ಗ್ರಾಮಕ್ಕೆ ನುಗ್ಗಿ ಹಸುವನ್ನು ಧರಧರನೇ ಎಳೆದೊಯ್ದ ಕಳ್ಳರು: ಹಿಂದೆಯೇ ಬಂದ ತಾಯಿ ಹಸು

Sathish Kumar KH   | Kannada Prabha
Published : Oct 05, 2026, 08:12 AM IST
Chikkamagaluru Cow Theft

ಸಾರಾಂಶ

ಕಳ್ಳರು ಹಸುವೊಂದನ್ನು ಕದ್ದೊಯ್ಯುವಾಗ ತಾಯಿ ಹಸು ಹಿಂದೆ ಓಡಿಬಂದ ಮನಕಲಕುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ಗೋಕಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು (ಅ.05): ಹಸುವೊಂದನ್ನು ಕಳ್ಳತನ ಮಾಡಿ ಹೊತ್ತೊಯ್ಯುತ್ತಿದ್ದ ವೇಳೆ ತಾಯಿ ಹಸು ಹಿಂದಿನಿಂದ ಓಡಿಬಂದ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ-173ರ ಸಮೀಪವೇ ಘಟನೆ ನಡೆದಿದ್ದು, ಗೋಕಳ್ಳರು ಹಸುವಿನ ಕುತ್ತಿಗೆಗೆ ಹಗ್ಗ ಹಾಕಿ ಧರಧರನೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಸುವನ್ನು ಕರೆದೊಯ್ಯುತ್ತಿದ್ದವರ ಹಿಂದೆ ತಾಯಿ ಹಸು ಓಡುತ್ತಿರುವ ದೃಶ್ಯವೂ ಕಂಡುಬಂದಿದ್ದು, ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಬದಿ ಕಟ್ಟಿರುವ ಜಾನುವಾರುಗಳ ಕಳ್ಳತನ

ಮೂಡಿಗೆರೆ ತಾಲೂಕಿನ ವಿವಿಧೆಡೆ ಇತ್ತೀಚೆಗೆ ಗೋ-ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾತ್ರಿ ವೇಳೆ ಮನೆಗಳ ಸಮೀಪ ಹಾಗೂ ರಸ್ತೆ ಬದಿಯಲ್ಲಿ ಕಟ್ಟಿರುವ ಜಾನುವಾರುಗಳನ್ನು ಗುರಿಯಾಗಿಸಿ ಕೊಂಡು ಕಳ್ಳತನ ಮಾಡಲಾಗುತ್ತಿದೆ ಎಂದು ದೂರಲಾಗಿದೆ.

ಸಿಸಿಟೀವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ, ಗೋ ಕಳ್ಳತನಕ್ಕೆ ಕಡಿವಾಣ ಹಾಕುವಂತೆ ಹಿಂದೂ ಸಂಘಟನೆಗಳ ಮುಖಂಡರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಕ್ವಿಂಟಾಲ್ ಬೀಜ ಹಾಕೀನಿ, ಮೇಲಕ್ಕೆದ್ದಿಲ್ಲ ನೋಡಿ ಸೇಂಗಾ; ನೀವು ಕೊಡೋ ಪರಿಹಾರ ಬೀಜಕ್ಕೂ ಸಾಕಾಗಲ್ಲ-ರೈತರ ಕಣ್ಣೀರು!
ವೈಟ್ ಟಾಪಿಂಗ್, ಒಳಚರಂಡಿ ಕಾಮಗಾರಿ: ಬೆಂಗಳೂರಿನ ಪ್ರಮುಖ ರಸ್ತೆ 60 ದಿನ ಬಂದ್; ಪರ್ಯಾಯ ಮಾರ್ಗ