ರಾಜ್ಯದಲ್ಲೇ ಅತಿ ಹೆಚ್ಚು ರೆಸಾರ್ಟ್, ಹೋಂಸ್ಟೇ ಇರುವ ಜಿಲ್ಲೆ ಅಂದ್ರೆ ಕಾಫಿ ನಾಡು. ಶೇಕಾಡ 99 ರಷ್ಟು ಹೋಂ ಸ್ಟೇ ರೆಸಾರ್ಟ್ ಬುಕಿಂಗ್ ಸೋಲ್ಡ್ ಔಟ್. ಕಾಫಿನಾಡಿಗೆ ಸಾಗರೋಪಾದಿಯಲ್ಲಿ ಆಗಮಿಸಲು ಮುಂಗಡ ಬುಕ್ಕಿಂಗ್. 4ನೇ ಅಲೆಯ ಭೀತಿಯಲ್ಲಿ 800ಕ್ಕೂ ಹೆಚ್ಚು ಹೋಂಸ್ಟೇ, 40ಕ್ಕೂ ಹೆಚ್ಚು ರೆಸಾರ್ಟ್ ಮಾಲೀಕರಲ್ಲಿ ಆತಂಕ ಶುರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.25): ರಾಜ್ಯದಲ್ಲೇ ಅತಿ ಹೆಚ್ಚು ಹೋಂಸ್ಟೇ ಹಾಗೂ ರೆಸಾರ್ಟ್ ಗಳಿರೋ ಜಿಲ್ಲೆ ಅಂದ್ರೆ ಅದು ಕಾಫಿನಾಡು. ಇನ್ನೇನು ಹೊಸ ವರ್ಷದ ಆಗಮನಕ್ಕೆ ಕೆಲವೇ ದಿನಗಳು ಬಾಕಿ ಇರೋ ಬೆನ್ನಲ್ಲೇ ಪ್ರವಾಸಿಗರ ನಾಡಲ್ಲಿ ಕೊರೊನಾ ಆತಂಕ ಶುರುವಾಗಿದೆ. ಪತ್ತೆ ಟಫ್ ರೂಲ್ಸ್ ಜಾರಿಯಾದ್ರೆ ಮುಂದೇನು ಎನ್ನುವ ಆತಂಕ ಹೋಂ ಸ್ಟೇ , ರೆಸಾರ್ಟ್ ಮಾಲೀಕರಿಗೆ ಎದುರಾಗಿದೆ.
ಶೇಕಾಡ 99 ರಷ್ಟು ಹೋಂ ಸ್ಟೇ ರೆಸಾರ್ಟ್ ಬುಕಿಂಗ್ ಸೋಲ್ಡ್ ಔಟ್..!
ಕಳೆದ ಎರಡು ವರ್ಷಗಳಿಂದ ಕೊರೊನಾ ಕರಿಛಾಯೇ ಅಟ್ಟಹಾಸಕ್ಕೆ ರಾಜ್ಯ ಸೇರಿದಂತೆ ಕಾಫಿ ನಾಡು ತತ್ತರಿಸಿ ಹೋಗಿತ್ತು. ಸ್ವಲ್ಪ ದಿನ ಬ್ರೇಕ್ ತೊಗೊಂಡು ಮತ್ತೆ ಹಾವಳಿ ಇಡಲು ಸಜ್ಜಾಗಿರೋ ಕೊರೊನಾ ಮಾರಿ ಕಾಫಿನಾಡಲ್ಲಿ ಆತಂಕ ಸೃಷ್ಠಿ ಮಾಡಿದೆ. ನೂತನ ವರ್ಷದ ಆಗಮನಕ್ಕೆ ಪ್ರವಾಸಿಗರನ್ನು ಸೆಳೆಯಲು ಭರ್ಜರಿಯಾಗಿ ಹೋಂಸ್ಟೇ ಗಳು ಮತ್ತು ರೆಸಾರ್ಟ್ ಗಳು ಸಿದ್ಧತೆ ಗೊಳ್ತಿದ್ರೆ. ಇತ್ತಾ ಕೊರೊನಾ ಭಯ ಸ್ಥಳೀಯರನ್ನು ಕೆಂಗಡಿಸಿದೆ. ಕಾರಣ ಜಿಲ್ಲೆಯಾದ್ಯಂತ ಇರುವ ಬರೋಬ್ಬರಿ 800ಕ್ಕೂ ಹೆಚ್ಚು ಹೋಂ ಸ್ಟೇ ಗಳು ಈಗಾಗಲೇ ಬುಕಿಂಗ್ ಸೊಲ್ದೌಟ್ ಆಗಿದೆ. ನೂರಕ್ಕೆ 99 ರಷ್ಟು ಮುಂಗಡವಾಗಿ ಬುಕಿಂಗ್ ಆಗಿದ್ದು, ವರ್ಷಾಚರಣೆಗೆ ಪ್ರವಾಸಿಗರ ಸಾಗರವೇ ಕಾಫಿನಾಡಿಗೆ ಹರಿದು ಬರುವ ಸಾಧ್ಯತೆ ಇದೆ.
ಕೊರೊನಾ ಕಡಿವಾಣಕ್ಕೆ ಸರ್ಕಾರದ ಮಾರ್ಗಸೂಚಿ ಬಿಡುಗಡೆ ಬೆನ್ನಲ್ಲೇ ದೇಶ ವಿದೇಶಗಳಿಂದ ಆಗಮಿಸೋ ಪ್ರವಾಸಿಗರಿಂದ ಸ್ಥಳೀಯ ಜನರಿಗೆ ಆತಂಕ ಎದುರಾಗಿದೆ. ಇದರಿಂದ ಭಯಪಟ್ಟಿರುವ ಸ್ಥಳೀಯರು ಹೋಂ ಸ್ಟೇ ಗಳಲ್ಲಿ ನಡೆಯೋ ಅಬ್ಬರದ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಿ ಎಚ್ಚರ ವಹಿಸದಿದ್ದರೆ ಅನಾಹುತ ತಪ್ಪಿದ್ದಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.
New Year 2023: ಕರ್ನಾಟಕದ ಪ್ರವಾಸಿತಾಣದ ಲಾಡ್ಜ್‌ಗಳು ಈಗಲೇ ಭರ್ತಿ..!
ಖುಷಿಯಲ್ಲಿರೋ ಹೋಂಸ್ಟೇ ಮಾಲೀಕರಿಗೆ 4ನೇ ಅಲೆ ಭೀತಿ
ಇನ್ನು ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಪ್ರವಾಸಿಗರಿಲ್ಲದೆ ಕಂಗಾಲಾಗಿದ್ದ ಹೋಂಸ್ಟೇ ಮಾಲೀಕರು ಈ ಬಾರಿಯ ವರ್ಷಾಚರಣೆಗೆ ಲಾಭದ ನಿರೀಕ್ಷೆಯಲ್ಲಿದ್ದಾರೆ. ಪ್ರಾಕೃತಿಕ ವಿಕೋಪಗಳಿಂದ ಮೊದಲೇ ಕಂಗ್ರಾಲಾಗಿದ್ದ ಮಾಲೀಕರು ಈ ಬಾರಿ ಭಾರಿ ಪ್ರಮಾಣದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಬುಕಿಂಗ್ ಸೋಲ್ಡ್ ಔಟ್ ಆಗಿರುವ ಪರಿಣಾಮ ಖುಷಿಯಲ್ಲಿರೋ ಹೋಂಸ್ಟೇ ಮಾಲೀಕರು ಮತ್ತೆ ಎಲ್ಲಿ ಕೊರೊನ ರೂಲ್ಸ್ ಗಳು ಬಿಜಿನೆಸ್ಸಿಗೆ ಹೊಡೆತ ನೀಡುತ್ತೋ ಅನ್ನೋ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ನಾವು ಮಾಡಿದ ಖರ್ಚು ಕೈ ಸೇರುತ್ತೋ ಇಲ್ವೋ ಅನ್ನೋ ಅನುಮಾನ ಮಾಲೀಕರಲ್ಲೂ ಮೂಡಿದೆ.
ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು, ಕೋವಿಡ್ ನಿಯಂತ್ರಣಕ್ಕೆ ಮುಂದಾಗುತ್ತಾ ಕೊಡಗು ಜಿಲ್ಲಾಡಳಿತ
ಒಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಒಂದು ಅಂದಾಜಿನ ಪ್ರಕಾರ ಹೊಸ ವರ್ಷ ಚಣೆಯ ಸಂದರ್ಭದಲ್ಲಿ ಕಾಫಿ ನಾಡಿಗೆ ಬರೋಬ್ಬರಿ ಒಂದು ಲಕ್ಷದ ಲಕ್ಷಕ್ಕೂ ಹೆಚ್ಚು ಜನ ಏಕಕಾಲಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವೇಳೆ ಸರ್ಕಾರ ಮಾರ್ಗಸೂಚಿಯ ಮಾರ್ಪಾಡು ಪ್ರವಾಸೋದ್ಯಮದ ಮೇಲೂ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದು ಯಕ್ಷಪ್ರಶ್ನೆ ಜನರಲ್ಲಿ ಮೂಡಿಸಿದೆ.