ಚಿಕ್ಕಮಗಳೂರು: ಜಾಮೀಯಾ ಮಸೀದಿ ಆಡಳಿತ ಸಂಸ್ಥೆ- ಅಧಿಕಾರಿಗಳ ನಡುವೆ ಜಟಾಪಟಿ

By Suvarna News  |  First Published Mar 29, 2022, 1:35 PM IST

* ಬಡಾಮಕಾನ್‌ ಭಾಗದ ಜಾಗ ಅಳತೆ ಕಾರ್ಯಾಚರಣೆ 
* ನಲ್ಲೂರು ಮಠದ ಮನೆಯವರು ಹಾಗೂ ಜಾಮಿಯಾ ಮಸೀದಿಯ ನಡುವಿನ ತಿಕ್ಕಾಟ
* ಜಾಮೀಯಾ ಮಸೀದಿ ಆಡಳಿತ ಸಂಸ್ಥೆ- ಅಧಿಕಾರಿಗಳ ನಡುವೆ ಜಟಾಪಟಿ 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಮಾ.29): ಕಾಫಿನಾಡು ಚಿಕ್ಕಮಗಳೂರಿನ ನಗರದ ಹೃದಯಭಾಗದಲ್ಲಿರುವ ಆ ಜಾಗ ವಿವಾದದ ಕೇಂದ್ರಬಿಂದು. ಆ ಜಾಗಕ್ಕಾಗಿ ಕಳೆದ ನಾಲ್ಕು ದಶಕಗಳಿಂದಲೂ ಕೂಡ ಎರಡು ಸಮುದಾಯದವರು ಕೋರ್ಟ್ ಗೆ ಅಲೆದಾಟ ನಡೆಸುತ್ತಿದ್ದಾರೆ. ಇದೀಗ ಆ ಜಾಗದ ಸರ್ವೇ ಕಾರ್ಯ ನಡೆಸುವಂತೆ ಕೋರ್ಟ್ ಸೂಚನೆ ಬೆನ್ನಲ್ಲೇ ಜಿಲ್ಲಾಡಳಿತ ಅಖಾಡಕ್ಕೆ ಇಳಿದು ಪೊಲೀಸ್ ಬಂದೋಬಸ್ತ್ ನಲ್ಲಿ ಸರ್ವೆ ಕಾರ್ಯ ಆರಂಭಿಸಿದೆ...

Tap to resize

Latest Videos

ಬೆಳ್ಳಂಬೆಳಿಗ್ಗೆ ಅಖಾಡಕ್ಕೆ ಇಳಿದ‌ ನಗರಸಭೆ ಸಿಬ್ಬಂದಿ 
 ನಗರಸಭೆ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಬಸವನಹಳ್ಳಿ ಮುಖ್ಯರಸ್ತೆಯ ಬಡಾ ಮಕಾನ್‌ (ಹಜರತ್‌ ಸೈಯದ್‌ ಮಝರ್‌ ಅಲಿ ಖಾಖಾದ್ರಿ ದರ್ಗಾ) ಭಾಗದ ಜಾಗ ಮೋಜಣಿ, ಹದ್ದುಬಸ್ತು ಕಾರ್ಯಾಚರಣೆಯಲ್ಲಿ ತೊಡಗಿದರು. ಆ ವೇಳೆಯಲ್ಲಿ ಜಾಮೀಯಾ ಮಸೀದಿ ಆಡಳಿತ ಸಂಸ್ಥೆ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. 

ಹೆಬ್ಬಾಳೆ ಮುಳುಗಡೆ ಸೇತುವೆಗೆ ಮುಕ್ತಿ ಇಲ್ಲ, ಬೇಸಿಗೆ ಬಂದ್ರೂ ರಿಪೇರಿ ಭಾಗ್ಯವಿಲ್ಲ

 ಏನಿದು ವಿವಾದ ?
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿ ಇರುವ ಬಡಾಮಕಾನ್ ಭಾಗದ ಜಾಗ  ನಲ್ಲೂರು ಮಠದ ಮನೆಯವರು ಹಾಗೂ ಜಾಮಿಯಾ ಮಸೀದಿಯ ನಡುವಿನ ತಿಕ್ಕಾಟ ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿದೆ.ಕಳ ಹಂತದ ಕೋರ್ಟ್ ಗಳಾದ ತಹಶಿಲ್ದಾರ್ , ಎಸಿ, ಡಿಸಿ ಕೋರ್ಟ್ ಗಳಲ್ಲಿ ನಲ್ಲೂರ್ ಮಠದ ಮನೆಯವರ ಪರ ಆದೇಶವಾಗಿದೆ.

ಇದೀಗ ಜಿಲ್ಲಾ ಕೋರ್ಟ್ ನಲ್ಲಿ ಜಾಗದ ಸರ್ವೆ ಕಾರ್ಯ ನಡೆಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿತ್ತು. ಇದರ‌ ನಡುವೆ ನಗರಸಭೆಗೆ ಸರ್ವೆ ನಡೆಸುವಂತೆ ಮಠದ ಮನೆಯವರ ಆಡಳಿತ ಮಂಡಳಿಯ ದಿವಾಕರ್  ಎನ್ನುವರು ಮನವಿ ಮಾಡಿದರು. ಕಳೆದ‌ 4 ದಶಕದಿಂದ ಈ ಜಾಗ ವಿವಾದದ ಕೇಂದ್ರ ಬಿಂದುಯಾಗಿದೆ.ಒಂದು ಲಕ್ಷ ಚದರ ಅಡಿ ಆಸ್ತಿ ವಿವಾದ ಕೋರ್ಟ್ ಅಂಗದಲ್ಲಿ ಇದ್ದು‌ ನಗರದ ಹೃದಯದ ಭಾಗದಲ್ಲೇ ಇರುವ ಜಾಗ ಇದಾಗಿದೆ.ಕೋರ್ಟ್ ನಲ್ಲಿ ಬಡಾಮಕಾನ್ ಜಾಗದ ಪರವಾಗಿ ಜಾಮಿಯಾ ಮಸೀದಿ ವಕಾಲತ್ತು ವಹಿಸಿದೆ. ಮಠದ ಮನೆಯವರಿಂದ ಜಿಲ್ಲಾ ಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ.

 ಸರ್ವೆ ಕಾರ್ಯಕ್ಕೆ ತೀವ್ರ ಪ್ರತಿರೋಧ ತೋರಿಸಿದ ಜಾಮೀಯಾ ಮಸೀದಿ ಆಡಳಿತ ಸಂಸ್ಥೆ 
ಈ ಸ್ವತ್ತಿನ ವಿಚಾರ ಹೈಕೋರ್ಟ್‌ನಲ್ಲಿದೆ, ಅದಕ್ಕೆ ಸಂಬಂಧಿಸಿದಂತೆ ತಡಯಾಜ್ಞೆಯೂ ಇದೆ।. ಹೀಗಾಗಿ, ಈಗ ಅಳತೆ ಮಾಡಬಾರದು ಎಂದು ಜಾಮೀಯಾ ಮಸೀದಿ ಆಡಳಿತ ಸಂಸ್ಥೆ ಕಾರ್ಯದರ್ಶಿ ಮುದಸೀರ್‌ ಪಾಷಾ, ಇತರರು ಪ್ರತಿರೋಧ ತೋರಿದರು. ಮುಸ್ಲಿಂ ಸಮುದಾಯದ ನಾಸೀರ್‌, ನಗರಸಭೆ ಸದಸ್ಯ ಶಾಬಾದ್‌,  ಜಂಶೀದ್‌ ಮೊದಲಾದವರು ಸ್ಥಳದಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದರು. 
ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಇತರರು ಇದ್ದರು. 

  ಖಾಲಿ ಜಾಗದ ಬೀಗ ಒಡೆದು ಒಳನುಗ್ಗಿದ ಅಧಿಕಾರಿಗಳು ಸಿಬ್ಬಂದಿ
ಖಾಲಿಜಾಗ ಭಾಗದ ಗೇಟಿನ ಬೀಗ ಹೊಡೆಸಿ ಒಳಕ್ಕೆ ಸಿಬ್ಬಂದಿ ಪ್ರವೇಶಿಸಿದರು. ನಿವೇಶನದಲ್ಲಿ ಬೆಳೆದಿರುವ ಕುರುಚಲು ಪೊದೆಗಳ ಕತ್ತರಿಸುವ ಕಾರ್ಯ ನಡೆಯುತ್ತಿದೆ.  ಹನುಮಂತಪ್ಪ ವೃತ್ತ, ಬಸವನಹಳ್ಳಿ ಕಡೆಯಿಂದ ಬಡಾ ಮಕಾನ್‌ ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪೊಲೀಸ್‌ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಬಡಾ ಮಕಾನ್‌ ವ್ಯಾಪ್ತಿಯಲ್ಲಿ ನಮ್ಮ ಜಾಗ ಇದೆ. ಅದಕ್ಕೆ ದಾಖಲೆಗಳು ಇವೆ, ಜಾಗವನ್ನು ಅಳತೆ ಮಾಡಿ ಕೊಡಬೇಕು ಎಂದು ತಾಲ್ಲೂಕಿನ ನಲ್ಲೂರು ಗ್ರಾಮದ ಎನ್‌.ಎಂ. ದಿವಾಕರ್‌ಅವರು ನಗರಸಭೆಗೆ ಮನವಿ ಸಲ್ಲಿಸಿದ್ದಾರೆ. ಜಾಮೀಯಾ ಮಸೀದಿಯ ಬೋರ್ಡ್‌ ಆಫ್‌ ಟ್ರಸ್ಟ್‌ ಮುಸ್ಲಿಂ ಎಂಡೋಮೆಂಟ್‌ ಹಾಗೂ ದಿವಾಕರ್‌ ಅವರಿಗೆ ನಗರಸಭೆ ನೋಟಿಸ್‌ ನೀಡಿದೆ. ಉಭಯತ್ರರು ಸ್ವತ್ತಿನ ದಾಖಲೆಗಳೊಂದಿಗೆ 29ರಂದು ಬೆಳಿಗ್ಗೆ 7 ಗಂಟೆಗೆ ಹಾಜರಿದ್ದು ಅಳತೆ, ಹದ್ದುಬಸ್ತಿಗೆ ಸಹಕರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದೆ.

click me!