ಚಿಕ್ಕಮಗಳೂರು: ಮತ್ತೊಮ್ಮೆ ಸಿ.ಟಿ.ರವಿಗೆ ಶಾಕ್ ಕೊಟ್ಟ ಶಾಸಕ ಹೆಚ್.ಡಿ. ತಮ್ಮಯ್ಯ

By Girish Goudar  |  First Published Jun 9, 2023, 10:00 PM IST

ನನಗೆ ಹೋದಲ್ಲೆಲ್ಲ ಸನ್ಮಾನ ಮಾಡಲು ಜನರು ಮುಂದಾಗುತ್ತಿದ್ದಾರೆ. ಆದರೆ ನಾನು ಈಗಲೇ ಸನ್ಮಾನ ಸ್ವೀಕರಿಸಲಾರೆ. 4 ವರ್ಷದ ಬಳಿಕ ನನ್ನ ಕೆಲಸ ನಿಮಗೆ ತೃಪ್ತಿ ನೀಡಿದರೆ ಸನ್ಮಾನ ಸ್ವೀಕರಿಸಲು ಅರ್ಹನಾಗುತ್ತೇನೆ. ನಾನೊಬ್ಬ ಶಾಸಕನಾದರೂ ನಿಮ್ಮೆಲ್ಲರ ಜನಸೇವಕ. ನನ್ನ ಅವಧಿಯಲ್ಲಿ ಕ್ಷೇತ್ರದಾದ್ಯಂತ ಶಾಂತಿ, ಸೌಹಾರ್ದ, ಸಾಮಾರಸ್ಯದಿಂದ ಜನರು ಬಾಳಬೇಕು. ಇದು ನನ್ನ ಮೊದಲ ಆದ್ಯತೆಯಾಗಿದೆ ಎಂದ ತಮ್ಮಯ್ಯ 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜೂ.09):  ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ವರ್ಸಸ್ ಮಾಜಿ ಶಾಸಕರ ಹಗ್ಗಜಗ್ಗಾಟ ಮುಂದುವರಿದೆ. ಚಿಕ್ಕಮಗಳೂರು ನಗರಸಭೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. 10 ತಿಂಗಳ ಬಳಿಕ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ತಮ್ಮಯ್ಯ  ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಮತ್ತೋಮ್ಮೆ ಮಾಜಿ ಶಾಸಕ ಸಿ.ಟಿ. ರವಿಗೆ ಶಾಕ್ ಕೊಡಲು ಶಾಸಕ ತಮ್ಮಯ್ಯ ಮುಂದಾಗಿದ್ದಾರೆ. ಸದ್ಯ ಬಿಜೆಪಿ  ಪಕ್ಷದ ಅಧಿಕಾರದಲ್ಲಿರುವ ಚಿಕ್ಕಮಗಳೂರು ನಗರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 18 , ಜೆಡಿಎಸ್ ನ ಇಬ್ಬರು, ಪಕ್ಷಾಂತಕರು 2, ಎಸ್ ಡಿ ಪಿ ಐ ಒಬ್ಬರು ಸದಸ್ಯರ ಮೂಲಕ 35 ಸದಸ್ಯರ ಸಂಖ್ಯಾಬಲವನ್ನು ಹೊಂದಿದೆ. 

Tap to resize

Latest Videos

undefined

ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯುವುದಿಲ್ಲ: ಶಾಸಕ ತಮ್ಮಯ್ಯ 

ನಗರಸಭೆಯಲ್ಲಿ ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು, ನಗರಸಭೆಯ ಆಡಳಿತವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆಯಲು ಅಡ್ಡದಾರಿ ಹಿಡಿಯುವುದಿಲ್ಲ. ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ಮುಂದಿನ 10 ತಿಂಗಳಲ್ಲಿ ಹೆಚ್ಚಾಗಲಿದೆ. ಆಗ ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷದ ಪಾಲಾಗಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದ್ದಾರೆ.

15 ವರ್ಷಕ್ಕೊಮ್ಮೆ ನಡೆಯೂ ಅಚ್ಚರಿ ಈ ಬಾರಿ 5 ವರ್ಷದಲ್ಲೇ ಗೋಚರ!, ಕುಂದೂರು ಕೆಂಪಮ್ಮ ದೇವಿ ಪವಾಡವೇನು?

ಚಿಕ್ಕಮಗಳೂರು ನಗರದ ನಿರಂತರ ಸ್ವಚ್ಚ ಟ್ರಸ್ಟ್ ಮತ್ತು ರಾಮೇಶ್ವರ ನಗರ ಬಡಾವಣೆ ನಿವಾಸಿಗಳು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿಯವರು ಕಸದಲ್ಲೂ ಹಣ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಬಿಜೆಪಿ ಮುಖಂಡರೇ ಇರುವ ಟ್ರಸ್ಟ್ ವೊಂದನ್ನು ನಿರ್ಮಿಸಿಕೊಂಡು ಮನೆ, ಮನೆ ಕಸಸಂಗ್ರಹಿಸಲು ಮುಂದಾಗಿದ್ದಾರೆ. ನಾನು ಬಿಜೆಪಿಯಲ್ಲಿದ್ದಾಗ ಬಿಜೆಪಿಯವರ ಈ ಟ್ರಸ್ಟ್‍ನೊಳಗೆ ಸೇರ್ಪಡೆಗೊಂಡರೆ ನಿನಗೆ ಕೆಟ್ಟಹೆಸರು ಬರುತ್ತದೆ ಎಂದು ಒಬ್ಬರು ಬುದ್ಧಿ ಮಾತು ಹೇಳಿದ್ದರಿಂದ ನಾನು ಈ ಟ್ರಸ್ಟ್‍ನಿಂದ ದೂರ ಉಳಿದಿದ್ದೆ. ಈ ಟ್ರಸ್ಟ್ ಕಸ ಸಂಗ್ರಹದ ನೆಪದಲ್ಲಿ ಸಾರ್ವಜನಿಕರಿಂದ ಅಧಿಕ ಮೊತ್ತದ ಶುಲ್ಕ ಸಂಗ್ರಹ ಮಾಡುತ್ತಿರುವ ದೂರುಗಳಿವೆ. ಮನೆಮನೆ ಕಸ ಸಂಗ್ರಹಣೆ ನೆಪದಲ್ಲಿ ಜನರ ಸುಲಿಗೆಗೆ ಕಡಿವಾಣ ಹಾಕಬೇಕಿದೆ ಎಂದರು.ನಗರಸಭೆಯಲ್ಲಿ ಸದ್ಯ ಬಿಜೆಪಿ ಆಡಳಿತವಿದೆ. ನಗರಸಭೆ ಆಡಳಿತ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಕಡಿಮೆ ಇದ್ದು, ಅಧಿಕಾರ ಹಿಡಿಯಲು ನಾವು ಆಪರೇಷನ್ ಹಸ್ತ ಮಾಡುವುದಿಲ್ಲ, ಆದರೆ ಮುಂದಿನ 10 ತಿಂಗಳುಗಳಲ್ಲಿ ನಮ್ಮ ಸಂಖ್ಯಾಬಲ ಹೆಚ್ಚಲಿದ್ದು, ಆಗ ನಗರಸಭೆ ಆಡಳಿತ ನಮ್ಮ ಕೈಗೆ ಬರಲಿದೆ ಎಂದರು.

Chikkamagaluru: ಕಾಫಿನಾಡಲ್ಲಿ ಶಿಕ್ಷಕರ ಕೊರತೆ: ಶಾಲೆಗೆ ಮಕ್ಕಳನ್ನೇ ಕಳುಹಿಸದ ಪೋಷಕರು!

4 ವರ್ಷದ ಬಳಿಕ ನನ್ನ ಕೆಲಸ ನಿಮಗೆ ತೃಪ್ತಿ ನೀಡಿದರೆ ಸನ್ಮಾನ ಸ್ವೀಕರಿಸಲು ಅರ್ಹ : 

ನನಗೆ ಹೋದಲ್ಲೆಲ್ಲ ಸನ್ಮಾನ ಮಾಡಲು ಜನರು ಮುಂದಾಗುತ್ತಿದ್ದಾರೆ. ಆದರೆ ನಾನು ಈಗಲೇ ಸನ್ಮಾನ ಸ್ವೀಕರಿಸಲಾರೆ. 4 ವರ್ಷದ ಬಳಿಕ ನನ್ನ ಕೆಲಸ ನಿಮಗೆ ತೃಪ್ತಿ ನೀಡಿದರೆ ಸನ್ಮಾನ ಸ್ವೀಕರಿಸಲು ಅರ್ಹನಾಗುತ್ತೇನೆ. ನಾನೊಬ್ಬ ಶಾಸಕನಾದರೂ ನಿಮ್ಮೆಲ್ಲರ ಜನಸೇವಕ. ನನ್ನ ಅವಧಿಯಲ್ಲಿ ಕ್ಷೇತ್ರದಾದ್ಯಂತ ಶಾಂತಿ, ಸೌಹಾರ್ದ, ಸಾಮಾರಸ್ಯದಿಂದ ಜನರು ಬಾಳಬೇಕು. ಇದು ನನ್ನ ಮೊದಲ ಆದ್ಯತೆಯಾಗಿದೆ ಎಂದರು. 

ಸಾಮಾನ್ಯವಾಗಿ ದೊಡ್ಡವ್ಯಕ್ತಿಗಳು ಕಚೇರಿಗೆ ತೆರಳಿದರೆ ಅಧಿಕಾರಿಗಳು ಕುಳಿತುಕೊಳ್ಳಲು ಹೇಳಿ ಗೌರಯುತವಾಗಿ ಮಾತನಾಡುತ್ತಾರೆ, ಆದರೆ ಬಡವರು ಕಚೇರಿಗೆ ಹೋದಾಗ ಅವರಿಗೆ ಅಧಿಕಾರಿಗಳು ಸರಿಯಾದ ಸ್ಪಂದನೆ ನೀಡುವುದಿಲ್ಲ. ವಿವಿಧ ಕೆಲಸಗಳಿಗೆ ತೆರಳುವ ಸಾಮಾನ್ಯ ಜನರಿಗೂ ಸರಕಾರಿ ಕಚೇರಿಗಳಲ್ಲಿ ಗೌರವ ಸಿಗಬೇಕು. ಈ ಹಿಂದೆ ಏನಾಗಿದೆಯೋ ಗೊತ್ತಿಲ್ಲ, ಆದರೆ ಅಧಿಕಾರಿಗಳು ತಿಂಗಳೊಳಗೆ ತಮ್ಮ ನಡೆಯನ್ನು ತಿದ್ದಿಕೊಳ್ಳುಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ತಪ್ಪಿದ್ದಲ್ಲಿ ದಿಢೀರ್ ಕಚೇರಿಗೆ ಭೇಟಿ ನೀಡುವುದರೊಂದಿಗೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

click me!