ಮಳೆ ಆರಂಭಕ್ಕೂ ಮುನ್ನವೇ ಸರ್ಕಾರ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡವನ್ನು ಕಳುಹಿಸಿದೆ. 20 ಸದಸ್ಯರು ಇರುವ 10 ನೇ ಬೆಟಾಲಿಯನ್ ತಂಡ ಜಿಲ್ಲೆಗೆ ಆಗಮಿಸಿ ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದೆ. ಕಳೆದ ಮೂರು ನಾಲ್ಕು ವರ್ಷಗಳ ಆಧಾರದಲ್ಲಿ ಅಂದಾಜು ಮಾಡಿರುವ ಜಿಲ್ಲಾಡಳಿತ 45 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರವಾಹ ಎದುರಾಗಬಹುದು. ಹಾಗೆಯೇ 40 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಭೂಕುಸಿತ ಆಗಬಹುದು ಎಂದು ವರದಿ ಸಿದ್ಧಪಡಿಸಿದೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಜೂ.09): ಮುಂಗಾರು ಮಳೆ ಕೇರಳಕ್ಕೆ ಎಂಟ್ರಿಯಾಗಿದ್ದು ಅದರ ಹವಾ ಈಗಾಗಲೇ ಕೊಡಗಿನಲ್ಲೂ ಆರಂಭವಾಗಿದೆ. ಶುಕ್ರವಾರದಿಂದಲೇ ಆಗಿಂದಾಗ್ಗೆ ತುಂತುರು ಮಳೆ ಆಗುತ್ತಿದೆ. ಈ ಬಾರಿಯ ಮಳೆಗಾಲದಲ್ಲಿಯೂ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಆಗುವ ಸಾಧ್ಯತೆ ಇದೆ ಎಂದು ಈಗಾಗಲೇ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ.
undefined
ಈ ವರದಿ ಆಧರಿಸಿ ಮಳೆ ಆರಂಭಕ್ಕೂ ಮುನ್ನವೇ ಸರ್ಕಾರ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡವನ್ನು ಕಳುಹಿಸಿದೆ. 20 ಸದಸ್ಯರು ಇರುವ 10 ನೇ ಬೆಟಾಲಿಯನ್ ತಂಡ ಜಿಲ್ಲೆಗೆ ಆಗಮಿಸಿ ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದೆ. ಕಳೆದ ಮೂರು ನಾಲ್ಕು ವರ್ಷಗಳ ಆಧಾರದಲ್ಲಿ ಅಂದಾಜು ಮಾಡಿರುವ ಜಿಲ್ಲಾಡಳಿತ 45 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರವಾಹ ಎದುರಾಗಬಹುದು. ಹಾಗೆಯೇ 40 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಭೂಕುಸಿತ ಆಗಬಹುದು ಎಂದು ವರದಿ ಸಿದ್ಧಪಡಿಸಿದೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
ಕೊಡಗು: ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತಕ್ಕೆ ಬದ್ಧ: ಶಾಸಕ ಎ.ಎಸ್. ಪೊನ್ನಣ್ಣ
ಎನ್‌ಡಿಆರ್‌ಎಫ್ ತಂಡದಲ್ಲಿ ಮುಖ್ಯವಾಗಿ ಪ್ರವಾಹ, ಭೂಕುಸಿತ, ಕಟ್ಟಡಗಳ ಕುಸಿತ ಮತ್ತು ರಸಾಯನಿಕ ವಿಪತ್ತು ಎದುರಾದರೂ ಅದನ್ನು ನಿಭಾಯಿಸಿ ಜನರನ್ನು ರಕ್ಷಿಸಬಲ್ಲ ವಿಶೇಷ ತರಬೇತಿ ಪಡೆದಿರುವ ಸದಸ್ಯರು ಇದ್ದಾರೆ. ಮುಂಗಾರು ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಡಿಕೇರಿ ತಹಶೀಲ್ದಾರ್ ಕಿರಣ್, ತಾಲ್ಲೂಕು ಪಂಚಾಯಿತಿ ಕಾರ್ಯದರ್ಶಿ ರಾಜಶೇಖರ್ ಮತ್ತು ಎನ್ಡಿಆರ್ಎಫ್ ತಂಡದ ಇನ್ಸ್ಪೆಕ್ಟರ್ ಶಾಂತಿಲಾಲ್ ಜಾಟಿಯ ನೇತೃತ್ವದಲ್ಲಿ ಎಲ್ಲಾ ಪಂಚಾಯಿತಿಗಳ ಪಿಡಿಓಗಳು, ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಿದ್ಧತಾ ಸಭೆ ನಡೆಸಿದರು.
ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ 24 ಕಾಳಜಿ ಕೇಂದ್ರಗಳನ್ನು ತೆರಯಲು ಸಿದ್ಧತೆ ನಡೆಸಿಕೊಳ್ಳುವಂತೆ ಸೂಚಿಸಿದರು. ಒಂದು ವೇಳೆ ರಸ್ತೆಗಳು ಕುಸಿದಲ್ಲಿ ಕೂಡಲೇ ಸಂಪರ್ಕ ರಸ್ತೆಗಳನ್ನು ಮಾಡಲು ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಶೇಖರ್, ಹಿಂದಿನ ಎರಡು ಮೂರು ವರ್ಷಗಳಲ್ಲಿ ಆದ ಪ್ರವಾಹ ಭೂಕುಸಿತದ ಆಧಾರದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ಮೊಣ್ಣಂಗೇರಿಯಲ್ಲಿ ಕಳೆದ ಎರಡು ವರ್ಷಗಳಿಂದಲೂ ನಿರಂತರವಾಗಿ ಭೂಕುಸಿತ, ಜಲಸ್ಫೋಟವಾಗಿದೆ. ಆದ್ದರಿಂದ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಇನ್ನು ಪ್ರವಾಹ, ಭೂಕುಸಿತದಂತಹ ಸನ್ನಿವೇಶಗಳನ್ನು ಎದುರಿಸಲು ಅಗತ್ಯವಾಗಿ ಬೇಕಾಗಿರುವ ಬೋಟ್, ವಿವಿಧ ಮಷಿನ್ಗಳು ಸೇರಿದಂತೆ ಎಲ್ಲಾ ಪರಿಕರಗಳನ್ನು ಸಿದ್ದಮಾಡಿಕೊಟ್ಟಿರುವ ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಲು ನಾವು ಸಿದ್ಧ ಎಂದಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಆತಂಕ ಎದುರಾಗಿದ್ದು ಎನ್‌ಡಿಆರ್‌ಎಫ್ ತಂಡ ಕೂಡ ರಕ್ಷಣೆಗೆ ನಾವು ಸಿದ್ದವಿದ್ದೇವೆ ಎಂದು ಹೇಳಿದೆ.
ಕೊಡಗು: ವಿರಾಜಪೇಟೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ, ಕಾರಣ ನಿಗೂಢ?
ಈ ಸಂಧರ್ಭ ಮಾತನಾಡಿದ ಮಡಿಕೇರಿ ಶಾಸಕ ಮಂತರ್ ಗೌಡ, ಇಲಾಖಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಮಳೆಗಾಲದ ಅವಧಿಯಲ್ಲಿ ಪ್ರವಾಹ, ಭೂ ಕುಸಿತ ಉಂಟಾದಲ್ಲಿ ಕೂಡಲೇ ಘಟನಾ ಸ್ಥಳಕ್ಕೆ ಹೋಗಬೇಕು. ಗಾಳಿ, ಮಳೆಯಿಂದಾಗಿ ಗಿಡ-ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ವಿದ್ಯುತ್ ಕಡಿತ, ಕುಡಿಯುವ ನೀರಿಗೆ ತೊಂದರೆಯಂತಹ ಸಮಸ್ಯೆಗಳಿಗೆ ಕಂದಾಯ, ಸೆಸ್ಕಾಂ, ಅರಣ್ಯ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳು ಸಮನ್ವಯತೆಯಿಂದ ಕೂಡಲೇ ಸ್ಪಂದಿಸಿ, ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು ಮುಂದೆ ಪರಿಸ್ಥಿತಿ ಹೇಗಿರಲಿದೆಯೋ ಕಾದು ನೋಡಬೇಕು.