25ನೇ ವಯಸ್ಸಿಗೆ ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಗಾಯಿತ್ರಿ ಆಯ್ಕೆ

By Ravi Janekal  |  First Published Jan 17, 2023, 4:44 PM IST

ಕರ್ನಾಟಕ ಹೈಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಎನ್.ಗಾಯಿತ್ರಿ ರವರು ಆಯ್ಕೆಯಾಗಿ ಬಂಗಾರಪೇಟೆ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌(Karnataka Civil Court)ನ  ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.


ಕೋಲಾರ (ಜ.17) : ಕರ್ನಾಟಕ ಹೈಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಎನ್.ಗಾಯಿತ್ರಿ ರವರು ಆಯ್ಕೆಯಾಗಿ ಬಂಗಾರಪೇಟೆ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌(Karnataka Civil Court)ನ  ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯ(Highcourt of karnataka)(ವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು.  ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ(N.Gayatri) ಅವರು ಆಯ್ಕೆಯಾಗಿದ್ದಾರೆ.

Latest Videos

undefined

ವಿಮಾನ ಹಾರಿಸುವ ಮೊದಲು ಅಪ್ಪನ ಆಶೀರ್ವಾದ ಪಡೆದ ಮಹಿಳಾ ಪೈಲಟ್

ಅತ್ಯಂತ ತಳ ಸಮುದಾಯದ ಮತ್ತು ಬಡತನದ ಹಿನ್ನೆಲೆಯಿಂದ ಬಂದ ಗಾಯತ್ರಿರವರು ಬಂಗಾರಪೇಟೆ(Bangarapete)ಯ ಕಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಧ್ಯಾಭ್ಯಾಸ ಆರಂಭಿಸಿ  ಬಾಲಕಿಯ ಪ್ರೌಢಶಾಲೆಯಲ್ಲಿ ಓದಿ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದುಕೊಂಡಿದ್ದರು. ಕೆಜಿಎಫ್‌ನ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯಲ್ಲಿ ಕರ್ನಾಟಕಕ್ಕೆ ನಾಲ್ಕನೆ‌ ಶ್ರೇಣಿಯನ್ನು ಪಡೆದುಕೊಂಡು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದರು.

ಯುವಪೀಳಿಗೆಯಲ್ಲಿ ಸಾಧಿಸುವ ಛಲ ಕೊನೆಯಾಗಬಾರದು: ಸಚಿವ ಸುಧಾಕರ್‌ ಸಲಹೆ

ಗಾಯತ್ರಿರವರು ಬಂಗಾರಪೇಟೆಯ  ನಾರಾಯಣಸ್ವಾಮಿ ವೆಂಕಟಲಕ್ಷ್ಮಿರವರ ಒಬ್ಬಳೇ ಮಗಳಾಗಿದ್ದು ತೀರಾ ಬಡತನದಲ್ಲಿ ಬೆಳೆದ ಗಾಯಿತ್ರಿರವರು ಮೊದಲಿನಿಂದಲೂ ಸಾಮಾಜಿಕ ಕಾಳಜಿಹೊಂದಿದ್ದು  ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರು. ಇದೀಗ 25ನೇ ವಯಸ್ಸಿಗೆ ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಹೆಮ್ಮೆ ಪಡುವಂತಾಗಿದೆ.

click me!