ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.18): ಚಿಕ್ಕಮಗಳೂರು ನಗರಸಭೆ ಸಿಬ್ಬಂದಿಗಳ ಎದುರೇ ವ್ಯಾಪಾರಿ ತಳ್ಳುವ ಗಾಡಿ ಸುಟ್ಟಿದ್ದ ಪ್ರಕರಣದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸಮಗ್ರ ವರದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾದ ಬಳಿಕ ವ್ಯಾಪಾರಿ ಕೃಷ್ಣಪ್ಪ ನವರ ಸಂಕಷ್ಟಕ್ಕೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ.
ನಗರಸಭೆ ಸಿಬ್ಬಂದಿಗಳ ಕಿರುಕುಳ : ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎಂದು ನಗರಸಭೆ ಅಧಿಕಾರಿಗಳ ಎದುರು ವ್ಯಾಪಾರಿ ಕೃಷ್ಣಪ್ಪ ನಿನ್ನೆ ಗಾಡಿಗೆ ಬೆಂಕಿ ಹಚ್ಚಿದ್ದರು. ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯ ಬೀದಿಯಲ್ಲಿ ಪ್ರತಿನಿತ್ಯ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಿಕೊಂಡು 200-300 ರೂ. ದುಡಿದು ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಆದರೆ ನಗರಸಭೆ ಅಧಿಕಾರಿಗಳು ರಸ್ತೆ ಬದಿ ವ್ಯಾಪಾರ ನಡೆಸಬಾರದು ಎಂದು ವ್ಯಾಪಾರಿಗಳಿಗೆ ಸೂಚಿಸಿದ್ದರು.ಈ ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿದ್ದವರಲ್ಲಿ ಬಡ ವ್ಯಾಪಾರಿ ಕೃಷ್ಣಪ್ಪ ಕೂಡ ಒಬ್ಬರು ಹಣ್ಣು ತರಕಾರಿಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಇದನ್ನೂ ಓದಿ: Chikkamagaluru ನಗರಸಭೆ ಕಿರುಕುಳಕ್ಕೆ ಬೇಸತ್ತು ತನ್ನ ಗಾಡಿಗೆ ಬೆಂಕಿ ಇಟ್ಟ ವ್ಯಾಪಾರಿ!
ನಿನ್ನೆ ಈ ವ್ಯಾಪಾರಿಯ ಗಾಡಿಯನ್ನು ಹೊತ್ತೊಯ್ಯಲು ನಗರಸಭೆ ಸಿಬ್ಬಂದಿ ಬಂದಿದ್ದರು. ಇದರಿಂದ ರೊಚ್ಚಿಗೆದ್ದ ಬಡ ವ್ಯಾಪಾರಿಯು, ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಾ, ನಾನೇ ಬೆಂಕಿ ಹಾಕ್ತೀನಿ ಎಂದು ತನ್ನ ಗಾಡಿಗೆ ತಾನೇ ಬೆಂಕಿ ಹಾಕಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವ್ಯಾಪಾರಿ ಕೃಷ್ಣಪ್ಪ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಗರಸಭೆ ವರ್ತನೆಗೆ ಸಾರ್ವಜನಿಕರು ಖಂಡನೆ ವ್ಯಕ್ತಪಡಿಸಿದ್ದರು.
ಏಕಾಏಕಿ ನಗರಸಭೆ ಈ ರೀತಿ ವರ್ತಿಸಿದರೆ ನಮ್ಮ ಪಾಡೇನು ನಗರಸಭೆಯ ಈ ವರ್ತನೆಯಿಂದ ಬೇಸತ್ತು ಹೋಗಿದ್ದೇವೆ. ನಮ್ಮ ಹೊಟ್ಟೆಯ ಮೇಲೆ ಏಕೆ ಹೊಡೆಯುತ್ತೀರಿ ಎಂದು ತಳ್ಳುವ ಗಾಡಿ ಮಾಲೀಕಕರು ಅಸಮಾಧನ ಹೊರಹಾಕಿದ್ದರು. .ಬಡವ್ಯಾಪಾರಿಗಳನ್ನೇ ಟಾಗೇಟ್ ಮಾಡಲಾಗಿದೆ ಎಂದು ಸಾರ್ವಜನಿಕರು ನಗರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ಸಮಗ್ರವಾಗಿ ವರದಿಯನ್ನು ಪ್ರಸಾರ ಮಾಡಿತ್ತು.
ಭಗತ್ ಸಿಂಗ್ ಪಾಠ ಕೈಬಿಟ್ಟಿರುವುದು ನಾಚಿಕೆಗೇಡು Arvind Kejriwal ಕಿಡಿ
ವ್ಯಾಪಾರಿ ಕೃಷ್ಣಪ್ಪರಿಗೆ ಧನಸಹಾಯ: ನಗರಸಭೆ ಸಿಬ್ಬಂದಿಗಳ ಎದುರೇ ವ್ಯಾಪಾರಿ ತಳ್ಳುವ ಗಾಡಿ ಸುಟ್ಟಿದ್ದ ಪ್ರಕರಣದ ಸಾರ್ವಜನಿಕರ ಆಕ್ರೋಶವನ್ನು ಹೊರಹಾಕಿ ವ್ಯಾಪಾರಿಯ ಸಂಕಷ್ಟಕ್ಕೆ ಸ್ಪಂದನೆ ನೀಡಿದ್ದಾರೆ. ವ್ಯಾಪಾರಿಗೆ ನೆರವಿನ ಸಹಾಯದಹಸ್ತವನ್ನು ಜನರು ಚಾಚಿದ್ದಾರೆ.ವ್ಯಾಪಾರಿ ಪರ ನಿಂತ ಚಿಕ್ಕಮಗಳೂರು ಜೆಡಿಎಸ್ ಮುಖಂಡ ತಿಮ್ಮಶೆಟ್ಟಿ ನೇತೃತ್ವದಲ್ಲಿ ಹಣಕಾಸಿನ ನೆರವು ನೀಡಿದ್ದಾರೆ.
ಗಾಡಿ ಸುಟ್ಟ ಜಾಗದಲ್ಲೇ ಹಣದ ನೆರವು ನೀಡದ ಜೆಡಿಎಸ್ ಮುಖಂಡರು ನಗರಸಭೆ ಸಿಬ್ಬಂದಿಗಳ ನಡೆಯನ್ನು ಖಂಡಿಸಿದರು. ರಸ್ತೆ ಬದಿ ವ್ಯಾಪಾರಿಗಳಿಗೆ ನಗರಸಭೆ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ನಿತ್ಯ 200-300 ದುಡಿಯುತ್ತಿದ್ದ ವ್ಯಾಪಾರಿಗೆ ರಸ್ತೆ ಬದಿ ವ್ಯಾಪಾರ ಮಾಡದಂತೆ ಕಿರುಕುಳ ನೀಡುತ್ತಿದ್ದು ಹಣ್ಣು ತರಕಾರಿಗಳನ್ನ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ಬಡ ವ್ಯಾಪಾರಿಕ್ಕೆ ತೊಂದರೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದರು.
CBSE Term 2 Result ಜೂನ್ ಅಂತ್ಯದೊಳಗೆ ಎರಡನೇ ಅವಧಿಯ ಫಲಿತಾಂಶ ಪ್ರಕಟ