ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನೇ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿಕೊಟ್ಟ ತಹಶೀಲ್ದಾರ್‌

By Sathish Kumar KH  |  First Published Aug 22, 2023, 6:32 PM IST

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಹಶೀಲ್ದಾರ್‌ ಹಣದಾಸೆಗೆ ಭದ್ರಾ ಹುಲಿ ಸಂರಕ್ಷಿತ ಅರಣ್ಯವನ್ನೇ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಆ.22): ಅಕ್ರಮ ಭೂ ಮಂಜೂರು ಪ್ರಕರಣ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ. ಸಾಗುವಳಿ ಚೀಟಿ ನೀಡುವ ವೇಳೆಯಲ್ಲಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಅಕ್ರಮ ಭೂ ಮಂಜೂರು ಮಾಡಿದ್ದು ಸರ್ಕಾರ ತನಿಖೆಗೆ ಆದೇಶ ಮಾಡಿತ್ತು.15 ಮಂದಿ ತಹಸಿಲ್ದಾರರ್ ನೇತೃತ್ವದಲ್ಲಿ  ಅಕ್ರಮ ಭೂ ಮಂಜೂರು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ನಿತ್ಯವೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು ತನಿಖೆಗೆ ಮುಂದಾದ ಅಧಿಕಾರಿಗಳೇ ಶಾಕ್ ಗೆ ಒಳಗಾಗಿದ್ದಾರೆ. ಈಗಾಗಲೇ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ತಹಸಿಲ್ದಾರರ್ ಹುಲಿ ಸಂರಕ್ಷಿತ  ಪ್ರದೇಶವನ್ನು ಕೂಡ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿರುವುದು ಅರಣ್ಯ ಇಲಾಖೆಯಲ್ಲಿ ತೀವ್ರ ಸಂಚಲನವನ್ನೇ ಮೂಡಿಸಿದೆ.

Tap to resize

Latest Videos

undefined

ಹುಲಿ ಸಂರಕ್ಷಿತ  ಪ್ರದೇಶ ಖಾಸಗಿ ವ್ಯಕ್ತಿಗೆ ಪರಭಾರೆ : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ರಾಜ್ಯದಲ್ಲೇ ಅತಿ ದೊಡ್ಡ ಲ್ಯಾಂಡ್ ಸ್ಕ್ಯಾಂ ಆಗಿದೆ. ಸರ್ಕಾರಿ ಭೂಮಿಯನ್ನು ಬೇಕಾಬಿಟ್ಟಿಯಾಗಿ ತಹಸಿಲ್ದಾರ್ ಉಮೇಶ್ ಮಂಜೂರು ಮಾಡಿದ್ದಾರೆ. ಕಡೂರಲ್ಲಿ 3,500 ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿರುವ ಆರೋಪವಿದೆ. ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯ ನಕಲಿ ದಾಖಲೆ ಸೃಷ್ಟಿಸಿ ಫಾರಂ 50, 53 ಹಾಗೂ 57ರಲ್ಲಿ ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ಮಾಡಿಕೊಟ್ಟಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿದವರು, ಕಡಗಳಿಗೆ ಸಹಿ ಹಾಕಿದವರಿಗೆ ಈಗ ಬಂಧನದ ಭೀತಿ ಎದುರಾಗಿದೆ.

ಒಣ ದ್ರಾಕ್ಷಿ ಬೆಲೆಯಲ್ಲಿ ಭಾರಿ ಕುಸಿತ, ಪ್ರತಿ ಕೆ.ಜಿ.ಗೆ 100 ರೂ.ಗೆ ಇಳಿಕೆ: ರೈತರು ಕಂಗಾಲು

ಸರ್ಕಾರದಿಂದ ತನಿಖೆಗೆ ನಿಯೋಜನೆಗೆ ಒಳಪಟ್ಟಿರುವ 15 ಮಂದಿ ತಹಸಿಲ್ದಾರರ್ ನೇತೃತ್ವ ತಂಡಕ್ಕೆ ನಿತ್ಯವೂ ಶಾಕ್ ಮೇಲೆ  ಶಾಕ್ ಗೆ ಒಳಾಗುತ್ತಿದ್ದಾರೆ. ಕಡೂರು ತಹಸಿಲ್ದಾರ್ ಉಮೇಶ್ ಅವಧಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಮುಂದಾಗಿರುವ ತನಿಖಾ ತಂಡಕ್ಕೆ ಮಹತ್ವ ದಾಖಲೆಗಳು ಪತ್ತೆ ಆಗಿದೆ. ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ಹುಲಿ ಸಂರಕ್ಷಿತ ಪ್ರದೇಶವನ್ನೇ ಖಾಸಗಿಯವರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ. ಸೆಕ್ಷನ್ 4ರಡಿ ಪ್ರಾಥಮಿಕ ಅಧಿಸೂಚನೆಯಾಗಿ, ತದ ನಂತರ, ಟೈಗರ್ ರಿಸರ್ವ್ ಎಂದು ಘೋಷಿತವಾಗಿದ್ದರೂ 18 ಜನರಿಗೆ ಆ ಭೂಮಿಯನ್ನು ಅರಣ್ಯ ಇಲಾಖೆಯವರ ಗಮನಕ್ಕೆ ಬಾರದ ರೀತಿಯಲ್ಲಿ ತಹಸೀಲ್ದಾರ್ ಮಂಜೂರು ಮಾಡಿದ್ದಾರೆ.

ಅರಣ್ಯ ಇಲಾಖೆಯಲ್ಲಿ ತೀವ್ರ ಸಂಚಲನ : ಕಡೂರು ತಹಶೀಲ್ದಾರ್ ಆಗಿದ್ದ ವೇಳೆ ಉಮೇಶ್  ಹುಲಿ ಸಂರಕ್ಷಿತ ಪ್ರದೇಶವನ್ನೇ ಖಾಸಗಿಯವರಿಗೆ ಪರಭಾರೆ ಮಾಡಿಕೊಟ್ಟ ಪ್ರಕರಣ ಅರಣ್ಯ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಇಂತಹ ಇನ್ನಷ್ಟು ಪ್ರಕರಣ ಇರಬಹುದೆಂಬ ಸಂಶಯದಲ್ಲಿ ಸಮಗ್ರ ಪರಿಶೀಲನೆ ನಡೆಸಲು ಚಿಂತನೆ ನಡೆಸಿದೆ. ಈಗಾಗಲೇ ಈ ಹಿಂದೆ ತಹಸಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮೇಶ್ ಸೇರಿದಂತೆ ಶಿರಸ್ತೇದಾರ್, ರಾಜಸ್ವ ನಿರೀಕ್ಷಕರ ವಿರುದ್ದ ಕ್ರಿಮಿನಲ್ ಕೇಸ್ ನ್ನು ಕಡೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ಸರ್ಕಾರಿ ಭೂಮಿಗೆ ನಕಲಿ ಅಪ್ಪ-ಅಮ್ಮನನ್ನ ಸೃಷ್ಠಿಸಿ ಭೂಮಿಯನ್ನ ಕಬಳಿಸಿರುವ ಅಂಶ ಬೆಳಕಿಗೆ ಬಂದಿದೆ. ಇದು ರಾಜ್ಯದಲ್ಲೇ ಅತಿ ದೊಡ್ಡ ಲ್ಯಾಂಡ್ ಸ್ಕ್ಯಾಂ ಆಗಿದೆ.

ಅರ್ಧ ಕರ್ನಾಟಕ ಬರಗಾಲ, ಮುಂದೆಯೂ ಮಳೆ ಮುನ್ಸೂಚನೆಯಿಲ್ಲ: ಸಚಿವ ಕೃಷ್ಣಬೈರೇಗೌಡ

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಂಜುನಾಥ್ ಸೇರಿದಂತೆ ಒಟ್ಟು 18 ಮಂದಿಗೆ ಅಕ್ರಮವಾಗಿ ಭೂ ಮಂಜೂರು ಮಾಡಲಾಗಿದೆ. ಈಗಾಗಲೇ ಅರಣ್ಯ ಇಲಾಖೆಯಿಂದಲೂ ತನಿಖೆ ನಡೆಯುತ್ತಿದ್ದು ಸಂಬಂಧಪಟ್ಟವರಿಗೆ ನೋಟೀಸ್ ನೀಡಲಾಗಿದೆ. ಒಟ್ಟಾರೆ ಕಡೂರು ಮೂಡಿಗೆರೆಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ತನಿಖೆಯಿಂದ ಮುತ್ತಷ್ಟು ಅಕ್ರಮಗಳ ಹೊರಬರುತ್ತಿದೆ. ಸರ್ಕಾರಿ ಭೂಮಿ ಅಂದ್ರೆ ಅಪ್ಪ-ಅಮ್ಮ ಇಲ್ಲದಂತ ಅನಾಥ ಮಕ್ಕಳಂತೆ ಎಂದು ಸಿಕ್ಕಿ-ಸಿಕ್ಕ ಜಾಗಕ್ಕೆಲ್ಲಾ ಬೇಲಿ ಹಾಕ್ಕೊಂಡು ನಂದೇ ಅಂದೋರ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ.

click me!