Chikkamagaluru: ನಾನು ಸುಳ್ಳು ಹೇಳುವ ರಾಜಕಾರಣಿ ಅಲ್ಲ‌, ಸಿದ್ದು ವಿರುದ್ದ ಸಿ ಟಿ ರವಿ ವ್ಯಂಗ್ಯ

By Suvarna NewsFirst Published Feb 4, 2023, 4:13 PM IST
Highlights

ಕಾಂಗ್ರೆಸ್ ಪಾಕಿಸ್ತಾನದಲ್ಲಿ ಸರ್ವೇ ಮಾಡಿದರೆ 150 ಅಲ್ಲ 200 ಸ್ಥಾನಗಳೇ ಬರಬಹುದು. ಆದರೆ, ನಮ್ಮ ರಾಜ್ಯ-ದೇಶದಲ್ಲಿ ಬರಲ್ಲ. ದಿನೇ-ದಿನೇ ಕಾಂಗ್ರೆಸ್ ಗೆ ಮತ ಹಾಕೋರ ಸಂಖ್ಯೆಯೂ ಕಡಿಮೆ ಆಗ್ತಿದೆ. ಇಲ್ಲಿ ಕಾಂಗ್ರೆಸ್ ಡೆಪಾಜಿಟ್ ಉಳಿಸಿಕೊಳ್ಳೋದು ಕಷ್ಟ ಎಂಬಂತಾಗಿದೆ ಎಂದು   ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕಮಗಳೂರು (ಫೆ.4): ಕಾಂಗ್ರೆಸ್ ಪಾಕಿಸ್ತಾನದಲ್ಲಿ ಸರ್ವೇ ಮಾಡಿದರೆ 150 ಅಲ್ಲ 200 ಸ್ಥಾನಗಳೇ ಬರಬಹುದು. ಆದರೆ, ನಮ್ಮ ರಾಜ್ಯ-ದೇಶದಲ್ಲಿ ಬರಲ್ಲ. ದಿನೇ-ದಿನೇ ಕಾಂಗ್ರೆಸ್ ಗೆ ಮತ ಹಾಕೋರ ಸಂಖ್ಯೆಯೂ ಕಡಿಮೆ ಆಗ್ತಿದೆ. ಇಲ್ಲಿ ಕಾಂಗ್ರೆಸ್ ಡೆಪಾಜಿಟ್ ಉಳಿಸಿಕೊಳ್ಳೋದು ಕಷ್ಟ ಎಂಬಂತಾಗಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಚಿಕ್ಕಮಗಳೂರಿನಲ್ಲಿ  ವ್ಯಂಗ್ಯವಾಡಿದ್ದಾರೆ. ಈ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕೌಂಟರ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸಿ.ಟಿ ರವಿ ಕೂಡ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ ಕಾಂಗ್ರೇಸ್ ,ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.

ನಾನು ಪಕ್ಕಾಆರ್.ಎಸ್.ಎಸ್. ಅದರಲ್ಲಿ ನೋ ಡೌಟ್:
ನಾನು ಪಕ್ಕಾಆರ್.ಎಸ್.ಎಸ್. ಅದರಲ್ಲಿ ನೋ ಡೌಟ್. ಸಂಘ ಸಂಸ್ಕಾರ, ದೇಶಭಕ್ತಿ ಕಲಿಸುತ್ತೆ, ನಾನು ಸುಳ್ಳು ಹೇಳುವ ರಾಜಕಾರಣಿ ಅಲ್ಲ‌.‌ ನಾವು ಏನು ಹೇಳ್ತಿವೋ ಅದನ್ನೇ ಮಾಡೋರು, ಏನ್ ಮಾಡ್ತೀವೋ ಅದನ್ನೇ ಹೇಳೋರು ಎಂದರು.‌  ಸುಳ್ಳು ಯಾರು ಹೇಳುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಚೆನ್ನಾಗಿ‌ ಗೊತ್ತಿದೆ.‌ ಚಿಕ್ಕಮಗಳೂರಿಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜನ್ನ ರದ್ದು ಮಾಡಿ, ದತ್ತಪೀಠಕ್ಕೆ ಮೋಸ ಮಾಡಿದ್ದು ಸಿದ್ದರಾಮಯ್ಯ.‌ ಡಿಜೆಹಳ್ಳಿ ಹಾಗೂ ಕೆಜೆಹಳ್ಳಿ ಗ್ಯಾಂಗಿಗೆ ಸಪೋರ್ಟ್ ಮಾಡಿದ್ದು ಕಾಂಗ್ರೆಸ್.ಎಸ್.ಡಿ.ಪಿ.ಐ. ಮೇಲಿನ ಕೇಸ್ ಹಿಂಪಡೆದು, ಕೇಸ್ ಹಿಂಪಡೆದಿದ್ದು ನಾವಲ್ಲ ಅಂದವರು ಕಾಂಗ್ರೆಸ್‌. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟ್ ಬರಲ್ಲ ಎಂದಿದ್ದರು. ಜನ ಎಂ.ಪಿ. ಎಲೆಕ್ಷನ್ ನಲ್ಲಿ 25 ಸ್ಥಾನ ಗೆಲ್ಲಿಸಿದ್ದರು ಎಂದರು.‌ ಅಪ್ಪನ ಆಣೆ ಯಡಿಯೂರಪ್ಪ ಸಿಎಂ ಆಗಲ್ಲ ಎಂದಿದ್ದರು. ಬಿ.ಎಸ್.ವೈ‌. ಸಿಎಂ ಆದರೂ ಸುಳ್ಳು ಹೇಳಿದ್ದು ಯಾರೂ ಎಂದರು.‌

ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಬಿ ರಿಪೋರ್ಟ್‌ಗೆ ಸಿದ್ಧತೆ

ಸಂಕಟ ಈಗ ಸ್ಫೋಟಗೋಳ್ಳುತ್ತಿದೆ:
ಇದೇ ವೇಳೆ, ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ದಲಿತರಿಗೆ ಕಾಂಗ್ರೆಸ್ ಮೋಸ ಮಾಡ್ತು. ಆದರೆ, 
ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ಪರಮೇಶ್ವರ್ ಹಾಗೂ ಮುನಿಯಪ್ಪರನ್ನ ಸೋಲಿಸಿದ್ದು ಯಾರು. ಇದೇ ಕಾಂಗ್ರೆಸ್ಸಿಗರು. ಇದು ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎನ್ನುವಷ್ಟೇ ಬಹಿರಂಗ ಸತ್ಯ. ಸಿದ್ದು ಎದೆಯೊಳಗಿಂದ ನಾನೇ ಸೋಲಿಸಿದ್ದು ಎಂದು ಕೇಳಿಸುತ್ತೆ.‌ಪರಮೇಶ್ವರ್ ಸೋಲಿಸಲು ಹಫ್ತಾ ಯಾರಿಗೆ ಕೊಟ್ಟಿದ್ದು, ಅವರೇ ಹೊರಗಡೆ ಹೇಳಿದ್ದಾರೆ‌.‌ ಸಂಕಟವನ್ನ ಎಷ್ಟು ದಿನ ಒಳಗಡೆ ಇಟ್ಟುಕೊಳ್ಳು ಆಗುತ್ತೆ, ಸ್ಫೋಟ ಆಗಲೇಬೇಕು, ಈಗ ಆಗುತ್ತಿದೆ ಎಂದರು.

ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಸಿ.ಟಿ. ರವಿ

ಈಶ್ವರಪ್ಪನವರಿಗೆ ಸಚಿವ ಸ್ಥಾನ ನೀಡಬೇಕಿತ್ತು:
ಈಶ್ವರಪ್ಪನವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರ ಜಾಗದಲ್ಲಿ ನಾನಿದ್ದರೂ ಅದನ್ನೇ ಹೇಳುತ್ತಿದ್ದೆ. ಈಶ್ವರಪ್ಪ ಪಕ್ಷ ಕಟ್ಟಿದ ಹಿರಿಯ ನಾಯಕರಲ್ಲಿ ಒಬ್ಬರು. ಅಂದು ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.‌ ಆದರೆ, ಇಂದು ತನಿಖೆಯಲ್ಲಿ ಅವರ ಪಾತ್ರ ಇಲ್ಲವೆಂದು ಸಾಬೀತಾಗಿದೆ.‌ ಈಗ ಅವರು ಮಂತ್ರಿ ಸ್ಥಾನ ಕೇಳೋದು ತಪ್ಪಲ್ಲ, ಅವರಿಗೆ ಕೊಡಬೇಕಿತ್ತು ಎಂದರು.‌ ಅವರ ಗೌರವಕ್ಕೆ ಯಾವುದೇ ಕುಂದು ಉಂಟಾಗಲ್ಲ. ನಿನ್ನೆ ಕೂಡ ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಪಕ್ಷದ ಗೆಲುವಿನ ಬಗ್ಗೆ ಸಲಹೆ ನೀಡಿದ್ದಾರೆ.‌ ಅವರು ಯಾವತ್ತೂ ನಮ್ಮ ಹಿರಿಯ ನಾಯಕರಲ್ಲಿ ಒಬ್ಬರು. ಅವರ ಗೌರವಕ್ಕೆ ಕುಂದು ಬರಲು ಅವಕಾಶ ನೀಡುವುದಿಲ್ಲ. ಅವರು ಮಂತ್ರಿ ಆಗಿದ್ದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿಯಲ್ಲಿ ನಾನೂ ಒಬ್ಬ ಎಂದರು.‌

click me!