ಬೆಂಗಳೂರಲ್ಲೊಂದು ಹಿಟ್‌ ಅಂಡ್‌ ರನ್: ವೃದ್ಧನನ್ನು ದರದರನೆ ಎಳೆದೊಯ್ದ ಬೈಕ್‌

By Sathish Kumar KHFirst Published Jan 17, 2023, 4:29 PM IST
Highlights

ತನ್ನ ವಾಹನಕ್ಕೆ ಗುದ್ದಿದ ಬೈಕ್‌ ತೆಗೆದುಕೊಂಡು ಹೋಗದಂತೆ ವೃದ್ಧನು ಹಿಡಿದುಕೊಂಡು ನೇತು ಬಿದ್ದಿದ್ದರೂ ಅದನ್ನು ಲೆಕ್ಕಿಸದೇ ಸುಮಾರು 1.5 ಕಿ.ಮೀ. ನಷ್ಟು ದೂರ ರಸ್ತೆಯಲ್ಲಿ ವೃದ್ಧನನ್ನು ಎಳೆದುಕೊಂಡು ಹೋಗಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಮಾಗಡಿ ಟೋಲ್‌ಗೇಟ್‌ ಬಳಿ ನಡೆದಿದೆ. 

ಬೆಂಗಳೂರು (ಜ.17): ನಿಂತಿದ್ದ ಬುಲೆರೋ ವಾಹನಕ್ಕೆ ರಾಂಗ್‌ ರೂಟ್‌ನಲ್ಲಿ ಬಂದು ಗುದ್ದಿರುವುದನ್ನು ಪ್ರಶ್ನೆ ಮಾಡಿದ ವೃದ್ಧನೊಂದಿಗೆ ಆರೋಪಿ ಗಲಾಟೆ ಮಾಡಿದ್ದಾನೆ. ನಂತರ, ತನ್ನ ವಾಹನಕ್ಕೆ ಗುದ್ದಿದ ಬೈಕ್‌ ತೆಗೆದುಕೊಂಡು ಹೋಗದಂತೆ ವೃದ್ಧನು ಹಿಡಿದುಕೊಂಡು ನೇತು ಬಿದ್ದಿದ್ದರೂ ಅದನ್ನು ಲೆಕ್ಕಿಸದೇ ಸುಮಾರು 1.5 ಕಿ.ಮೀ. ನಷ್ಟು ದೂರ ರಸ್ತೆಯಲ್ಲಿ ವೃದ್ಧನನ್ನು ಎಳೆದುಕೊಂಡು ಹೋಗಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಮಾಗಡಿ ಟೋಲ್‌ಗೇಟ್‌ ಬಳಿ ನಡೆದಿದೆ. 

ಬೆಂಗಲೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಈ ಹಾರಿಬಲ್‌ ಆಕ್ಸಿಡೆಂಟ್ ಘಟನೆ ನಡೆದಿದೆ. ಬುಲೆರೋ ವಾಹನವನ್ನು ನಿಲ್ಲಿಸಿಕೊಳ್ಳಲಾಗಿತ್ತು. ಟೋಲ್ ಗೇಟ್ ಬಳಿ ಟಾಟಾ ಸುಮೋಗೆ ಡಿಕ್ಕಿ ಹೊಡೆದ ಬೈಕ್ ಸವಾರ ರಾಂಗ್ ರೂಟ್‌ನಲ್ಲಿ ಬಂದು ಗುದ್ದಿದ್ದಾನೆ. ಇದನ್ನು ಪ್ರಶ್ನೆ ಮಾಡುತ್ತಿದ್ದಂತೆ ಗಲಾಟೆ ಮಾಡಿ ಡಸ್ಕೇಪ್‌ ಆಗಲು ಮುಂದಾಗಿದ್ದಾನೆ. ಬೈಕ್ ಹತ್ತಿ ಎಸ್ಕೇಪ್ ಆಗಲು ಮುಂದಾದ ಬೈಕ್ ಸವಾರ. ಆಗ ಬೈಕ್ ಸವಾರನನ್ನ ಹಿಡಿಯಲು ಚಾಲಕ ಮುಂದಾದರೂ ಅದನ್ನು ಲೆಕ್ಕಿಸದೇ ಬೈಕ್‌ ಜೋರಾಗಿ ಓಡಿಸಿಕೊಂಡು ಹೋಗಿದ್ದಾನೆ.

Accident Death: ರಾಜ್ಯದ ವಿವಿಧೆಡೆ ಪ್ರತ್ಯೇಕ ಅಪಘಾತ: ವಿದ್ಯಾರ್ಥಿನಿ ಸೇರಿ ಮೂವರ ಮನಕಲಕುವ ಸಾವು

ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದ ವರೆಗೆ ದರ ದರನೆ ಎಳೆದೊಯ್ದಿದ್ದಾನೆ. ವಯಸ್ಸಾದ ಚಾಲಕನನ್ನ ಬೈಕ್ ನಲ್ಲಿ ಎಳೆದೊಯ್ತುತ್ತಿರುವ ದೃಶ್ಯವನ್ನು ಸಾರ್ವಜನಿಕರು ವೀಡಿಯೋ ಮಾಡಿದ್ದಾರೆ. ಆಟೋ ಚಾಲಕರು ಮತ್ತು ಇತರರು ಬೇರೆ ವಾಹನಗಲ್ಲಿ ಬೆನ್ನಟ್ಟಿ ಬೈಕ್ ನಿಲ್ಲಿಸಿದ್ದಾರೆ. ನಂತರ, ಈ ಘಟನೆಗೆ ಕಾರಣವಾದ ಆರೋಪಿ ಬೈಕ್ ಸವಾರನಿಗೆ ಹಿಗ್ಗಾ ಮುಗ್ಗ ತಳಿಸಿದ್ದಾರೆ. ನಂತರ, ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವಿಜಯನಗರ ಪೊಲೀಸರು ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ, ಗಾಯಗೊಂಡ ವ್ಯಕ್ತಿಯನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆರೋಪಿ ಪೊಲೀಸರ ವಶಕ್ಕೆ: ಬುಲೆರೋ ವಾಹನಕ್ಕೆ ಗುದ್ದಿ, ಬೈಕ್‌ ಹಿಡಿದುಕೊಂಡ ಚಾಲಕನನ್ನು ದರದರನೆ ಎಳೆದುಕೊಂಡು ಹೋಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ನಾಯಂಡಹಳ್ಳಿ ಕಾಲೋನಿ ನಿವಾಸಿ ಆಗಿದ್ದು, ಸಾಹಿಲ್‌ (22) ಎಂದು ಗುರುತಿಸಲಾಗಿದೆ. ಮೆಡಿಕಲ್ ಸೇಲ್ಸ್ ಮೆನ್ ಆಗಿ ಕೆಲಸ ಮಾಡುವ ಸಾಹಿಲ್‌ ಮುತ್ತಪ್ಪನನ್ನು ಎಳೆದೊಯ್ದು ಪೊಲೀಸರ ಅತಿಥಿಯಾಗಿದ್ದಾನೆ. 

Mangaluru: ಬಿಜೆಪಿ ಪ್ರಚಾರ ವಾಹನ ಡಿಕ್ಕಿಯಾಗಿ ಯುವಕ ಸಾವು, ಪಾದಯಾತ್ರೆ ರದ್ದುಗೊಳಿಸಿದ ಶಾಸಕ!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುತ್ತಪ್ಪ:  ಬೈಕ್‌ನಲ್ಲಿ ಕಿಲೋಮೀಟರ್ಗಟ್ಟಲೇ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಕ್ಕೆ ಮುತ್ತಪ್ಪ ಅವರ ಕೈ ಕಾಲು ಮಂಡಿ, ಸ್ವಂಟದ ಕೆಳಗಿನ ಭಾಗ ಕಿತ್ತು ಹೋಗಿದೆ. ಮುತ್ತಪ್ಪರ ಹೊಸ ಪ್ಯಾಂಟ್ ಹರಿದು ಹೋಗಿದೆ. ಪ್ಯಾಂಟ್ , ಚೆಡ್ಡಿ ಕಿತ್ತು ಬಂದಿದ್ದ ಕೈ ಕಾಲು ಎಲ್ಲಾ ಕಡೆ ಗಾಯಗಳಾಗಿವೆ. ಸದ್ಯ ಗಾಯತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಕ್ಸ್ ರೇ ಮಾಡಿಸಿದ್ದು, ಎಕ್ಸ್ ರೇ ರಿಪೋರ್ಟ್ ಗಾಗಿ ಕಾಯಲಾಗುತ್ತಿದೆ. ಇನ್ನು ಮುತ್ತಪ್ಪ ಶಿವಯೋಗಿ ಕಂಠಪ್ಪ (70) ಹೆಗ್ಗನಹಳ್ಳಿ ನಿವಾಸಿ ಆಗಿದ್ದಾರೆ. ಪ್ರಿಂಟಿಂಗ್ ಅಂಡ್ ಪಬ್ಲಿಕೇಷನ್ಸ್ ಇಟ್ಟುಕೊಂಡಿದ್ದಾರೆ. 

ಗಾಯಾಳು ಭೇಟಿ ಮಾಡಿದ ಸಚಿವ ವಿ. ಸೋಮಣ್ಣ:  ಬೈಕ್‌ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮುತ್ತಪ್ಪನ್ನು ವಸತಿ ಸಚಿವ ವಿ.ಸೋಮಣ್ಣ ಭೇಟಿ ಮಾಡಿದ್ದಾರೆ. ಅವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರಿಗೆ ಗುದ್ದಿದ ಆರೋಪಿಯ ಬಗ್ಗೆ ಪೊಲೀಸರಿಗೆ ಹೇಳಿದ್ದರೂ ಆತನನ್ನ ಹಿಡಿಯುತ್ತಿದ್ದರು. ಆದರೆ, ಮುತ್ತಪ್ಪ ತುಂಬಾ ಧೈರ್ಯವಂತ. 71 ವರ್ಷ ವಯಸ್ಸಾಗಿದ್ದರೂ ಆತನನ್ನ ಹಿಡಿಯಲು ಮನಸ್ಸು ಮಾಡಿದ್ದಾನೆ. ಮುತ್ತಪ್ಪ ನಮ್ಮ ಬಳಿಯೇ ಇರುವಂತ ವ್ಯಕ್ತಿ. ಕಿಲೋಮೀಟರ್ ತನಕ ಆತನನ್ನ ಎಳೆದೊಯ್ಯಲಾಗಿದೆ. ಸರ್ಕಾರ ಮುತ್ತಪ್ಪರವರ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲಿದೆ. ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಸಲಾಗುತ್ತದೆ. ಮುತ್ತಪ್ಪ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

click me!