ಮುತಾಲಿಕ್‌ಗೆ ಬೆಂಬಲ ನೀಡಿ, ಚಿಕ್ಕಮಗಳೂರು ಶ್ರೀರಾಮಸೇನೆ ಸಂಘಟನೆಯಿಂದ ಬಿಜೆಪಿ ನಾಯಕರಿಗೆ ಎಚ್ಚರಿಕೆ

By Suvarna News  |  First Published Feb 4, 2023, 5:34 PM IST

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸದಂತೆ  ಶ್ರೀ ರಾಮಸೇನೆ ಮನವಿ ಮಾಡಿದೆ. ಒಂದು ವೇಳೆ ನಿಲ್ಲಿಸಿದರೆ  ಚಿಕ್ಕಮಗಳೂರಿನಲ್ಲಿ ಸಿ ಟಿ ರವಿ ವಿರುದ್ಧ ಶ್ರೀ ರಾಮಸೇನೆ ಕಾರ್ಯಕರ್ತರು ಕಣಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ.


ಚಿಕ್ಕಮಗಳೂರು (ಫೆ.4): ಮುಂಬರುವ ವಿಧಾನಸಭಾ ಚುನಾವಣಿಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ಹಾಕದಂತೆ ಚಿಕ್ಕಮಗಳೂರು ಜಿಲ್ಲೆಯ ಶ್ರೀರಾಮಸೇನೆಯ ಸಂಘಟನೆ ಒತ್ತಾಯಿಸಿದೆ. ಈ ಬಗ್ಗೆ  ಚಿಕ್ಕಮಗಳೂರು ಜಿಲ್ಲೆಯ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್‌ ಶೆಟ್ಟಿ ಬಿಜೆಪಿ ನಾಯಕರು ಪ್ರಮೋದ್ ಮುತಾಲಿಕ್‌ಗೆ ಬೆಂಬಲಿಸಲಿ ಎಂದು ಒತ್ತಾಯಿಸಿದ್ದಾರೆ. ಕಳೆದ 47 ವರ್ಷಗಳಿಂದ ಮನೆ ಬಿಟ್ಟು ಬ್ರಹ್ಮಚಾರಿಯಾಗಿ ಸಮಾಜವೇ ಕುಟುಂಬ, ದೇಶವೇ ನನ್ನ ಮನೆ ಎಂದು ಪ್ರಮೋದ್ ಮುತಾಲಿಕ್ ಅವರು ದೇಶ, ಧರ್ಮಕ್ಕಾಗಿ ಹೋರಾಡುತ್ತಿದ್ದಾರೆ. ಈ ಹಿಂದೆ ಬಹಳಷ್ಟು ರಾಜಕೀಯ ಅವಕಾಶವಿದ್ದಾಗಲೂ ತಿರಸ್ಕರಿಸಿದ್ದರು ಎಂದು ತಿಳಿಸಿದ್ದಾರೆ.

ಪ್ರಮೋದ್ ಮುತಾಲಿಕ್‌ಗೆ ಬಿಜೆಪಿ ಬೆಂಬಲಿಸಲಿ
ಭ್ರಷ್ಟಾಚಾರ, ಹಿಂದು ವಿರೋಧಿ ನೀತಿ, ಹಿಂದು ನಾಯಕರು ಮತ್ತು ಕಾರ್ಯಕರ್ತರ ಕಡೆಗಣನೆ, ಅನವಶ್ಯಕ ದೂರು ದಾಖಲು ಮುಂತಾದ ರೀತಿಯಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ ಪ್ರಾಮಾಣಿಕ, ಬದ್ಧತೆಯ ಜನಪ್ರತಿನಿಧಿಗಳನ್ನು ಸಮಾಜ ನಿರೀಕ್ಷಿಸುತ್ತಿದೆ. ಪ್ರಮೋದ್ ಮುತಾಲಿಕ್ ಸೂಕ್ತ ವ್ಯಕ್ತಿಯೆಂದು ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಸ್ಪರ್ಧೆಗೆ ನಿರ್ಧಾರವಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸದೆ ಪ್ರಮೋದ್ ಮುತಾಲಿಕ್ ಅವರನ್ನು ಬೆಂಬಲಿಸುವಂತೆ ಆಗ್ರಹಿಸಿದ್ದಾರೆ.

Tap to resize

Latest Videos

undefined

ಸಿ ಟಿ ರವಿ ವಿರುದ್ಧ ಶ್ರೀ ರಾಮಸೇನೆ ಕಾರ್ಯಕರ್ತರು ಕಣಕ್ಕೆ
ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹಿಂದು ಸಂಘಟನೆಗಳು ಗಂಭೀರ ನಿಲುವು ತೆಗೆದುಕೊಳ್ಳುತ್ತವೆ. ಕಳೆದ ಬಾರಿಯಂತ ಬಾರಿಯೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ, ರಾಷ್ಟ್ರ ನಾಯಕರ ಗಮನಕ್ಕೆ ತರುತ್ತಿದ್ದೇವೆ. ಬಿಜೆಪಿ ಬೆಳವಣಿಗೆಯಲ್ಲಿ ಪ್ರಮೋದ್ ಮುತಾಲಿಕ್ ಪಾತ್ರವೂ ಇದೆ. ಉತ್ತರ ಕರ್ನಾಟಕ, ಕರಾವಳಿಯಲ್ಲಿ ಬಿಜೆಪಿ ನೆಲೆಯೂರಲು ಅವರೇ ಕಾರಣ ಎನ್ನುವುದು ಸಮಾಜಕ್ಕೆ ತಿಳಿದಿದೆ. ಹಾಗಾಗಿ ಪ್ರಮೋದ್ ಮುತಾಲಿಕ್ ಅವರನ್ನು ಬೆಂಬಲಿಸುವಂತೆ ಒತ್ತಾಯಿಸಿದ್ದಾರೆ.

ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಬೇಡ, ಮುತಾಲಿಕ್‌ ಬೆಂಬಲಿಸಿ: ಶ್ರೀರಾಮಸೇನೆ
ಮಂಗಳೂರು: ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸುವುದು ಬೇಡ, ಪಕ್ಷೇತರರಾಗಿ ಸ್ಪರ್ಧಿಸುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸ್ಪರ್ಧೆಯನ್ನು ಬೆಂಬಲಿಸಲಿ ಎಂದು ಶ್ರೀರಾಮಸೇನೆ ಆಗ್ರಹಿಸಿದೆ.

ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್‌ ಮುತಾಲಿಕ್ ಕಣಕ್ಕೆ, ಬಿಜೆಪಿ ಹಿಂದೆ ಸರಿಯಲು ಒತ್ತಾಯ

ಗುರುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ಆನಂದ ಶೆಟ್ಟಿಅಡ್ಯಾರ್‌, ಪ್ರಮೋದ್‌ ಮುತಾಲಿಕ್‌ ಅವರು ಕಳೆದ 47 ವರ್ಷಗಳಿಂದ ಮನೆ, ಕುಟುಂಬ ತ್ಯಜಿಸಿ ದೇಶ, ಧರ್ಮಕ್ಕಾಗಿ ಹೋರಾಡುತ್ತಿದ್ದಾರೆ. ಈ ಹಿಂದೆ ಸಾಕಷ್ಟುರಾಜಕೀಯ ಅವಕಾಶಗಳು ಇದ್ದಾಗಲೂ ಅದನ್ನು ತಿರಸ್ಕರಿಸಿ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ಭ್ರಷ್ಟಾಚಾರ, ಹಿಂದು ವಿರೋಧಿ ನೀತಿ, ಹಿಂದು ನಾಯಕರ, ಕಾರ್ಯಕರ್ತರ ಕಡೆಗಣನೆ, ಅನವಶ್ಯಕ ಪ್ರಕರಣ ದಾಖಲು ಮುಂತಾದವುಗಳಿಂದ ಸಮಾಜ ರೋಸಿ ಹೋಗಿದೆ. ಈ ಹಿನ್ನೆಲೆಯಲ್ಲಿ ಮುತಾಲಿಕ್‌ ಅವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮುತಾಲಿಕ್‌ ಅವರನ್ನು ಬೆಂಬಲಿಸಬೇಕು ಎಂದರು.

ದೇಶದ್ರೋಹಿ ಮುಲಾಯಂ ಸಿಂಗ್‌ಗೆ ನೀಡಿರುವ ಪದ್ಮ ಪ್ರಶಸ್ತಿ ಹಿಂಪಡೆಯಿರಿ: ಪ್ರಮೋದ್‌ ಮುತಾಲಿಕ್

ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಮುತಾಲಿಕ್‌ ಅವರ ಮಹತ್ತರ ಪಾತ್ರವಿದೆ. ಉತ್ತರ ಕರ್ನಾಟಕ, ಕರಾವಳಿಯಲ್ಲಿ ಬಿಜೆಪಿ ಬೆಳವಣಿಗೆಗೆ ಮುತಾಲಿಕ್‌ ಅವರು ಕಾರಣರಾಗಿದ್ದಾರೆ. ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಿದರೆ ಜಿಲ್ಲೆಯಲ್ಲಿ ಹಿಂದು ಸಂಘಟನೆಗಳು ಗಂಭೀರ ನಿಲುವು ತಳೆಯಲಿವೆ. ಹಿಂದುತ್ವದ ಆಧಾರದಲ್ಲಿ ಬಿಜೆಪಿ ಮುತಾಲಿಕ್‌ ಅವರನ್ನು ಬೆಂಬಲಿಸಬೇಕು. ರಾಜ್ಯದ ಐದು ಕಡೆ ಶ್ರೀರಾಮಸೇನೆ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದರು.

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಪ್ರದೀಪ್‌ ಮೂಡುಶೆಡ್ಡೆ, ಉಪಾಧ್ಯಕ್ಷ ಹರೀಶ್‌ ಬೊಕ್ಕಪಟ್ಣ, ಸಂಘಟನಾ ಕಾರ್ಯದರ್ಶಿ ಕಿಶೋರ್‌ ನೀರುಮಾರ್ಗ, ನಗರ ಕಾರ್ಯದರ್ಶಿ ವೆಂಕಟೇಶ್‌ ಪಡಿಯಾರ್‌ ಇದ್ದರು.

click me!