ಮಲೆನಾಡು, ಅರೆ ಮಲೆನಾಡು ಹಾಗೂ ಬಯಲುಸೀಮೆ ಸೇರಿ ಮೂರು ಹವಾಗುಣ ಹೊಂದಿರೋ ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆಯ ಜೀವನಾಡಿ ಅಯ್ಯನಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಆ.06): ಮೂರು ಹವಾಗುಣ ಹೊಂದಿರೋ ಕಾಫಿನಾಡಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿ. ಮಲೆನಾಡು, ಅರೆ ಮಲೆನಾಡು ಹಾಗೂ ಬಯಲುಸೀಮೆಯನ್ನು ಹೊಂದಿರುವ ಜಿಲ್ಲೆ ನಮ್ಮ ಚಿಕ್ಕಮಗಳೂರು ಆಗಿದೆ. ಮಲೆನಾಡಿನಲ್ಲಿ ಮಳೆಯಾದ್ರೆ ಬಯಲುಸೀಮೆ ಕೆರೆಗಳಿಗೆ ಜೀವಕಳೆ ಬರಲಿದೆ. ಇದರ ಸಾಲಿಗೆ ಬಯಲುಸೀಮೆ ಜೀವನನಾಡಿ ಐತಿಹಾಸಿಕ ಅಯ್ಯನಕೆರೆ ಕೋಡಿ ಬಿದ್ದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ. 2000 ಎಕರೆಗೂ ಹೆಚ್ಚಿನ ವಿಸ್ತಿರ್ಣವುಳ್ಳ ಕೆರೆ. ಅಂದಾಜು 5 ರಿಂದ 6 ಸಾವಿರ ಹೆಕ್ಟೇರ್ ನೀರಾವರಿ ಕಲ್ಪಿಸೋ ಜೀವನಾಡಿ. ಮಲೆನಾಡಿನ ಮಳೆ ಅಬ್ಬರಕ್ಕೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪ್ರವಾಸಿ ತಾಣವಾಗಿದೆ. ಕಳೆದ 15 ದಿನದ ಹಿಂದೆ ಗಿರಿ ಭಾಗದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಐತಿಹಾಸಿಕ ಅಯ್ಯನಕೆರೆ ಕಳೆದ ಮೂರು ದಿನಗಳ ಹಿಂದಯೇ ಕೋಡಿ ಬಿದ್ದಿದೆ.
undefined
ಪಂಜುರ್ಲಿ ದೈವದ ರೂಪವಾಗಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು, ಬಾಂಬ್ ಇಟ್ಟು ಹತ್ಯೆಗೈದ ದುಷ್ಕರ್ಮಿಗಳು
ರೈತರ ಮೊಗದಲ್ಲಿ ಮಂದಹಾಸ : ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಸಮೀಪವಿರುವ ಅಯ್ಯನಕರೆ ಕೋಡಿ ಬಿದ್ದಿರೋದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ಭಾಗದಲ್ಲಿ ಅತೀ ಹೆಚ್ಚಾಗಿ ಬೆಳೆಯುಲಾಗುವ ತರಿಕಾರಿ, ಅಡಿಕೆ, ತೆಂಗಿನ ಬೆಳೆಗೆ ನೀರಿನ ಮೂಲ ಅಯ್ಯನಕೆರೆ ಆಗಿದೆ. ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಕೆರೆ ಬಳಿ ತೆರಳಿ ಭೋರ್ಗರೆಯುತ್ತ ಕೋಡಿಯಿಂದ ಧುಮ್ಮಿಕ್ಕುತ್ತಿರುವ ಜಲರಾಶಿಯನ್ನು ಕಣ್ತುಂಬಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ವೀಕ್ಷಣಾ ಗೋಪುರದ ಮೇಲತ್ತಿ ಯುವಕರ ಮೋಜು: ವೀಕೆಂಡ್ ಹಿನ್ನೆಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯನಕೆರೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ತುಂಬಿದ ಕೆರೆಯಲ್ಲಿ ಕೆಲ ಯುವಕರು ಹುಚ್ಚಾಟ ನಡೆಸುತ್ತಿದ್ದಾರೆ. ಕೆರೆಯ ವೀಕ್ಷಣಾ ಗೋಪುರದ ಮೇಲತ್ತಿ ಯುವಕರ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಅಯ್ಯನಕೆರೆ ಕೋಡಿಯ ದ್ರಶ್ಯ ನೋಡಲು ಬಂದ ಕೆಲ ಪ್ರವಾಸಿಗರು ಅಪಾಯದ ಸ್ಥಳಗಳಿಗೆ ತೆರಳಿ ಸೆಲ್ಫಿಗೆ ಮುಗಿಬಿದ್ದಿದ್ದಾರೆ, ಅಲ್ಲದೆ ಪುಟ್ಟ ಮಕ್ಕಳೊಂದಿಗೆ ಕೆಲವರು ಕೆರೆಬಳಿ ತೆರಳಿ ಕೋಡಿ ಹತ್ತಿರ ನಿಂತು ಸೆಲ್ಫಿ ತೆಗೆದುಕೊಳ್ಳುವುದು , ಇನ್ನೂ ಕೆಲವರು ತೂಬಿನ ಮೇಲೆ ನಿಂತು ಮೋಜು ಮಾಡುತ್ತಿದ್ದಾರೆ.
Davanagere: ರೈತನ ಮೇಲಿನ ದ್ವೇಷಕ್ಕೆ 780 ಅಡಿಕೆ ಗಿಡ ಕತ್ತರಿಸಿದ ದುಷ್ಕರ್ಮಿಗಳು
ಯುವಕರ ಮೋಜು ಮಸ್ತಿಗೆ ಬೀಳಬೇಕಿದೆ ಕಡಿವಾಣ: ಕೆರೆ ಬಳಿ ಪ್ರವಾಸಿಗರ ನಡೆಸುತ್ತಿರುವ ಹುಚ್ಚಾಟ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಕೆಲವರು ತೂಬಿನ ಮೇಲೆ ನಿಂತು ಮೋಜು ಮಾಡುತ್ತಿರುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳೆ ಹೆಚ್ಚಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತೆ ಇದೆ. ಈ ಯುವಕರು ನಡೆಸುತ್ತಿರುವ ಮೋಜು ಮಸ್ತಿಯನ್ನು ಪ್ರಶ್ನೆ ಮಾಡಲು ಯಾರು ಕೂಡ ಇಲ್ಲ, ಸ್ಥಳೀಯ ಗ್ರಾಮಪಂಚಾಯಿತಿ ,ಪೊಲೀಸ್ ಇಲಾಖೆಗೆ ವಿಫಲವಾಗಿದೆ ಎಂದು ಕೆಲ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.