ಭೂತ ಬಿಡಿಸುವ ನೆಪದಲ್ಲಿ ಯುವತಿಗೆ ಕ್ರೂರ ಹಿಂಸೆ: ಕೋಳಿ ರಕ್ತ ಕುಡಿಯುವಂತೆ ಬೆದರಿಕೆ!

Gowthami K   | Kannada Prabha
Published : Aug 24, 2026, 08:31 AM IST
horror story

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಭೂತ ಬಿಡಿಸುವ ನೆಪದಲ್ಲಿ ಯುವತಿಗೆ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ದೈವಾರಾಧನೆ ಹೆಸರಿನಲ್ಲಿ ಕೋಳಿ ರಕ್ತ ಕುಡಿಯಲು ಒತ್ತಾಯಿಸಿ ಹಿಂಸಿಸಿದ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ, ಇದು ತನ್ನ ವಿರುದ್ಧದ ಪಿತೂರಿ ಎಂದು ಆರೋಪಿ ಪಾತ್ರಿ ಹೇಳಿದ್ದಾರೆ.

ಕೊಪ್ಪ (ಚಿಕ್ಕಮಗಳೂರು): ಭೂತ, ಪ್ರೇತ ಬಿಡಿಸುವ ನೆಪದಲ್ಲಿ ಯುವತಿಗೆ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ಸತೀಶ್ ಪಾತ್ರಿ ಎಂಬುವರು ನಿರ್ಮಿಸಿರುವ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದೈವಾರಾಧನೆ ಹಾಗೂ ವಶೀಕರಣದ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಲಾಗಿದೆ, ರಕ್ತಾಹಾರ ಸ್ವೀಕರಿಸದಿದ್ದರೆ, ಬಾಯಿಯಲ್ಲಿ ಕರ್ಪೂರ ಇಡುವ ಬೆದರಿಕೆ ಹಾಕಲಾಗಿದೆ. ಜೊತೆಗೆ ಇನ್ನಿತರ ಹಿಂಸೆಯನ್ನು ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಕರಾವಳಿ ಹಾಗೂ ಮಲೆನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಎನ್‌ಆರ್‌ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆಯ ವಿಡಿಯೋ-ಪಾತ್ರಿ:

ವಿಡಿಯೋ ವೈರಲ್ ಆದ ಬೆನ್ನಲ್ಲೇ ಸತೀಶ್‌ ಪಾತ್ರಿ ಪ್ರತಿಕ್ರಿಯಿಸಿದ್ದು, ನಾನು ದರ್ಶನ ಮಾಡಿ ಒಂದೂವರೆ ವರ್ಷಗಳು ಕಳೆದಿವೆ. ಈ ವಿಡಿಯೋ 3 ವರ್ಷಗಳ ಹಳೆಯದ್ದಾಗಿದ್ದು, ದೇಗುಲದ ಹಳೆಯ ಧರ್ಮದರ್ಶಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

PREV
Read more Articles on
click me!

Recommended Stories

ಸರಿಗಮಪ ವಿನ್ನರ್ ಶಿವಾನಿ ಈಗ ಸಾಂಸ್ಕೃತಿಕ ರಾಯಭಾರಿ: 8 ಪ್ರತಿಷ್ಠಿತ ಪ್ರಶಸ್ತಿಗಳ ಒಡತಿ
ಬೆಲೆ ಕುಸಿತ: ಟೊಮ್ಯಾಟೋ 1 ರೂ, ಕೊತ್ತಂಬರಿ 3 ರೂ, ಲೋಡ್‌ ತಂದು ರಸ್ತೆಗೆ ಎಸೆದ ರೈತ!