ಸಬ್ ಇನ್ಸ್‌ಪೆಕ್ಟರ್‌ರಿಂದಲೇ ಮಹಿಳಾ ಪೇದೆಗೆ ಲೈಂಗಿಕ ಕಿರುಕುಳ: ಮತ್ತೊಂದೆಡೆ ಬಾಗಿಣ ನೀಡಿ ಸೋದರತ್ವ ಭಾವನೆ

By Govindaraj S  |  First Published Sep 9, 2024, 7:53 PM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಎರಡು ಬಗೆಯ ಪೊಲೀಸರನ್ನ ಕಾಣುತ್ತಿದೆ. ಒಂದೆಡೆ ಸಬ್ ಇನ್ಸ್ ಪೆಕ್ಟರ್ ರಿಂದಲೇ ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ್ರೆ ಮತ್ತೊಂದೆಡೆ ಮತ್ತೋರ್ವ ಸಬ್ ಇನ್ಸ್ ಪೆಕ್ಟರ್ ಠಾಣೆಯ ಮಹಿಳಾ ಪೇದೆಗಳಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಾಗಿನ ನೀಡಿ ಗೌರವಿಸಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.09): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಎರಡು ಬಗೆಯ ಪೊಲೀಸರನ್ನ ಕಾಣುತ್ತಿದೆ. ಒಂದೆಡೆ ಸಬ್ ಇನ್ಸ್ ಪೆಕ್ಟರ್ ರಿಂದಲೇ ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ್ರೆ ಮತ್ತೊಂದೆಡೆ ಮತ್ತೋರ್ವ ಸಬ್ ಇನ್ಸ್ ಪೆಕ್ಟರ್ ಠಾಣೆಯ ಮಹಿಳಾ ಪೇದೆಗಳಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಾಗಿನ ನೀಡಿ ಗೌರವಿಸಿದ್ದಾರೆ. 

Tap to resize

Latest Videos

undefined

ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ: ಒಂದೇ ವಾರದ ಅಂತರದಲ್ಲಿ ಕಾಫಿನಾಡ ಮಲೆನಾಡ ಭಾಗ 2 ಬಗೆಯ ಪೊಲೀಸರನ್ನೂ ಕಂಡಿದೆ. ಕೊಪ್ಪ ಪಟ್ಟಣದ ಪಿಎಸ್ಐ ಬಸವರಾಜ್ ಮೇಲೆ ಮಹಿಳಾ ಸಿಬ್ಬಂದಿಗಳೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದು ಈಗಾಗಲೇ ಕೊಪ್ಪ ಡಿವೈಎಸ್ಪಿ ಮೂವರು ಮಹಿಳಾ ಪೇದೆಗಳಿಂದ ಮಾಹಿತಿ ಕೂಡ ಕಲೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಮುದ್ದು ಮಗನ ಆಸೆಯಂತೆ ಗಣೇಶ ಪ್ರತಿಷ್ಠಾಪಿಸಿದ ಮುಸ್ಲಿಂ ಕುಟುಂಬ: 5 ದಿ‌ನ ಮಾಂಸ ತಿನ್ನದೆ ಆರಾಧನೆ!

ಪಿಎಸ್ ಐ ಕಾರ್ಯಕ್ಕೆ ಮೆಚ್ಚುಗೆ: ಈ ಮಧ್ಯೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಠಾಣೆಯ ಪಿಎಸ್ಐ ರವೀಶ್ ತಮ್ಮ ಠಾಣೆಯ ನಾಲ್ವರು ಮಹಿಳಾ ಪೇದೆಗಳಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಠಾಣೆಯಲ್ಲಿ ಬಾಗಿನ ನೀಡಿ ಗೌರವಿಸಿದ್ದಾರೆ. ಗೌರಿ-ಗಣೇಶ ಹಬ್ಬಕ್ಕೆ ಸಹೋದರರು ಸಹೋದರಿಯರಿಗೆ ಬಾಗಿನ ನೀಡುವುದು ಹಿಂದೂಗಳ ಸಂಪ್ರಾದಯ. ಹಾಗಾಗಿ, ವರ್ಷ ಪೂರ್ತಿ ನಮ್ಮ ಜೊತೆ ಕೆಲಸ ಮಾಡುವ ಮಹಿಳಾ ಪೇದೆಗಳು ನಮ್ಮ ಸಹೋದರಿಯರು ಎಂದು ಅರಿಶಿನ-ಕುಂಕುಮ, ಹಣ್ಣು-ಕಾಯಿ, ಬಳೆ, ಸೀರೆ ಹಾಗೂ ಸ್ವೀಟ್ಸ್ ನೀಡಿ ಗೌರವಿಸಿದ್ದಾರೆ. ಬಾಳೆಹೊನ್ನೂರು ಪಿಎಸ್ಐ ರವೀಶ್ ಕಾರ್ಯಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!