Mandya: ಕೊಂಡೋತ್ಸವ ವೇಳೆ ಮನೆ ಛಾವಣಿ ಕುಸಿತ: ಓರ್ವ ಮಹಿಳೆ ಸಾವು: ತಪ್ಪಿದ ಭಾರೀ ದುರಂತ

Published : Mar 29, 2022, 12:35 PM IST
Mandya: ಕೊಂಡೋತ್ಸವ ವೇಳೆ ಮನೆ ಛಾವಣಿ ಕುಸಿತ: ಓರ್ವ ಮಹಿಳೆ ಸಾವು: ತಪ್ಪಿದ ಭಾರೀ ದುರಂತ

ಸಾರಾಂಶ

*  ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ನಡೆದ ಘಟನೆ *  ಗಾಯಾಳುಗಳ ಆರೋಗ್ಯ ವಿಚಾರಿಸಿದ ಡಿಸಿ, ಟಿಎಚ್‌ಓ *  ರದ್ದಾದ ಕೊಂಡೋತ್ಸವ

ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ(ಮಾ.29): ಮನೆ ಛಾವಣಿ ಕುಸಿದು ಓರ್ವ ಮಹಿಳೆ(Women) ಮೃತಪಟ್ಟು ಸುಮಾರು 40ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಡ್ಯ(Mandya) ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ನಿನ್ನೆ(ಸೋಮವಾರ) ನಡೆದಿದೆ. ಗ್ರಾಮದ ಪುಟ್ಟಲಿಂಗಮ್ಮ (52) ಮೃತಪಟ್ಟ(Death) ದುರ್ದೈವಿಯಾಗಿದ್ದಾರೆ. ಕೊಂಡೋತ್ಸವ ನೋಡಲು ನೂರಾರು ಜನರು ಮನೆ ಮಹಡಿ ಏರಿದ್ದ ವೇಳೆ ಮಾಳಿಗೆ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಘಟನೆ ವಿವರ: 

ಕೋವಿಡ್(Covid-19) ಸೇರಿದಂತೆ ನಾನಾ ಕಾರಣಗಳಿಂದಾಗಿ ಕಳೆದ 6 ವರ್ಷಗಳಿಂದ ಸ್ಥಗಿತಗೊಂಡ ಗ್ರಾಮ ದೇವರ ಹಬ್ಬವನ್ನ ಈ ಬಾರಿ ಅದ್ಧೂರಿಯಾಗಿ ಆಚರಿಸಲು ಹುಲಿಗೆರೆಪುರ ಗ್ರಾಮಸ್ಥರು(Villagers) ನಿರ್ಧರಿಸಿದ್ದರು. ಅದರಂತೆ 3 ದಿನಗಳ ಕಾಲ ನಡೆಯುವ ಶ್ರೀ ಬಸವೇಶ್ವರ(Shri Basaveshwara Temple) ದೇವರ ಹಬ್ಬ ನಿನ್ನೆಯಿಂದ ಆರಂಭವಾಗಿತ್ತು. ಹಬ್ಬದ ಹಿನ್ನಲೆ ಇಡೀ ಗ್ರಾಮ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡ್ರೆ. ಬೇರೆ ಬೇರೆ ಊರುಗಳಿಂದ ಹಬ್ಬಕ್ಕೆ ಜನರು ಆಗಮಿಸಿದ್ರು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ಬಸವೇಶ್ವರ ದೇವರ ಕೊಂಡೋತ್ಸವಕ್ಕೆ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ರಾತ್ರಿಯಿಡೀ ದೇವರ ಮೆರವಣಿಗೆ ನಡೆದು ಇಂದು(ಮಂಗಳವಾರ) ಬೆಳಿಗ್ಗೆ ಕೊಂಡೋತ್ಸವ ನಡೆಯಬೇಕಿತ್ತು. ಕೊಂಡೋತ್ಸವವನ್ನ ಹತ್ತಿರದಿಂದ ಕಣ್ತುಂಬಿಕೊಳ್ಳಲು ದೇವಾಲಯ ಮುಂಭಾಗದ ಮನೆ ಮಹಡಿಗೆ ನೂರಾರು ಜನರು ಹತ್ತಿದ್ದಾರೆ. ಸುಮಾರು 70 ವರ್ಷ ಹಳೆಯ ಕಟ್ಟಡ ಆಗಿದ್ರಿಂದ ಮಾಳಿಗೆ ಕುಸಿದಿದೆ. ಈ ವೇಳೆ ಜನರು ನೆಲಕ್ಕೆ ಬಿದ್ದಿದ್ರಿಂದ ನೆಲದಲ್ಲಿದ್ದ ಚಪ್ಪಡಿ ಕಲ್ಲು ತಲೆಗೆ ಬಡಿದು ಪುಟ್ಟಲಿಂಗಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನರಿಗೆ ತಲೆಗೆ ಪೆಟ್ಟಾಗಿದ್ರೆ, ಹಲವರಿಗೆ ಕೈ-ಕಾಲು ಮೂಳೆ ಮುರಿದಿದೆ.

Road Accident: ಮೇಲುಕೋಟೆ ಬಳಿ ಭೀಕರ ಅಪಘಾತ, ತೀರ್ಥಹಳ್ಳಿಯಲ್ಲಿ ಗುಂಡೇಟು!

ಇಬ್ಬರು ಗಂಭೀರ, ಹಲವರ ತಲೆಗೆ ಪೆಟ್ಟು

ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಣ್ಣ ಪುಟ್ಟ ಗಾಯಾಗಳಾಗಿರುವ 10 ಮಂದಿಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ(Treatment) ನೀಡಲಾಗ್ತಿದೆ. 35 ಜನರನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಗಾಯಾಳು ಮೈಸೂರು ಖಾಸಗಿ ಆಸ್ಪತ್ರೆಗೆ ಹಾಗೂ ಮತ್ತೊರ್ವ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Mandya: ಲಂಚಕ್ಕೆ ಬೇಡಿಕೆ ಇಟ್ಟ ಮಂಡ್ಯ ತಹಶೀಲ್ದಾರ್ ಸಸ್ಪೆಂಡ್‌

ಗಾಯಾಳುಗಳ ಆರೋಗ್ಯ ವಿಚಾರಿಸಿದ ಡಿಸಿ, ಟಿಎಚ್‌ಓ

ದುರ್ಘಟನೆ ಸಂಭವಿಸುತ್ತಿದ್ದಂತೆ ಭದ್ರತೆ ನಿಯೋಜಿತಗೊಂಡಿದ್ದ ಪೊಲೀಸರು(Police) ತಮ್ಮದೇ ವಾಹನದಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಘಟನೆ ಹಿನ್ನಲೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಅಶ್ವಥಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ ಭೇಟಿ ನೀಡಿದ್ರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು. ಬಳಿಕ ಮಾತನಾಡಿದ ಡಿಸಿ ಅಶ್ವಥಿ ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ‌. ಕಟ್ಟಡ ಹಳೆಯದಾಗಿತ್ತು, ಡೆಮಾಲಿಶ್ ಮಾಡಬೇಕಿತ್ತ ಎಂದು ಪರಿಶೀಲಿಸಿ ಕ್ರಮಕೈಗೊಳ್ಳುತ್ತೀವಿ ಎಂದ್ರು.

ರದ್ದಾದ ಕೊಂಡೋತ್ಸವ

ಘಟನೆ ಬಳಿಕ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ದುರ್ಘಟನೆಯಲ್ಲಿ ಓರ್ವ ಮಹಿಳೆಯ ಸಾವು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ರಿಂದ ಕೊಂಡೋತ್ಸವವನ್ನ ಗ್ರಾಮಸ್ಥರು ರದ್ದು ಪಡಿಸಿದ್ದಾರೆ. ಗ್ರಾಮ ದೇವರ ಹಬ್ಬ ಹಿನ್ನಲೆ ಸಿದ್ದಪಡಿಸಲಾಗಿದ್ದ ಕೊಂಡಕ್ಕೆ ಬೂದಗುಂಬಳ ಹೊಡೆದು ಪೂಜೆ ಸಲ್ಲಿಸಿರುವ ಗ್ರಾಮಸ್ಥರು ಈ ಬಾರಿ ಅದ್ದೂರಿ ಕೊಂಡೋತ್ಸವವನ್ನ ರದ್ದುಗೊಳಿಸಿದ್ರು.
 

PREV
Read more Articles on
click me!

Recommended Stories

ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ
ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?