ಬೆಲೆ ಕುಸಿತ: ಟೊಮ್ಯಾಟೋ 1 ರೂ, ಕೊತ್ತಂಬರಿ 3 ರೂ, ಲೋಡ್‌ ತಂದು ರಸ್ತೆಗೆ ಎಸೆದ ರೈತ!

Gowthami K   | Kannada Prabha
Published : Aug 24, 2026, 07:15 AM IST
kottambari

ಸಾರಾಂಶ

ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿದಿದ್ದರಿಂದ ಬೆಳಗಾವಿಯಲ್ಲಿ ರೈತರು ಬೆಳೆಯನ್ನು ರಸ್ತೆಗೆ ಎಸೆದರೆ, ದಾವಣಗೆರೆಯಲ್ಲಿ ಟೊಮ್ಯಾಟೋಗೆ ಕೆಜಿಗೆ ಕೇವಲ 1 ರೂ. ಸಿಕ್ಕಿದ್ದರಿಂದ ಕಟಾವು ಮಾಡದೆ ಗಿಡದಲ್ಲೇ ಬಿಟ್ಟಿದ್ದಾರೆ.

ಬೆಳಗಾವಿ/ ದಾವಣಗೆರೆ: ಹಾಕಿದ ಬಂಡವಾಳವೂ ಬಾರದೆ ರೈತರು ತಾವು ಬೆಳೆದ ಕೊತ್ತಂಬರಿ ಸೊಪ್ಪು ಮತ್ತು ಟೊಮ್ಯಾಟೋ ಬೆಳೆಯನ್ನು ರಸ್ತೆ ಬಿಸಾಡಿದ ಘಟನೆಯು ಭಾನುವಾರ ನಡೆದಿದೆ.

ಬೆಳಗಾವಿಯ ರಾಯಭಾಗದಲ್ಲಿ 2 ದಿನಗಳ ಹಿಂದೆ ಕಟ್ಟಿಗೆ 10ರಿಂದ 15 ರು.ವರೆಗೆ ಮಾರಾಟವಾಗುತ್ತಿದ್ದ ಕೊತ್ತಂಬರಿ ಸೊಪ್ಪಿಗೆ ಶನಿವಾರ ಸಂಜೆ 10 ರು.ಗೆ ಮೂರು ಕಟ್ಟುಗಳು ಮಾರಾಟವಾಗುತ್ತಿದ್ದವು. ಆದರೆ ಭಾನುವಾರ 3ರಿಂದ 5 ರು.ಗೆ ಕುಸಿತವಾಗಿದೆ. ಪರಿಣಾಮ ಖರ್ಚು ಮಾಡಿದ್ದ ಮೊತ್ತವೂ ಬಾರದ ಹಿನ್ನೆಲೆ ಅಸಮಾಧಾನದಿಂದ ರೈತರು, ಸೊಪ್ಪನ್ನು ರಸ್ತೆ ಬಿಸಾಡಿದ್ದಾರೆ.

ಟೊಮ್ಯಾಟೋ ಕೇಜಿಗೆ ₹1:

ಮತ್ತೊಂದೆಡೆ ದಾವಣಗೆರೆಯಲ್ಲಿ ಟೊಮ್ಯಾಟೋ ಬೆಲೆ ದಿಢೀರ್‌ ಕುಸಿತವು ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಕೇಜಿಗೆ ಕೇವಲ 1 ರು.ಗೆ ಕುಸಿತದಿಂದಾಗಿ 80 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ಬಂಡವಾಳ ಹೂಡಿದ್ದ ಕಿಂಚಿತ್ತೂ ಮೊತ್ತ ದೊರೆಯದ ಕಾರಣ ಕಟಾವು ಮಾಡದೆ ಗಿಡಗಳಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಕೈಗೆ ಬಂದಿದ್ದ ಟೊಮ್ಯಾಟೋ ಫಸಲು ಮಣ್ಣುಪಾಲಾಗುತ್ತಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ತಾಲೂಕುಗಳಲ್ಲಿ ರೈತರಿಗೆ ದಿಕ್ಕು ತೋಚದಂತಾಗಿದೆ.

PREV
Read more Articles on
click me!

Recommended Stories

2000-2002ನೇ ಸಾಲಿನ ಕನ್ನಡ ಎಂ.ಎ. ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ: ಕುವೆಂಪು ವಿಶ್ವವಿದ್ಯಾಲಯ
ಹಿಂದು ಧರ್ಮೀಯ ನಿಧನಕ್ಕೆ ಮಸೀದಿಯಲ್ಲಿ ಈದ್‌ ನಿಲ್ಲಿಸಿ ಗೌರವ; ಕಾರ್ಯಕ್ರಮ ಮುಂದೂಡಿಕೆ