುಗಳನ್ನು ಇಲ್ಲಿ ಕಾಣಬಹುದಾಗಿದ್ದು, ಇದು ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದೆ.

ಚಿಕ್ಕಮಗಳೂರು ಹಬ್ಬದ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ, ಜಟ್ಟಿಗಳಿಗೆ ಪ್ರೇಕ್ಷಕರ ಚಪ್ಪಾಳೆ

ಬೃಹತ್ ಆವರಣದಲ್ಲಿ ಸಚಿನ್ ರಾಮನಾಥ್ ಅವರ ಕೈಚಳಕದಲ್ಲಿ ಈ ಹೂವಿನ ಲೋಕ ಸೃಷ್ಟಿಯಾಗಲಿದ್ದು, ಕುದುರೆ, ಆನೆ, ರೈತ, ಜೋಕರ್, ಎತ್ತು, ದೇಹದಾಂಢ್ಯ, ಆನೆ, ದೇವರ ಪ್ರತಿಮೆ, ಹಸು, ಕರು ಈ ಸ್ತಬ್ಧಚಿತ್ರಗಳ ಸುತ್ತಲು ಹೂವಿನ ಕುಂಡಗಳನ್ನು ಇರಿಸಿ ಅಲಂಕರಿಸಲಾಗುತ್ತದೆ. ರಾತ್ರಿ ವೇಳೆ ಜಗಮಗಿಸುವ ವಿದ್ಯುತ್ ದೀಪಾಲಂಕಾರದಲ್ಲಿ ವಿಭಿನ್ನ ಸಸ್ಯಲೋಕವೇ ಸೃಷ್ಠಿಯಾಗಲಿದೆ. ದೇಶ ವಿದೇಶಗಳ ಹೂವುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಸ್ತಬ್ಧಚಿತ್ರಗಳ ನಡುವೆ ಹೂವಿನ ಕುಂಡಗಳನ್ನು ಇಟ್ಟು ಅಲಂಕರಿಸಲಾಗುತ್ತದೆ. ಪುಷ್ಪ ಪ್ರದರ್ಶನಕ್ಕಾಗಿ 35ಸಾವಿರ ಹೂವಿನ ಕುಂಡಗಳನ್ನು ತರಲಾಗಿದೆ. 150 ವಿವಿಧ ಜಾತಿಯ ಹೂವುಗಳು 100ಕ್ಕೂ ಅಧಿಕ ಬಣ್ಣದ ಹೂವುಗಳು ಇದ್ದು, ಕಲಾವಿದ ಸಚಿನ್ ರಾಮನಾಥ್ ಇದಕ್ಕೊಂದು ಮೂರ್ತರೂಪ ನೀಡಲಿದ್ದಾರೆ. ಇದು ವಿಶೇಷ ಪುಷ್ಪಪ್ರದರ್ಶನ ವಾಗಿದೆ. ದೇಶ ಸೇರಿದಂತೆ ವಿದೇಶಗಳ ವಿವಿಧ ಬಗೆಯ ಹೂವುಗಳ ಅಂದವನ್ನು ಸವಿಯಲು ಇದು ಸುವರ್ಣಾವಕಾಶವಾಗಿದೆ.

click me!